Advertisement
ಒಂದೊಳ್ಳೆಯ ಕಥೆ ಮತ್ತು ಪಾತ್ರವನ್ನು ಹುಡುಕುತ್ತಿದ್ದ ಅವರಿಗೆ ಈಗ ಹೊಸ ಚಿತ್ರದ ಕಥೆ ಮತ್ತು ಪಾತ್ರ ಇಷ್ಟವಾಗಿ ನಟಿಸಲು ಒಪ್ಪಿದ್ದಾರೆ. ಆ ಚಿತ್ರಕ್ಕಿನ್ನೂ ಶೀರ್ಷಿಕೆ ಪಕ್ಕಾ ಮಾಡಿಲ್ಲ. ಈ ಚಿತ್ರಕ್ಕೆ ಸೂರಜ್‌ಗೌಡ ಹೀರೋ. ಚಿತ್ರದ ವಿಶೇಷವೆಂದರೆ, ಸೂರಜ್‌ಗೌಡ ಅವರೇ ಚಿತ್ರದ ಕಥೆ ಬರೆದಿದ್ದಾರೆ. ಆ ಮೂಲಕ ಬರಹಗಾರರಾಗಿಯೂ ಸೂರಜ್‌ಗೌಡ ಗುರುತಿಸಿಕೊಂಡಂತಾಗಿದೆ.
Related Articles
Advertisement
ಈ ನಿರ್ಮಾಣ ಸಂಸ್ಥೆಗೆ ಚಿತ್ರರಂಗ ಹೊಸದಲ್ಲ. ಈಗಾಗಲೇ ಬಾಲಿವುಡ್‌ನ ಹಲವು ಸಿನಿಮಾಗಳ ಮಾರುಕಟ್ಟೆ ಮಾಡಿದ ಅನುಭವ ಈ ಸಂಸ್ಥೆಗಿದೆ. ಚಿತ್ರಕ್ಕೆ ರಘುದೀಕ್ಷಿತ್ ಅವರು ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಮೂರು ಹಾಡುಗಳು ಮಾಂಟೇಜಸ್‌ನಲ್ಲೇ ಸಾಗುತ್ತವೆ. ಇನ್ನೊಂದು ಹಾಡನ್ನು ಹೊರಗಡೆ ಚಿತ್ರೀಕರಿಸುವ ಯೋಜನೆ ಚಿತ್ರತಂಡಕ್ಕಿದೆ. “ಲೂಸಿಯಾ’, “ಯು ಟರ್ನ್’ ಚಿತ್ರಗಳಿಗೆ ಸಂಕಲನ ಮಾಡಿದ್ದ ಸುರೇಶ್ ಆರ್ಮುಗಂ ಅವರು ಚಿತ್ರಕ್ಕೆ ಸಂಕಲನ ಮಾಡುತ್ತಿದ್ದಾರೆ.
ಜುಲೈನಲ್ಲಿ ಚಿತ್ರೀಕರಣ ಶುರುವಾಗಲಿದೆ. ಬಹುತೇಕ ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಇತರೆಡೆ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಪ್ರವೀಣ್ ಸಂಭಾಷಣೆ ಬರೆದಿದ್ದಾರೆ. ಎರಡು ಹಂತಗಳಲ್ಲಿ ಸುಮಾರು 50 ದಿನಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರಿ ನಡೆಸುತ್ತಿದೆ.
“ಮೊದಲಿನಿಂದಲೂ ಕಲಾವಿದೆಯಾಗಬೇಕು ಎನ್ನುವ ಕನಸು ಮನಸ್ಸಿನಲ್ಲಿತ್ತು. ಆ ಕನಸು ಈಗ ನನಸಾಗುತ್ತಿದೆ. ನಾನು ನಟಿಯಾಗಬೇಕು ಎಂದು ನಿರ್ಧರಿಸಿದಾಗಿನಿಂದ ಹಲವು ಚಿತ್ರಗಳಿಗೆ ಆಫರ್ ಬಂದಿದ್ದವು. ಅನೇಕ ಕಥೆಗಳನ್ನು ಕೇಳಿದ್ದೆ. ಆದರೆ ಯಾವ ಕಥೆ, ಪಾತ್ರ ನನಗೆ ಅಷ್ಟಾಗಿ ಇಷ್ಟವಾಗದ ಕಾರಣ, ಅಂಥ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಈಗ ಬಂದಿರುವ ಆಫರ್ನಲ್ಲಿ ಕಥೆ, ಪಾತ್ರಗಳು ಎಲ್ಲವೂ ಚೆನ್ನಾಗಿದೆ. ನನಗೆ ಇಷ್ಟವಾದ ಕಾರಣ, ಈ ಸಿನಿಮಾ ಮೂಲಕವೇ ನನ್ನ ಸಿನಿ ಕೆರಿಯರ್ ಶುರು ಮಾಡುತ್ತಿದ್ದೇನೆ. ಇದು ನನ್ನ ಮೊದಲ ಸಿನಿಮಾವಾಗಿರುವುದರಿಂದ, ಇದರ ಮೇಲೆ ನನಗೂ ಕುತೂಹಲ, ನಿರೀಕ್ಷೆ ಇದೆ. ತಮ್ಮ ಚೊಚ್ಚಲ ಚಿತ್ರದ ಪಾತ್ರ ಹೇಗಿರಬಹುದು ಎಂಬ ಗುಟ್ಟನ್ನು ಈಗಲೇ ಬಿಟ್ಟುಕೊಡಲ್ಲ. ನಾನು ಹೇಗೆ ಕಾಣುತ್ತೇನೆ ಎನ್ನುವುದನ್ನು ತೆರೆ ಮೇಲೆ ನೋಡಬೇಕು’.-ಧನ್ಯಾ ರಾಮ್‌ಕುಮಾರ್