ನಟ ರಕ್ಷಿತ್ ಶೆಟ್ಟಿ ಅಭಿನಯದ “ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಸುಮಾರು35 ದಿನಗಳಕಾಲ ಎರಡನೇ ಹಂತದ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲ್ರಾನ್ ಮಾಡಿಕೊಂಡಿದೆ.
ಸುಮಾರು 21 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಬಳಿಕ 2ನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ಇದೇ ವೇಳೆ ಕೊರೋನಾ ಎರಡನೇ ಅಲೆಯ ಆತಂಕ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಜೊತೆಗೆ ಲಾಕ್‌ಡೌನ್ ಕೂಡ ಘೋಷಣೆಯಾಗಿದ್ದರಿಂದ, ಚಿತ್ರತಂಡ ತನ್ನ ಎರಡನೇ ಹಂತದ ಚಿತ್ರೀಕರಣವನ್ನು ಕೆಲಕಾಲ ಮುಂದೂಡಿತ್ತು. ಈಗ ಮತ್ತೆ ಆರಂಭವಾಗಿದೆ.
ಇದನ್ನೂ ಓದಿ:ರಾಜ್ ಕುಂದ್ರಾಗೆ ಬಂಧನದಿಂದ ರಕ್ಷಣೆ
ಈ ಹಿಂದೆ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’, “ಕವಲುದಾರಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಹೇಮಂತ್ ರಾವ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ನಡೆದಿರುವ ಚಿತ್ರೀಕರಣದ ಬಗ್ಗೆ ಮಾತನಾಡಿರುವ ನಿರ್ದೇಶಕ ಹೇಮಂತ್ ರಾವ್, “ಈಗಾಗಲೇ ಬೆಂಗಳೂರು ಸುತ್ತಮುತ್ತ 35% ರಷ್ಟು ಭಾಗ ಚಿತ್ರೀಕರಣ ಮಾಡಿದ್ದೇವೆ. ಸಾಕಷ್ಟು ಮುಂಜಾಗರೂಕತೆ ವಹಿಸಿ, ನಿಯಮಗಳನ್ನು ಪಾಲಿಸಿ ಮೊದಲ ಹಂತದ ಶೂಟಿಂಗ್ ಮಾಡಿದ್ದೇವೆ. ಸದ್ಯಕೋವಿಡ್ ಭಯ ಮತ್ತು ಲಾಕ್‌ಡೌನ್ ನಿಂದ ಶೂಟಿಂಗ್ ನಿಲ್ಲಿಸಿದ್ದೆವು. ಈಗ ಮತ್ತೆ ಆರಂಭವಾಗಿದೆ’ ಎನ್ನುತ್ತಾರೆ.
ಇನ್ನು “ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ರುಕ್ಮಿಣಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.