Advertisement

Air India pilot;ಕೆಲಸದ ಅವಧಿ ಮುಗೀತು ಎಂದ ಪೈಲಟ್‌: 100 ಏರ್‌ ಇಂಡಿಯಾ ಪ್ರಯಾಣಿಕರು ಅತಂತ್ರ

10:21 PM Jul 24, 2023 | Team Udayavani |

ನವದೆಹಲಿ: ಗುಜರಾತ್‌ನ ರಾಜ್‌ಕೋಟ್‌ ವಿಮಾನನಿಲ್ದಾಣದಲ್ಲಿ ಭಾನುವಾರ ರಾತ್ರಿ ಬಿಜೆಪಿಯ ಮೂವರು ಸಂಸದರೂ ಸೇರಿ 100 ಪ್ರಯಾಣಿಕರು ಅತಂತ್ರಗೊಂಡಿದ್ದರು!

Advertisement

ಕಾರಣವೇನು ಗೊತ್ತಾ? ರಾತ್ರಿ 8.30ಕ್ಕೆ ಹೊರಡಬೇಕಿದ್ದ ಏರ್‌ ಇಂಡಿಯಾ ವಿಮಾನದ ಪೈಲಟ್‌ ತನ್ನ ಕೆಲಸದ ಅವಧಿ ಮುಗಿದಿದೆ, ಮತ್ತೆ ವಿಮಾನ ಚಲಾಯಿಸುವಷ್ಟು ಶಕ್ತಿಯಿಲ್ಲ ಎಂದಿದ್ದು.

ರಾಜ್‌ಕೋಟ್‌ ಸಂಸದ ಮೋಹನ್‌ ಕುಂದರಿಯ, ಜಾಮ್‌ನಗರ ಸಂಸದ ಪೂನಮ್‌ ಮಾದಾಮ್‌, ಹೊಸತಾಗಿ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಸರಿದೇವಸಿನ್ಹ ಝಲಾ ಅತಂತ್ರಗೊಂಡ 100 ಮಂದಿಯಲ್ಲೊಬ್ಬರಾಗಿದ್ದರು! ಇದರಿಂದ ನಿರ್ವಹಣಾ ಸಿಬ್ಬಂದಿ ತೀರಾ ಗೊಂದಲಕ್ಕೀಡಾಗಿದ್ದರು.

ಯಾರ್ಯಾರು ಕೂಡಲೇ ದೆಹಲಿಗೆ ತಲುಪಲೇಬೇಕಿತ್ತೋ ಅವರನ್ನು ಅಹ್ಮದಾಬಾದ್‌ ವಿಮಾನನಿಲ್ದಾಣಕ್ಕೆ ರಸ್ತೆ ಮಾರ್ಗದ ಮೂಲಕ ತಲುಪಿಸಲಾಯಿತು. ಉಳಿದವರಿಗೆ ಊಟ, ವಸತಿ ವ್ಯವಸ್ಥೆ ಮಾಡಿ, ಟಿಕೆಟ್‌ ಹಣವನ್ನೂ ಮರಳಿಸಲಾಯಿತು. ಮಾತ್ರವಲ್ಲ ಅವರಿಗೆ ಇನ್ನೊಂದು ವಿಮಾನದಲ್ಲಿ ಕಳಿಸಲು ಏರ್ಪಾಡೂ ಆಯಿತು. ನಾವು ಗಮನಿಸಬೇಕಾಗಿದ್ದೇನೆಂದರೆ, ಪೈಲಟ್‌ ಹೇಳಿರುವುದು ಸಂಪೂರ್ಣ ಕಾನೂನುಬದ್ಧವಾಗಿದೆ! ಎಫ್ಡಿಟಿಎಲ್‌ (ಫ್ಲೈಟ್‌ ಡ್ನೂಟಿ ಟೈಮ್‌ ಲಿಮಿಟ್‌) ನಿಯಮಗಳ ಪ್ರಕಾರ ಕೆಲಸದ ಸಮಯ ಮುಗಿದ ನಂತರ ಕಾಕ್‌ಪಿಟ್‌ ಸಿಬ್ಬಂದಿ ಕರ್ತವ್ಯ ಮುಂದುವರಿಸುವಂತಿಲ್ಲ. ಇದರಲ್ಲಿ ಯಾವುದೇ ರಾಜಿಗೆ ಅವಕಾಶವಿಲ್ಲ ಎಂದು ಏರ್‌ ಇಂಡಿಯಾ ವಕ್ತಾರರೇ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next