Advertisement
ಉದ್ಯಮಿ ಆದಿಲ್ ಹಾಗೂ ರಾಖಿ ಸಾವಂತ್ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಆ ಬಳಿಕ ಇಬ್ಬರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ರಾಖಿ ಸಾವಂತ್ ಪತಿ ಆದಿಲ್ ತನ್ನ ಮೇಲೆ ದೌರ್ಜನ್ಯವೆಸಗಿದ್ದಾರೆ. ಕಿರುಕುಳ ನೀಡಿದ್ದಾರೆ ಆರೋಪಿಸಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆದಿಲ್ ರನ್ನು ಪೊಲೀಸರು ಬಂಧಿಸಿದ್ದರು.
Related Articles
Advertisement
ನಾನು ಜನರಿಗೆ ತೋರಿಸಲು ಬಯಸುತ್ತೇನೆ ಆದರೆ ಅದನ್ನು ತೋರಿಸಲು ಆಗುತ್ತಿಲ್ಲ. ನೀವು ಆತನ ನೀಚ ಕೃತ್ಯ ನೋಡಿದರೆ ಚಪ್ಪಲಿಯನ್ನು ಹೊಡೆಯುತ್ತೀರಿ. ನನ್ನ ನಗ್ನ ವೀಡಿಯೊಗಳು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ 47 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿವೆ ಎಂದಿದ್ದಾರೆ.
“ನಾನು ಬಾತ್ ರೂಮ್ ನಲ್ಲಿದೆ. ಅವನು ಅಲ್ಲಿಂದ ವಿಡಿಯೋಗಳನ್ನು ಮಾಡುತ್ತಿದ್ದ. ನಾನು ಅವನ ಹೆಂಡತಿ ಆದರೆ ಅವನು ನನ್ನ ಮೇಲೆ ಮನೆಯಲ್ಲೇ ಅತ್ಯಾಚಾರ ಮಾಡುತ್ತಿದ್ದ” ಎಂದಿದ್ದಾರೆ.
ಇದನ್ನು ಯಾಕೆ ನೀವು ಸಹಿಸಕೊಳ್ಳುತ್ತಿದ್ದೀರಿ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು “ನನ್ನ ವಿಡಿಯೋ ಅವನ ಬಳಿಯಿತ್ತು. ವಿಡಿಯೋ ವೈರಲ್ ಆದ ಬಳಿಕ, ನನ್ನ ನಗ್ನ ವಿಡಿಯೋ ಎಲ್ಲಾ ಜಗತ್ತು ನೋಡಿದ ಬಳಿಕ ನಾನು ಎಲ್ಲಿಗೆ ಹೋಗಲಿ, ಯಾವ ಸಮಾಜದಲ್ಲಿರಲಿ. ಯಾರಿಗೆ ಮುಖ ತೋರಿಸಲಿ, ಇದಾದ ಬಳಿಕ ನಾನು ವಿಷ ತೆಗೆದುಕೊಂಡು ಸಾಯಲೇ? ನಾನು ಸಾಮಾನ್ಯ ಹುಡುಗಿ ಅಲ್ಲ ಭಾರತದ ಸೆಲೆಬ್ರಿಟಿ, ಒಂದು ಬ್ರ್ಯಾಂಡ್, ಒಂದು ವರ್ಷದ ಒಳಗೆ ನನಗೆ ತಲಾಖ್ ಕೊಟ್ಟ” ಎಂದು ಮಾಜಿ ಪತಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ರಾಖಿ ಸಾವಂತ್ ವಿರುದ್ಧ ಆದಿಲ್ ಆರೋಪಗಳನ್ನು ಮಾಡಿ, ರಾಖಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ ಎಂದು ಹೇಳಿದ್ದಾರೆ.