ನವದೆಹಲಿ: ಭಾರತ-ಚೀನಾ ನಡುವೆ ನಿರಂತರ ಸಂಘರ್ಷವಿರುವುದು ಹೊಸ ಮಾತೇನಲ್ಲ. ಎರಡೂ ದೇಶಗಳು ಗಡಿಭಾಗದಲ್ಲಿ ಸಮರೋಪಾದಿಯಲ್ಲಿ ಮೂಲ ಸೌಕರ್ಯ ನಿರ್ಮಾಣದಲ್ಲಿ ತೊಡಗಿವೆ. ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚೀನಾ ಗಡಿಭಾಗಕ್ಕೆ ಸನಿಹದಲ್ಲಿ 27 ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಿದರು. ಈ ವೇಳೆ ಅವರೆಲ್ಲೂ ಚೀನಾ ಹೆಸರೆತ್ತದಿದ್ದರೂ ಎಲ್ಲ ಮಾತುಗಳೂ ಆ ದೇಶದತ್ತಲೇ ನೆಟ್ಟಿದ್ದು ಕಾಣಿಸುತ್ತಿತ್ತು.
“ಉತ್ತರ ವಲಯದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು; ಸಮರ್ಥ ಮೂಲಸೌಕರ್ಯ ಮತ್ತು ಬದ್ಧತೆಯ ಕಾರಣದಿಂದ ನಿರ್ವಹಿಸಲು ಸಾಧ್ಯವಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ಸವಾಲುಗಳು ಎದುರಾಗಬಹುದು, ಅವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇಂತಹ ಸ್ಥಿತಿ ಅಭಿವೃದ್ಧಿಯತ್ತ ಮುನ್ನಡೆಯಲು ನಮಗೆ ಇನ್ನಷ್ಟು ಪ್ರೇರಣೆ ನೀಡುತ್ತವೆ’ ಎಂದು ರಾಜನಾಥ್ ಹೇಳಿದ್ದಾರೆ.
ಈ ಯೋಜನೆಯೊಂದಿಗೆ ಬಿಆರ್‌ಒ (ಗಡಿ ರಸ್ತೆ ನಿರ್ಮಾಣ) ಸಂಸ್ಥೆ ಕೈಜೋಡಿಸಿದೆ ಎನ್ನುವುದು ಹೆಮ್ಮೆಯ ಸಂಗತಿ. ಮೂಲಸೌಕರ್ಯಗಳನ್ನು ಹೆಚ್ಚಿಸುವುದರ ಜೊತೆಗೆ ನಿಗಾವ್ಯವಸ್ಥೆಯನ್ನೂ ಸದೃಢಗೊಳಿಸಬೇಕು ಎಂದು ಸಿಂಗ್ ಹೇಳಿದ್ದಾರೆ. 27 ರಸ್ತೆ ನಿರ್ಮಾಣಗಳ ಪೈಕಿ 24 ಸೇತುವೆಗಳನ್ನೇ ನಿರ್ಮಿಸಲಾಗುತ್ತದೆ. ಇವನ್ನು 2,245 ಕೋಟಿ ರೂ. ವೆಚ್ಚ ನಿರ್ಮಿಸಲಾಗುತ್ತದೆ.
ಇದನ್ನೂ ಓದಿ : ಭಾರತದ ತಳಹದಿಯನ್ನು ದುರ್ಬಲಗೊಳಿಸಲು ಬಿಡೆವು: ಸೋನಿಯಾ ಗಾಂಧಿ