Advertisement

ಆ್ಯಮಿ ಜಾಕ್ಸನ್‌ಗೆ ರಕ್ಷಿತಾ ಡಬ್ಬಿಂಗ್‌

11:10 AM May 22, 2018 | |

ಸದ್ಯ “ದಿ ವಿಲನ್‌’ ಚಿತ್ರಕ್ಕೆ ಡಬ್ಬಿಂಗ್‌ ನಡೆಯುತ್ತಿದೆ. ಚಿತ್ರದ ನಾಯಕಿಯಾಗಿ ನಟಿಸಿರುವ ಆ್ಯಮಿ ಜಾಕ್ಸನ್‌ಗೆ ಯಾರಿಂದ ಡಬ್ಬಿಂಗ್‌ ಮಾಡಿಸೋದೆಂದು ಪ್ರೇಮ್‌ ಯೋಚಿಸುತ್ತಿದ್ದಾಗ ಅವರ ತಲೆಗೆ ಬಂದ ಹೆಸರು ರಕ್ಷಿತಾ ಅವರದ್ದು. ರಕ್ಷಿತಾ ಅವರನ್ನು ಪ್ರೇಮ್‌ ಈಗ ಡಬ್ಬಿಂಗ್‌ ಮಾಡಲು ಒಪ್ಪಿಸಿದ್ದಾರೆ.

Advertisement

ಆ್ಯಮಿ ಜಾಕ್ಸನ್‌ ಪಾತ್ರಕ್ಕೆ ರಕ್ಷಿತಾ ಡಬ್ಬಿಂಗ್‌ ಮಾಡುತ್ತಿದ್ದಾರೆ. ರಕ್ಷಿತಾ ತಮ್ಮ ಸಿನಿಮಾಗಳಿಗೆ ತಾವೇ ಡಬ್‌ ಮಾಡುತ್ತಿದ್ದರು. ಸಿನಿಮಾ ಮಾಡುವುದನ್ನು ನಿಲ್ಲಿಸಿದ ನಂತರ ಹಿರಿತೆರೆಯಲ್ಲಿ ಅವರ ಧ್ವನಿಯನ್ನು ಅಭಿಮಾನಿಗಳು ಮಿಸ್‌ ಮಾಡಿಕೊಳ್ಳುತ್ತಿದ್ದರು. ಈಗ “ದಿ ವಿಲನ್‌’ ಮೂಲಕ ಮತ್ತೆ ಅವರ ಧ್ವನಿಯನ್ನು ಪಾತ್ರವೊಂದರ ಮೂಲಕ ಕೇಳುವಂತಾಗಿದೆ.

ಅಷ್ಟಕ್ಕೂ ರಕ್ಷಿತಾ ಅವರಿಂದ ಡಬ್ಬಿಂಗ್‌ ಮಾಡಿಸಿದ ಉದ್ದೇಶವೇನು ಎಂದು ಕೇಳಬಹುದು. ಪ್ರೇಮ್‌ ಹೇಳುವಂತೆ ರಕ್ಷಿತಾ ಅವರ ಧ್ವನಿ ಆ್ಯಮಿ ಜಾಕ್ಸನ್‌ ಪಾತ್ರಕ್ಕೆ ಚೆನ್ನಾಗಿ ಹೊಂದುತ್ತದೆಯಂತೆ. ಜೊತೆಗೆ ಇಂಗ್ಲೀಷ್‌ ಮಿಶ್ರಿತ ಕನ್ನಡ ಮಾತನಾಡುವ ಪಾತ್ರವಾದ್ದರಿಂದ ರಕ್ಷಿತಾ ಅವರಿಂದ ಡಬ್ಬಿಂಗ್‌ ಮಾಡಿಸಲಾಗಿದೆಯಂತೆ. 

Advertisement

Udayavani is now on Telegram. Click here to join our channel and stay updated with the latest news.

Next