Advertisement

ರಾಜ್ಯೋತ್ಸವ ಪ್ರಶಸ್ತಿಗೆ ನೃತ್ಯ ಕ್ಷೇತ್ರ ಪರಿಗಣಿಸಲು ಆಗ್ರಹ

11:09 PM Oct 29, 2019 | Lakshmi GovindaRaju |

ಬೆಂಗಳೂರು: ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ನೃತ್ಯ ವಿಭಾಗವನ್ನು ಪರಿಗಣಿಸದೇ ಇರುವುದು ಬೇಸರ ಮೂಡಿಸಿದೆ ಎಂದು ಹಿರಿಯ ನೃತ್ಯ (ಕುಚಿಪುಡಿ) ಕಲಾವಿದೆ ಡಾ.ವೀಣಾಮೂರ್ತಿ ವಿಜಯ್‌ ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನೃತ್ಯ ಕ್ಷೇತ್ರದಲ್ಲಿ ಹಲವು ಸಾಧಕರಿದ್ದಾರೆ. ದೇಶ-ವಿದೇಶಗಳಲ್ಲಿ ನಾಡಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.

Advertisement

ಇಂತಹ ಕಲಾವಿದರನ್ನು ಗೌರವಿಸುವ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಬೇಕಾಗಿತ್ತು. ಕರ್ನಾಟಕ ನೃತ್ಯಕಲಾ ಪರಿಷತ್ತಿನ ಅಧ್ಯಕ್ಷ ಸಾಯಿ ವೆಂಕಟೇಶ್‌, ನೃತ್ಯಗುರು ವಸಂತಲಕ್ಷ್ಮೀ ಅವರಂತಹ ಹಿರಿಯ ಕಲಾವಿದರಿದ್ದಾರೆ. ಅಂತವರನ್ನು ಮುಂದಿನ ದಿನಗಳಲ್ಲಾ ದರೂ ಸರ್ಕಾರ ಗುರುತಿಸಲಿ ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next