Advertisement

ಹಿಮಾಚಲದಲ್ಲಿ ಆಶ್ರಮ ನಿರ್ಮಿಸಿದ ರಜನೀಕಾಂತ್‌

06:20 AM Oct 26, 2017 | Team Udayavani |

ಚೆನ್ನೈ:ಅಧ್ಯಾತ್ಮಿಕ ಜೀವಿಯೂ ಆಗಿರುವ ತಮಿಳು ಸೂಪರ್‌ ಸ್ಟಾರ್‌ ರಜನೀಕಾಂತ್‌, ತಮ್ಮ ಕೆಲವು ಸ್ನೇಹಿತರೊಡನೆ ಸೇರಿ ಹಿಮಾಲಯದ ದುನಗಿರಿಯಲ್ಲೊಂದು ಆಶ್ರಮವನ್ನು ನಿರ್ಮಿಸುತ್ತಿದ್ದಾರೆ. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಆಶ್ರಮದಲ್ಲಿ, ಧ್ಯಾನ, ಯೋಗಗಳನ್ನು ಅರಸಿ ಬರುವ ಸಾಧಕರು ಎಷ್ಟು ದಿನ ಬೇಕೋ ಅಷ್ಟು ದಿನ ಉಚಿತವಾಗಿ ಅಲ್ಲಿ ನೆಲೆಯೂರಲು ಅವಕಾಶ ಇರುತ್ತದೆ.  ಈ ಆಶ್ರಮ ಅಥವಾ ಧ್ಯಾನ ಕೇಂದ್ರ ಮುಂದಿನ ತಿಂಗಳು ಲೋಕಾರ್ಪಣೆಗೊಳ್ಳಲಿದೆ. 

Advertisement

ರಜನೀಕಾಂತ್‌ ಅವರ ಅಧ್ಯಾತ್ಮಿಕ ಗುರುವಾದ ಪರಮಹಂಸ ಯೋಗಾನಂದ ಸ್ಥಾಪಿಸಿದ್ದ ಯೊಗೋದಾ ಸತ್ಸಂಗ ಸೊಸೈಟಿಗೆ (ವೈಎಸ್‌ಎಸ್‌) ಈ ವರ್ಷ ಶತಮಾನೋತ್ಸವ ಸಂಭ್ರಮ. ಇದರ ನೆನಪಿಗಾಗಿಯೇ ಅಲ್ಲಿ ಆಶ್ರಮ ನಿರ್ಮಾಣಕ್ಕೆ ಕೈ ಹಾಕಲಾಗಿದೆ ಎಂದು ಹೇಳಲಾಗಿದೆ. 

ಅಷ್ಟಕ್ಕೂ ರಜನೀಕಾಂತ್‌ಗೆàಕೆ ಹಿಮಾಲಯದಲ್ಲಿ ಆಶ್ರಮ ಕಟ್ಟುವ ಮನಸ್ಸಾಯಿತು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಈ ಯೋಜನೆಗೆ ಕೈ ಜೋಡಿಸಿರುವ ಅವರ ಸ್ನೇಹಿತರಲ್ಲೊಬ್ಬರಾದ ವಿ. ವಿಶ್ವನಾಥನ್‌ ಪ್ರಕಾರ, ರಜನೀಕಾಂತ್‌ಗೂ ಹಿಮಾಲಯಕ್ಕೂ ಇರುವ ನಂಟು ಸುಮಾರು 10- 15 ವರ್ಷಗಳ ಹಿಂದಿನದ್ದು. ಹಿಮಚ್ಛಾದಿತ ಪ್ರದೇಶದ ದುನಗಿರಿಯಲ್ಲಿರುವ ಗುಹೆಗಳಲ್ಲಿ ಅವರು ಆಗಾಗ್ಗೆ ಹೋಗಿ ಧ್ಯಾನದಲ್ಲಿ ಮುಳುಗುತ್ತಾರೆ. ಇದೇ ಪ್ರಾಂತ್ಯದಲ್ಲೇ ಪರಮಹಂಸ ಯೋಗಾನಂದರ ಗುಗ್ಗುರು ಮಹಾವತಾರ್‌ ಬಾಬಾಜೀ ಅವರು ಸೂಕ್ಷ್ಮರೂಪದಲ್ಲಿ ನೆಲೆಸಿದ್ದಾರೆಂದು ಹೇಳಲಾಗುತ್ತಿದೆ. ಅವರೊಮ್ಮೆ ರಜನಿಯವರಿಗೆ ದರ್ಶನ ನೀಡಿದ್ದರೆಂದೂ ಹೇಳಲಾಗುತ್ತಿದೆ. ಇಂಥ ತಪೋಭೂಮಿಯಲ್ಲಿ ಒಂದು ಶಾಶ್ವತ ಸೇವೆ ಮಾಡಬೇಕೆಂಬ ಇಚ್ಛೆ ರಜನಿ ಹಾಗೂ ಅವರ ಸ್ನೇಹಿತರಿಗೆ ಬಹುದಿನಗಳಿಂದಲೂ ಇದ್ದದು ಈ ಅನುಷ್ಠಾನವಾಗುತ್ತಿದೆ.
 

ವಿಶ್ವನಾಥನ್‌, ಬೆಂಗಳೂರಿನಲ್ಲಿರುವ ಉದ್ಯಮಿ ವಿ.ಎಸ್‌. ಹರಿ, ವಿ.ಎಸ್‌. ಮೂರ್ತಿ ಹಾಗೂ ದೆಹಲಿಯ ಶ್ರೀಧರ ರಾವ್‌ ಅವರೂ ಬಾಬಾ ಭಕ್ತರೇ. 2002ರಲ್ಲಿ ರಜನೀಕಾಂತ್‌ ಅವರನ್ನು ದುನಗಿರಿಯ ಗುಹೆಗಳಲ್ಲೇ ರಜನೀಕಾಂತ್‌ ಅವರನ್ನು ಭೇಟಿಯಾಗಿದ್ದರಂತೆ. ಆಗಿನಿಂದ ರಜನಿ ಇವರಿಗೆ ಚಿರಪರಿಚಿತ. ದುನಗಿರಿಯಲ್ಲಿ ಶಾಶ್ವತ ಸೇವೆಯೊಂದನ್ನು ಮಾಡಬೇಕೆಂಬ ಹಂಬಲ ಹೊಂದಿದ್ದ ಇವರು ಒಂದು ಸುಸಮಯಕ್ಕಾಗಿ ಕಾದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next