Advertisement
ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸಭೆಗೆ ಸಂಬಂಧಿಸಿದಂತೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾ ಪ್ರವಾಸದಲ್ಲಿದ್ದಾರೆ. ಚೀನದ ರಕ್ಷಣ ಸಚಿವ ವೀ ಫೆಂಗ್ ಕೂಡ ಇದರಲ್ಲಿ ಭಾಗವಹಿಸುತ್ತಿದ್ದಾರೆ.
Related Articles
Advertisement
ಅಗಸ್ಟ್ 29-30ರ ರಾತ್ರಿ ಪಂಗೊಂಗ್ ಸೋ ಸರೋವರದ ದಕ್ಷಿಣ ಭಾಗವನ್ನು ಆಕ್ರಮಿಸಿಕೊಳ್ಳುವ ಚೀನದ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತು. ಇದಾದ ಬಳಿಕ ಘರ್ಷಣೆಗಳು ನಡೆಯುತ್ತಿವೆ. ಗುರುವಾರದ ರಾತ್ರಿ ಮತ್ತು ಶುಕ್ರವಾರದ ಬೆಳವಣಿಗೆಯಲ್ಲಿ ಭಾರತೀಯ ಸೇನಾಪಡೆ ಕೂಡಾ ಆಯಕಟ್ಟಿನ ಸ್ಥಳದಲ್ಲಿ ಮಿಸೈಲ್ಲ್, ರಾಕೆಟ್ಸ್ ಮತ್ತು ಇತರ ಶಸ್ತ್ರಾಸ್ತ್ರವನ್ನು ಸಜ್ಜುಗೊಳಿಸಿದೆ. ಮಿಸೈಲ್ ಶಸ್ತ್ರಸಜ್ಜಿತ ಟಿ-90 ಯುದ್ಧ ಟ್ಯಾಂಕ್ ಹಾಗೂ ಪೂರ್ವ ಲಡಾಖ್‌ನ ಅತೀ ಎತ್ತರದ ಪ್ರದೇಶದಲ್ಲಿ ಟಿ-72ಎಂ1 ಟ್ಯಾಂಕ್ ಅನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.
ಬ್ಲ್ಯಾಕ್ ಟಾಪ್ ಮತ್ತು ಹೆಲ್ಮೆಟ್ ಸೇರಿದಂತೆ ಎರಡು ಪ್ರದೇಶಗಳಲ್ಲಿ ಚೀನ ಸೇನೆ ತನ್ನ ನಿಯಂತ್ರಣ ಸಾಧಿಸಿದೆ. ಹಲವು ಮೂಲಗಳ ಪ್ರಕಾರ ಉಭಯ ಪ್ರದೇಶಗಳಿಗೂ ದಾಳಿ ನಡೆಸಲು ಅನುಕೂಲವಾಗುವ ನಿಟ್ಟನಲ್ಲಿ ಭಾರತೀಯ ಸೈನಿಕರು ಎತ್ತರದ ಪ್ರದೇಶಗಳಲ್ಲಿ ಸಜ್ಜಾಗಿ ನಿಂತಿರುವುದಾಗಿ ವರದಿ ತಿಳಿಸಿದೆ. ಭಾರೀ ಪ್ರಮಾಣದಲ್ಲಿ ವೈಮಾನಿಕ ಚಟುವಟಿಕೆ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ. ಟಿಬೆಟ್‌ನಲ್ಲಿರುವ ವಾಯು ನೆಲೆಯಲ್ಲಿ ಚೀನ ವೈಮಾನಿಕ ಚಟುವಟಿಕೆ ಚುರುಕುಗೊಂಡಿರುವುದಾಗಿ ವರದಿ ತಿಳಿಸಿದೆ. ಭಾರತೀಯ ವಾಯುಪಡೆ ಕೂಡಾ ಸುಖೋಯ್ 30 ಯುದ್ಧ ವಿಮಾನವನ್ನು ಗಡಿಪ್ರದೇಶಕ್ಕೆ ರವಾನಿಸಿರುವ ಮಾಹಿತಿ ಖಚಿತವಾಗಿದೆ.