Advertisement

Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ

03:24 AM Jan 12, 2025 | Team Udayavani |

ಬೆಳ್ತಂಗಡಿ: ಜನಜಾಗೃತಿ ವೇದಿಕೆ ನೂರಾರು ಕವಲಿಗಳಿರುವ ವೃಕ್ಷದಂತೆ. ಇದಕ್ಕೆ ಬೇಕಾಗುವ ಪೋಷಕಾಂಶವನ್ನು ಕ್ಷೇತ್ರದಿಂದ ನೀಡುತ್ತಿದ್ದು, ಪ್ರತಿಯೊಂದು ಕವಲು ಕೂಡ ರಾಜ್ಯಾದ್ಯಂತ ಉತ್ತಮ ಫಲ ನೀಡುತ್ತಿದೆ ಎಂದು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಅಧ್ಯಕ್ಷೆ ಡಾ.ಹೇಮಾವತಿ ವೀ.ಹೆಗ್ಗಡೆಯವರು ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಸಂಯುಕ್ತ ಆಶ್ರಯದಲ್ಲಿ ಜ. 10ರಂದು ಇಲ್ಲಿನ ಅಮೃತವರ್ಷಿಣಿ ಸಭಾಭವನದಲ್ಲಿ ಜರಗಿದ ಜನಜಾಗೃತಿ ವೇದಿಕೆಯ ಸರ್ವ ಸದಸ್ಯರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೋವನ್ನು ಸ್ವೀಕರಿಸುವ ಮತ್ತು ತಡೆದುಕೊಳ್ಳುವ ಶಕ್ತಿ ಇರುವುದು ಹೆಣ್ಣಿಗೆ ಮಾತ್ರ. ಅವರ ಸಮಯ, ಶ್ರಮದಾನದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ವ್ಯಕ್ತಿಯನ್ನು ಮದ್ಯವು ಹತೋಟಿಯಲ್ಲಿ ಇರಿಸುವುದರಿಂದ ಮದ್ಯವರ್ಜನ ಬಹಳ ಕಷ್ಟವಾದುದು.ಮದ್ಯಪಾನದಿಂದ ವ್ಯಸನಿಗಳ ನೈಜಸ್ವಭಾವ ಮರೆಯಾಗಿ, ಸಾರ್ವಭೌಮತ್ವವನ್ನು ಸಾ ಧಿಸುತ್ತದೆ. ಹಾಗಾಗಿ ಜನಜಾಗೃತಿ ವೇದಿಕೆಗೆ ಸವಾಲು ಗಳು ಹೆಚ್ಚಿವೆ ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟಿ ಶ್ರದ್ಧಾ ಅಮಿತ್‌ ಅವರು, ಸತೀಶ್‌ ಬಳೆಗಾರ್‌ ಅವರ “ಕತ್ತಲ ಕುಡುಕರ ಬೆಳಕಿನ ಮಕ್ಕಳು’ (ವ್ಯಸನಿಗಳ ಮಕ್ಕಳ ಭಾವನೆ ಮತ್ತು ಬವಣೆಗಳ ಕುರಿತಾದ) ಕೃತಿಯನ್ನು ಬಿಡುಗಡೆ ಮಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ಸಿಇಒ ಅನಿಲ್‌ ಕುಮಾರ್‌ ಮಾತನಾಡಿ, ಜನಜಾಗೃತಿ ಎಂಬುದು ದೊಡ್ಡ ಕುಟುಂಬ. ಇದು ಮುಂದಿನ ಕಾರ್ಯಕ್ರಮಗಳಿಗೆ ಆದರ್ಶ ಎಂದು ಹೇಳಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯ ಸಂಘಟನ ಅಧ್ಯಕ್ಷ ರಾಜಣ್ಣ ಮೂ. ಕೊರವಿ, ಅ. ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟಿಗಳಾದ ಡಾ| ಪಿ.ವಿ. ಭಂಡಾರಿ, ಡಾ| ಶ್ರೀನಿವಾಸ್‌ ಭಟ್‌, ಹಣಕಾಸು ವಿಭಾಗದ ಪ್ರಾದೇ ಶಿಕ ನಿರ್ದೇಶಕ ಶಾಂತಾರಾಮ ಪೈ, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್‌ ಉಪಸ್ಥಿತರಿದ್ದರು.

Advertisement

ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ ಕಾರ್ಯದರ್ಶಿ ವಿವೇಕ್‌ ವಿ.ಪಾಯಸ್‌ ಪ್ರಸ್ತಾವಿಸಿ, ಸ್ವಾಗತಿಸಿದರು. ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌  ಟ್ರಸ್ಟಿ ವಿ.ರಾಮಸ್ವಾಮಿ ವಂದಿಸಿದರು. ಗಣೇಶ್‌ ಆಚಾರ್ಯ, ಭಾಸ್ಕರ್‌, ನಾಗರಾಜ್‌ ನಿರೂಪಿಸಿದರು. 2025-27ರ ವರೆಗೆ ನೂತನ ರಾಜ್ಯ ಸಂಘಟನ ಅಧ್ಯಕ್ಷರಾಗಿ ನಟರಾಜ್‌ ಬಾದಾಮಿ ವಿಜಯನಗರ ಅವರನ್ನು ಆಯ್ಕೆ ಮಡಲಾಯಿತು. 2022-24ರ ಅವ ಧಿಗೆ ವೇದಿಕೆಯ ರಾಜ್ಯ ಸಂಘಟನ ಅಧ್ಯಕ್ಷರಾಗಿ ಸೇವೆಗೈದ ರಾಜಣ್ಣ ಮೂ. ಕೊರವಿ ಅವರನ್ನು ಡಾ| ಹೆಗ್ಗಡೆ ಸಮ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.