ಹ್ಯಾಲಿಫ್ಯಾಕ್ಸ್:ಕೆನಡಾದ ನೋವ ಸ್ಕೋಶಿಯ ಕನ್ನಡ ಸಂಘ, ಹ್ಯಾಲಿಫ್ಯಾಕ್ಸ್‌ನಲ್ಲಿ ತಮ್ಮ ಎರಡನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಹಬ್ಬ “ನವೋತ್ಸವ’ ವನ್ನು 2023ರ ನ. 26ರಂದು, ಹ್ಯಾಲಿಫ್ಯಾಕ್ಸ್‌ನ ಸೈಂಟ್ ಮೇರಿಸ್ ಬೋಟ್ ಕ್ಲಬ್‌ನಲ್ಲಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಕುವೆಂಪು ಅವರ “ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’ ಸಾಲುಗಳಿಗೆ ಜೀವ ತುಂಬುವ ಪ್ರಯತ್ನವನ್ನು ಹ್ಯಾಲಿಫ್ಯಾಕ್ಸ್‌ನಲ್ಲಿ ವಾಸವಿರುವ ನೂರಾರು ಕನ್ನಡಿಗರು ಮಾಡಿದರು.
ಈ ಸಮಾರಂಭದಲ್ಲಿ ಹ್ಯಾಲಿಫ್ಯಾಕ್ಸ್‌ನ ಎಂಪಿ ಆ್ಯಂಡಿ ಫಿಲ್ಮೋರೆ, ಕ್ಲಾಯೊràನ್ ಪಾರ್ಕ್‌ನ ಎಂಎಲ್‌ಎ ರಫಾಹ್ ಡಿಕೋಸ್ಟಾನೋ ಮತ್ತು ಅರಂದಲೇಯ ಎಂಎಲ್‌ಎ ಅಲಿ ದುವಾಲೆ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಮಾರಂಭವು ರಾಯಲ್ ಬ್ಯಾಂಕ್ ಆಫ್ ಕೆನಡಾ ಅವರ ಮುಖ್ಯ ಪ್ರಾಯೋಜಕತೆಯೊಂದಿಗೆ ಆಯೋಜಿಸಲಾಗಿತ್ತು.
ಈ ಸಮಾರಂಭದಲ್ಲಿ ಕನ್ನಡದ ಕಲೆ, ಸೊಬಗನ್ನು ಸಾರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಲ್ಲ ವಯೋಮಿತಿಯ ಕನ್ನಡಿಗರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದರು. ನೋವ ಸ್ಕೋಶಿಯ ಕನ್ನಡ ಸಂಘದ ಸ್ವಯಂ ಸೇವಕರ ತಂಡ ಈ ಕಾರ್ಯಕ್ರಮದ ಬೆನ್ನೆಲುಬಾಗಿ ನಿಂತಿದ್ದರು.
ವರದಿ: ಜಾನ್‌ಪಾಲ್