Advertisement

ಕಾರ್ಯಕರ್ತರಿಗೆ ರಾಜ್ಯಸಭೆ ಟಿಕೆಟ್‌ ಬಿಜೆಪಿಯಲ್ಲಿ ಮಾತ್ರ ಸಾಧ್ಯ

10:45 AM Jun 11, 2020 | Suhan S |

ಹುಬ್ಬಳ್ಳಿ: ಪ್ರಧಾನಿ ಮೋದಿಯವರು ಹೇಳುವಂತೆ ಕಳೆದ ವರ್ಷ ಮೇ 30ರಂದು ರಾಷ್ಟ್ರದ ಇತಿಹಾಸದಲ್ಲಿ ಮಹತ್ವದ ದಿನವಾಗಿದೆ. ದೇಶದ ಜನತೆ ಮೊದಲ ಬಾರಿಗೆ ಒಂದು ಅವಧಿ ಮುಗಿಸಿದ ಸರಕಾರವನ್ನು ಮತ್ತೂಮ್ಮೆ ಪ್ರಚಂಡ ಬಹುಮತದಿಂದ ದ್ವಿತೀಯ ಬಾರಿ ಅಧಿಕಾರಕ್ಕೆ ತಂದ ಕ್ಷಣ. ಈ ಐತಿಹಾಸಿಕ ಕ್ಷಣಕ್ಕೆ ಕಾರಣರಾದ ದೇಶದ 130 ಕೋಟಿ ಜನರಿಗೆ ಪ್ರಧಾನಿ ಮೋದಿಯವರು ನಮನ ಹೇಳಿರುವುದು ಅರ್ಥಪೂರ್ಣವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಬುಧವಾರ ನವದೆಹಲಿಯಿಂದ ಧಾರವಾಡ ಲೋಕಸಭಾ ವ್ಯಾಪ್ತಿಯ ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ವರ್ಚುವಲ್‌ ಸಂವಾದ ನಡೆಸಿ ಮಾತನಾಡಿದರು. ಬಿಜೆಪಿಯಲ್ಲಿ ಕಟ್ಟಕಡೆಯ ಕಾರ್ಯಕರ್ತನನ್ನು ಗುರುತಿಸಿ ಅವರಿಗೆ ರಾಜ್ಯಸಭಾ ಟಿಕೆಟ್‌ ಕೊಡುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆ ಗಟ್ಟಿಗೊಳಿಸಿದ್ದೇವೆ. ಇಂತಹ ತೀರ್ಮಾನಗಳು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಬಿಜೆಪಿ ಕೇಡರ್‌ ಬೇಸ್‌ ಪಕ್ಷ ಎನ್ನುವುದನ್ನು ತೋರಿಸಿದ್ದೇವೆ ಎಂದರು.

2014ರಿಂದ 2019ರ ಮೋದಿ ಸರಕಾರದ ಪ್ರಥಮ ಅವಧಿಯಲ್ಲಿ ದೇಶದ ಪ್ರತಿಷ್ಠೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಜ್ವಲವಾಯಿತು. ದೇಶದ ಬಡಜನತೆಯ ಪ್ರತಿಷ್ಠೆ ಹಾಗೂ ಗೌರವಗಳು ಇಮ್ಮಡಿಗೊಂಡವು. ವೈರಿ ದೇಶದ ವಿರುದ್ಧ ಮಾಡಿದ ಸರ್ಜಿಕಲ್‌ ದಾಳಿಯಿಂದ ಶೌರ್ಯ ಪ್ರದರ್ಶಿಸಿ “ಧೀರ ಭಾರತ’ವಾಯಿತು. ಬಾರಾಕೋಟ ಮೇಲಿನ ವಾಯುದಾಳಿ ವೈರಿ ರಾಷ್ಟ್ರ ನಲುಗುವಂತಾಯಿತು. ಒನ್‌ ರ್‍ಯಾಂಕ್‌ ಒನ್‌ ಪೆನಶನ್‌ ಯೋಜನೆಯಿಂದ ದೇಶದ ಸೈನ್ಯಕ್ಕೆ ಗೌರವ ದೊರೆಯಿತು. ಒಂದು ರಾಷ್ಟ್ರ ಒಂದೇ ಕರ, ದೇಶದ ರೈತನಿಗೆ ಸುಧಾರಿತ ಬೆಂಬಲ ಬೆಲೆ ಮುಂತಾದ ಕ್ರಮಗಳು ಜೈ ಜವಾನ್‌, ಜೈ ಕಿಸಾನ್‌ ಘೋಷಣೆಗೆ ಮೋದಿ ಸರಕಾರದಿಂದ ಹೊಸ ಅರ್ಥ ದೊರೆಯಿತು ಎಂದು ಹೇಳಿದರು.

ಕೋವಿಡ್ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಸ್ಥಿತಿ ಸುಧಾರಣೆಗೆ ಮೋದಿಯವರು ಇತ್ತೀಚೆಗೆ ಘೋಷಿಸಿದ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್‌ ವಾಣಿಜ್ಯ ಹಾಗೂ ಉದ್ದಿಮೆ ಕ್ಷೇತ್ರಕ್ಕೆ ಸಂಜೀವಿನಿಯಾಗಿ ಪರಿಣಮಿಸಿದೆ. ಈ ಕ್ರಮದಿಂದ ಕೃಷಿಕರು, ಮಹಿಳೆಯರು ಇತ್ಯಾದಿ ದೇಶ ನಿರ್ಮಾಣದಲ್ಲಿ ತೊಡಗಿದ ಸಮೂಹಕ್ಕೆ ಚೈತನ್ಯ ನೀಡಿದೆ.

ಯುಪಿಎ ಸರಕಾರದ ಹತ್ತು ವರ್ಷಗಳ ಅವಧಿಯಲ್ಲಿ ಭಾರತ ಕಂಡು ಕೇಳರಿಯದ ರೀತಿ ಭಯೋತ್ಪಾದಕ ದಾಳಿಗಳನ್ನು ಎದುರಿಸಿತು. ಆದರೆ, ಮೋದಿ ಸರಕಾರದ ಅವಧಿಯ 2014ರಿಂದ ಈಚೆಗೆ ಒಂದೂ ಭಯೋತ್ಪಾದನಾ ಚಟುವಟಿಕೆ ನಡೆದಿರುವುದಿಲ್ಲವೆಂಬುದು ಗಮನಾರ್ಹ ಸಂಗತಿ. ಕಾಶ್ಮೀರದಲ್ಲಿ ಆರ್ಟಿಕಲ್‌ 370 ತೆಗೆದ ನಂತರ ಶಾಂತಿ ನೆಲೆಸುವಂತಾಯಿತು. ಕೋವಿಡ್  ನಿರ್ವಹಣೆ ವಿಚಾರದಲ್ಲಿ ವಿಶ್ವವೇ ಮೆಚ್ಚುಗೆ ಸೂಚಿಸುತ್ತಿದ್ದರೆ, ಕಾಂಗ್ರೆಸ್‌ ವಲಸೆ ಕಾರ್ಮಿಕರ ವಿಚಾರದಲ್ಲಿ ತುತ್ಛ ರಾಜಕಾರಣ ಮಾಡುತ್ತಿದೆ. ಜನಶಕ್ತಿ ಮತ್ತು ರಾಷ್ಟ್ರ ಶಕ್ತಿ ಜಾಗೃತಗೊಳಿಸಿ ಭಾರತವನ್ನು ವಿಶ್ವಗುರುವನ್ನಾಗಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಈ ದಿಶೆಯಲ್ಲಿ ಎಲ್ಲರೂ ಕಾರ್ಯೋನ್ಮುಖರಾಗೋಣ ಎಂದು ಕರೆಕೊಟ್ಟರು. ಇದೇ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ಅಹವಾಲು ಆಲಿಸಿ ಸೂಕ್ತ ಪರಿಹಾರ ಸೂಚಿಸಿದರು ಎಂದು ಸಚಿವರ ಕಚೇರಿ ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next