Advertisement

ಓಟಿಟಿ ವೇದಿಕೆಯಲ್ಲೂ ಪ್ರಸಾರವಾಗಲಿದೆ ರಕ್ಷಿತ್ ಶೆಟ್ಟಿ ”ಚಾರ್ಲಿ 777″

04:05 PM Jul 08, 2022 | Team Udayavani |

ಬೆಂಗಳೂರು: ನಾಯಿಯೊಂದರ ಮೂಲಕ ಮೋಡಿ ಮಾಡಿದ್ದ ರಕ್ಷಿತ್ ಶೆಟ್ಟಿ ಅಭಿನಯದ ಯಶಸ್ವಿ ಚಿತ್ರ ”ಚಾರ್ಲಿ 777″ ಓಟಿಟಿ ವೇದಿಕೆಯಲ್ಲಿ ವೂಟ್(VOOT) ನಲ್ಲಿ ಬಿಡುಗಡೆಯಾಗಲಿದೆ. ಜುಲೈ 29 ರಂದು ಓಟಿಟಿ ಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಯಾಗಲಿದೆ.

Advertisement

ಕಿರಣ್‌ರಾಜ್ ಕೆ ಕಥೆ ಬರೆದು ಚೊಚ್ಚಲ ನಿರ್ದೇಶನ ಮಾಡಿದ ‘ಚಾರ್ಲಿ 777’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸನ್ನು ಕಂಡಿದೆ. ಇತ್ತೀಚೆಗೆ, ಚಿತ್ರದ ವಾಣಿಜ್ಯ ಯಶಸ್ಸನ್ನು ಆಚರಿಸಲು ನಿರ್ಮಾಪಕರು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು.

ಚಿತ್ರ ಒಟ್ಟು ಕಲೆಕ್ಷನ್‌ಗಳಲ್ಲಿ ಸುಮಾರು 100 ಕೋಟಿ ರೂ.  ಗೂ ಹೆಚ್ಚು ಗಳಿಸಿದೆ ಎಂದು ರಕ್ಷಿತ್ ಶೆಟ್ಟಿ ಬಹಿರಂಗಪಡಿಸಿದರು. ” ಲಾಭದ ಸುಮಾರು ಐದು ಪ್ರತಿಶತವನ್ನು ದೇಶಾದ್ಯಂತ ನಾಯಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುವ ಎನ್‌ಜಿಒಗಳಿಗೆ ದಾನ ಮಾಡಲಾಗುವುದು. ಸುಮಾರು 10 ಪ್ರತಿಶತ, ಸುಮಾರು 7-10 ಕೋಟಿ ರೂಪಾಯಿಗಳನ್ನು ಈ ಚಿತ್ರದಲ್ಲಿ ಕೆಲಸ ಮಾಡಿದ 200 ಸಿಬ್ಬಂದಿಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದರು.

‘ಚಾರ್ಲಿ 777’ ಕರ್ನಾಟಕದಲ್ಲಿ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿದೆ. ಚಿತ್ರ 50 ದಿನಗಳನ್ನು ಥಿಯೇಟರ್‌ಗಳಲ್ಲಿ ಪೂರೈಸಲಿದೆ ಎಂಬ ವಿಶ್ವಾಸದಲ್ಲಿ ರಕ್ಷಿತ್ ಶೆಟ್ಟಿ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next