Advertisement

ಮೋದಿ ನೇತೃತ್ವದಲ್ಲಿ ಪರಂಪರೆಯ ಪುನರುತ್ಥಾನ: ರಾಜ್ಯಸಭಾ ಸದಸ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ

08:53 PM Feb 09, 2023 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯ ಪುನರುತ್ಥಾನವಾಗುತ್ತಿದೆ. ಈ ಬದಲಾವಣೆಗಳು ಭಾರತೀಯರಿಗೆ ಆಶ್ಚರ್ಯ ಮೂಡಿಸಿದ್ದು ಮಾತ್ರವಲ್ಲ, ಗರಿಮೆಯನ್ನೂ ಹೆಚ್ಚಿಸಿವೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಪ್ರಶಂಸಿಸಿದ್ದಾರೆ.

Advertisement

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ನೀಡುತ್ತಿರುವ ಪ್ರೋತ್ಸಾಹ ಮಹತ್ತರವಾದದ್ದು. ಅಂಥ ಕಾರ್ಯಗಳನ್ನು ಕಂಡು ಬಹಳ ಸಂತಸವಾಗಿದೆ ಎಂದಿದ್ದಾರೆ. ಇದೇ ವೇಳೆ, ತಾವು ಕಾಶಿಗೆ ಭೇಟಿ ನೀಡಿದ್ದ ವಿಚಾರವನ್ನು ಭಾಷಣದಲ್ಲಿ ಪ್ರಸ್ತಾಪಿಸಿದ ಅವರು, “ಈ ಹಿಂದೆಯೂ ಕಾಶಿಗೆ ತೆರಳಿದ್ದೆ. ಆದರೆ, ಈ ಬಾರಿಯ ಬದಲಾವಣೆಗಳು ನನ್ನ ಕಣ್ಣನ್ನು ನಾನೆ ನಂಬಲಾಗದಂತೆ ಮಾಡಿದೆ. ಧರ್ಮಸ್ಥಳದಲ್ಲಿನ ಅಭಿವೃದ್ಧಿಗಳಿಗೆ ಹೋಲಿಕೆಯಾಗುವಂಥ ಸಾಕಷ್ಟು ಬದಲಾವಣೆಗಳನ್ನು ನಾನು ಕಾಶಿಯಲ್ಲಿ ಗಮನಿಸಿದೆ. ಕೇದಾರನಾಥ, ಮಹಾಕಾಲ ಮಹಾಲೋಕ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಬದಲಾವಣೆಗಳು ನಮ್ಮ ಪರಂಪರೆಯನ್ನು ನಿರ್ಲಕ್ಷಿéಸಲಾಗಿಲ್ಲ ಎನ್ನುವ ಸಂದೇಶವನ್ನು ಮತ್ತೆ ಪುನರುಚ್ಚರಿಸುವುದರ ಜತೆಗೆ ಅಲ್ಲಿನ ಬದಲಾವಣೆಗಳು ದೇಶದ ಜನರಿಗೆ ಆಶ್ಚರ್ಯ ಮಾತ್ರವಲ್ಲ, ಹೆಮ್ಮೆಯನ್ನೂ ಮೂಡಿಸಿವೆ’ ಎಂದು ಹೇಳಿದ್ದಾರೆ.

ಯುವಜನರ ಹೆಮ್ಮೆ :

ನಮ್ಮ ದೇಶದ ಯುವಜನತೆ ಇಂದು ಆಧುನಿಕತೆಗೆ ಒಗ್ಗಿಕೊಂಡಿದ್ದರೂ, ನಮ್ಮ ಪರಂಪರೆ ಹಾಗೂ ಅಧ್ಯಾತ್ಮದ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ.ಧಾರ್ಮಿಕ ಕ್ಷೇತ್ರಗಳಲ್ಲಿನ ಇಂಥ ಬದಲಾವಣೆ ಯುವಜನರ ಮನಸ್ಸಿನಲ್ಲಿ ಗೌರವವನ್ನು ಹೆಚ್ಚಿಸುತ್ತದೆ. ಸರ್ಕಾರ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರಗಳ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಶ್ಲಾಘನೀಯ ಮತ್ತು ಅತ್ಯಗತ್ಯ ಎಂದು ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next