ಹೊಸದಿಲ್ಲಿ: ಸಂಸತ್‌ನ ಬಜೆಟ್ ಅಧಿವೇಶನ ನಿರೀಕ್ಷೆಯಂತೆಯೇ ಗುರುವಾರವೇ ಮುಕ್ತಾ ಯವಾಗಿದೆ. ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಕ್ರಮವಾಗಿ ಸ್ಪೀಕರ್ ಮತ್ತು ಸಭಾಪತಿ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡುವ ಘೋಷಣೆ ಮಾಡಿದ್ದಾರೆ. ಹೀಗಾಗಿ ಜ.31ರಂದು ಶುರುವಾಗಿದ್ದ ಅಧಿವೇಶನ 2 ತಿಂಗಳ ಬಳಿಕ ಮುಕ್ತಾಯವಾಗಿದೆ.
ಲೋಕಸಭೆಯಲ್ಲಿ ಹೆಚ್ಚಾ ಕಡಿಮೆ ಕಲಾಪಗಳು ಸುಗಮವಾಗಿ ನಡೆದಿದ್ದರೂ, ರಾಜ್ಯಸಭೆಯಲ್ಲಿ ಮಾತ್ರ ತೈಲೋತ್ಪನ್ನಗಳ ಬೆಲೆ ಏರಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸರಕಾರ ಮತ್ತು ವಿಪಕ್ಷಗಳ ನಡುವೆ ಕೋಲಾಹಲ ಉಂಟಾಗಿ ಕಲಾಪಕ್ಕೆ ಅಡ್ಡಿ ಉಂಟಾಗಿತ್ತು.
ಕೊನೆಯ ದಿನದ ಕಲಾಪದ ವೇಳೆ ಬಿಜೆಪಿಯ ಕಿರಿಟ್ ಸೋಮಯ್ಯ ಮತ್ತು ಅವರ ಪುತ್ರನ ವಿರುದ್ಧ ಕೇಸು ದಾಖಲಾ ಗಿರುವ ವಿಚಾರ ರಾಜ್ಯಸಭೆಯಲ್ಲಿ ಪ್ರಸ್ತಾವವಾಯಿತು. ವಿಪಕ್ಷ ನಾಯಕ ಮಲ್ಲಿ ಕಾರ್ಜುನ ಖರ್ಗೆ, ಟಿಎಂಸಿಯ ಡೆರಿಕ್ ಒಬ್ರಿಯಾನ್ ಮತ್ತಿತರರು ಆಕ್ರೋಶ ವ್ಯಕ್ತಪಡಿ ಸಿ ದರು. ಈ ಸಂದರ್ಭದಲ್ಲಿ ಸಭಾಪತಿ ಎಂ.ವೆಂಕಯ್ಯ ನಾಯ್ಡು ಮತ್ತು ವಿಪಕ್ಷಗಳ ಮುಖಂಡರ ನಡುವೆ ವಾಗ್ವಾದ ನಡೆಯಿತು. ತೈಲೋತ್ಪನ್ನಗಳು ಮತ್ತು ಅಗತ್ಯ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿ, ಸದನದ ಮುಂಗಟ್ಟೆಗೆ ಧಾವಿಸಿ ವಿಪಕ್ಷಗಳ ಸದಸ್ಯರು ಆಗಮಿಸಿ ದರು. ಈ ಸಂದರ್ಭದಲ್ಲಿ ಸಭಾಪತಿ ವೆಂಕಯ್ಯ ನಾಯ್ಡು ಕಲಾಪವನ್ನು ಅನಿಧಿ ì ಷ್ಟಾವಧಿಗೆ ಮುಂದೂಡಿದರು.
ಲೋಕಸಭೆಯಲ್ಲಿ: ಲೋಕಸಭೆಯಲ್ಲಿ ಕಲಾಪ ಶುರುವಾಗುತ್ತಲೇ ಸ್ಪೀಕರ್ ಓಂ ಬಿರ್ಲಾ ಅವರು ಅನಿರ್ಧಿಷ್ಟಾವಧಿಗೆ ಕಲಾಪ ಮುಂದೂಡುವುದಾಗಿ ಪ್ರಕಟಿಸಿದರು. ಅನಂತರ ಮಾತನಾಡಿದ ಲೋಕಸಭೆ ಸ್ಪೀಕರ್ ಓಂಬಿರ್ಲಾ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಲೋಕಸಭೆಯಲ್ಲಿ 27 ಸಿಟ್ಟಿಂಗ್‌ಗಳ ಮೂಲಕ ಶೇ.129ರಷ್ಟು ಉತ್ಪಾದಕತೆ ಸಾಧಿ ಸಿದೆ. ರಾಜ್ಯಸಭೆಯ ಲ್ಲಿಯೂ 27 ಸಿಟ್ಟಿಂಗ್‌ಗಳು ನಡೆದಿವೆ. ಮೇಲ್ಮನೆಯಲ್ಲಿ ಪ್ರತಿಭಟನೆ ಕೋಲಾಹಲಗಳಿಂದ 9.30 ಗಂಟೆ ನಷ್ಟವಾಗಿ, ಶೇ.98ರಷ್ಟು ಉತ್ಪಾದಕತೆ (ಪ್ರೊಡಕ್ಟಿವಿಟಿ) ಸಾಧಿಸಲಾಗಿದೆ ಎಂದರು. ಫೆ.1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದರು.
13: ಸಂಸತ್‌ನಲ್ಲಿ ಮಂಡಿಸಲು ಉದ್ದೇಶಿಸಿದ್ದ ಮಸೂದೆಗಳು
13 : ಲೋಕಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗಳು
11: ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗಳು
129% : ಲೋಕಸಭೆ ಉತ್ಪಾದಕತೆ
98% : ರಾಜ್ಯಸಭೆ ಉತ್ಪಾದಕತೆ
ಅಂಗೀಕಾರಗೊಂಡ ಪ್ರಮುಖ ಮಸೂದೆ :
- ವಿತ್ತೀಯ ಮಸೂದೆಗಳು
- ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ಮಸೂದೆ
- ಸಮೂಹ ವಿನಾಶಕ ಶಸ್ತ್ರಾಸ್ತ್ರ ಮತ್ತು ವಿತರಣೆ ವ್ಯವಸ್ಥೆ (ನಿಷೇಧಿತ ಚಟುವಟಿಕೆಗಳ ತಡೆ) ಮಸೂದೆ