Advertisement
ನ್ಯಾ| ಬೀರೆನ್ ವೈಷ್ಣವ್ ಹಾಗೂ ನ್ಯಾ|ದೇವನ್ ದೇಸಾಯಿ ಅವರಿದ್ದ ವಿಶೇಷ ಪೀಠ, ಇದು ಮಾನವ ಮಾಡಿದ ತಪ್ಪಿನಿಂದ ಉಂಟಾದ ದುರಂತ ಎಂದು ಹೇಳಿದೆ. ಈ ಗೇಮಿಂಗ್ ಸೆಂಟರ್ ಯಾವುದೇ ಅನುಮತಿ ಪಡೆಯದೇ ಸುಮಾರು ಎರಡೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದೆ. ಕ್ರಮ ಕೈಗೊಳ್ಳದೇ ನೀವು ನಿದ್ದೆಗೆ ಜಾರಿದ್ದಿರಾ ಅಥವಾ ನಿಮ್ಮ ಕಣ್ಣು ಕುರುಡಾಗಿದೆಯೇ ಎಂದು ಕೋರ್ಟ್ ಪ್ರಶ್ನಿಸಿದೆ.
Related Articles
Advertisement
ಪೊಲೀಸ್ ಆಯುಕ್ತರ ಎತ್ತಂಗಡಿ
ಗೇಮಿಂಗ್ ಸೆಂಟರ್‌ನಲ್ಲಿ ಉಂಟಾಗಿರುವ ಬೆಂಕಿ ದುರಂತಕ್ಕೆ ಸಂಬಂಧಿಸಿದಂತೆ ರಾಜ್‌ಕೋಟ್ ಮಹಾನಗರ ಪಾಲಿಕೆ ಆಯುಕ್ತ ಆನಂದ್ ಪಟೇಲ್‌ರನ್ನು ಎತ್ತಂಗಡಿ ಮಾಡಲಾಗಿದೆ. ಇದರ ಜತೆಗೆ ನಗರ ಪೊಲೀಸ್ ಆಯುಕ್ತ ರಾಜು ಭಾರ್ಗವ, ಜತೆಗೆ ಇನ್ನಿಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
ದುರಂತಕ್ಕೆ ವೆಲ್ಡಿಂಗ್ ಕಿಡಿಯೇ ಕಾರಣ?ಗೇಮಿಂಗ್ ಝೋನ್ ಅಗ್ನಿ ಅವಘಡಕ್ಕೆ ವೆಲ್ಡಿಂಗ್ ಯಂತ್ರದಿಂದ ಉಂಟಾ ದ ಬೆಂಕಿಯ ಕಿಡಿ ಕಾರಣ ಎಂದು ಸಿಸಿಟಿವಿ ದೃಶ್ಯಾವಳಿಯಿಂದ ತಿಳಿದುಬಂದಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ವೆಲ್ಡಿಂಗ್ ಕೆಲಸ ನಡೆದಿತ್ತು. ವೆಲ್ಡಿಂಗ್ ಯಂತ್ರದಿಂದ ಉಂಟಾದ ಕಿಡಿ ಹತ್ತಿರದಲ್ಲೇ ಇದ್ದ ಪ್ಲಾಸ್ಟಿಕ್ ರಾಶಿಗೆ ತಗಲಿದ್ದು, ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ. ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ಸುರಕ್ಷ ಉಪಕ ರಣವಿದ್ದರೂ, ಬೆಂಕಿ ಆರಿಸ ಲಾಗಿಲ್ಲ. ಕೆಲವೇ ಸೆಕೆಂಡುಗಳಲ್ಲಿ ಬೆಂಕಿ ಎಲ್ಲೆಡೆ ವ್ಯಾಪಿಸಿದೆ. ವೆಲ್ಡಿಂಗ್ ನ ಸಣ್ಣ ಕಿಡಿ ಅತೀ ದೊಡ್ಡ ಅವಘಡಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.