ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಧನಾತ್ಮಕ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆಯ ಮೇಲೆ ಬೀರಿದ್ದು, ಶುಕ್ರವಾರ (ಮೇ 28) ಸಂವೇದಿ ಸೂಚ್ಯಂಕ 300 ಅಂಕಗಳಷ್ಟು ಏರಿಕೆ ಕಂಡಿದೆ.
ಇದನ್ನೂ ಓದಿ:ಸೆಕ್ಯೂರಿಟಿ ಗಾರ್ಡ್ ನ ಕೈ-ಕಾಲು ಕಟ್ಟಿ ನಾಲ್ಕೂವರೆ ಲಕ್ಷ ರೂ. ಮೌಲ್ಯದ ಮದ್ಯ ಕದ್ದ ಖದೀಮರು
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 306.57 ಅಂಕಗಳ ಏರಿಕೆ ಕಂಡಿದ್ದು, 51, 421.79 ಅಂಕಗಳೊಂದಿಗೆ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 101.15 ಅಂಕಗಳ ಏರಿಕೆಯೊಂದಿಗೆ 15,429ರ ಗಡಿ ದಾಟಿದೆ.
ಸೆನ್ಸೆಕ್ಸ್ ಏರಿಕೆಯಿಂದ ಒಎನ್ ಜಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಎಸ್ ಬಿಐ, ಇಂಡಸ್ ಇಂಡ್ ಬ್ಯಾಂಕ್, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್ ಮತ್ತು ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಸನ್ ಫಾರ್ಮಾ, ಡಾ.ರೆಡ್ಡೀಸ್, ಬಜಾಜ್ ಆಟೋ ಮತ್ತು ನೆಸ್ಲೆ ಇಂಡಿಯಾ ಷೇರು ನಷ್ಟ ಅನುಭವಿಸಿದೆ.
ಗುರುವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 97.70 ಅಂಕ ಏರಿಕೆಯೊಂದಿಗೆ 51,115,22 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು. ನಿಫ್ಟಿ 36.40 ಅಂಕ ಏರಿಕೆಯೊಂದಿಗೆ 15,337.85ರ ಗಡಿ ದಾಟಿತ್ತು.