Advertisement
ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ರಜನಿಕಾಂತ್ ಅವರು ಈ ಹಿಂದೆ ಹೇಳಿಕೆಯೊಂದನ್ನು ನೀಡಿದ್ದರು. ಅದು ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಹಿನ್ನೆಲೆಯಲ್ಲಿ ರಜನಿಕಾಂತ್ ಅಭಿನಯದ “ಕಾಲ’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಕನ್ನಡ ಚಳುವಳಿಯ ವಾಟಾಳ್ ನಾಗರಾಜ್ ಕೂಡ, “ಕಾಲ’ ಚಿತ್ರ ಬಿಡುಗಡೆ ಮಾಡಿದರೆ, ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಈ ಸಂಬಂಧ, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದಲ್ಲಿ ಮಂಗಳವಾರ ವಿತರಕರು ಮತ್ತು ಪ್ರದರ್ಶಕರ ಸಭೆ ನಡೆಯಿತು. ಸಭೆಯಯಲ್ಲಿ “ಗೋಲ್ಡಿ ಫಿಲ್ಮ್ಸ್ ವಿತರಕ ಸೌರವ್, “ನಾನು ಕರ್ನಾಟಕ, ಕನ್ನಡಿಗರಿಗಾಗಿ “ಕಾಲ’ ಚಿತ್ರವನ್ನು ವಿತರಣೆ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
Related Articles
ನೆಲ, ಜಲಕ್ಕಾಗಿ ಎಲ್ಲರೂ ಒಂದಾಗಿದ್ದೇವೆ. ಆದರೆ, ತಮಿಳು ನಟರು ಹೀಗೆಲ್ಲಾ ಮಾತಾಡಿರುವುದರಿಂದ “ಕಾಲ’ ಚಿತ್ರವನ್ನು ಬಿಡುಗಡೆ ಮಾಡದಿರಲು ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಅನಾಹುತ ತಡೆಯಲು ರಜನಿಕಾಂತ್ ಹಾಗು ಕಮಲ್ ಹಾಸನ್ ಚಿತ್ರಗಳನ್ನು ಬಿಡುಗಡೆ ಮಾಡದಿರಲು ತೀರ್ಮಾನ ಮಾಡಲಾಗಿದೆ’ ಎಂದರು. ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಮಂಡಳಿಯ ಎನ್.
ಕುಮಾರ್, ಉಮೇಶ್ ಬಣಕಾರ್, ಜ್ಞಾನೇಶ್ವರ್ ಐತಾಳ್ ಇತರರು ಇದ್ದರು. ರಜನಿಕಾಂತ್ ಅಭಿನಯಿಸಿರುವ “ಕಾಲ’ ಚಿತ್ರವನ್ನು ಪಾ ರಂಜಿತ್ ನಿರ್ದೇಶಿಸಿದ್ದಾರೆ. ಈ ಹಿಂದೆ “ಕಬಾಲಿ’ ಚಿತ್ರ ನಿರ್ದೇಶಿಸಿದ್ದ ಪಾ ರಂಜಿತ್, “ಕಾಲ’ವನ್ನೂ ಮಾಡಿದ್ದಾರೆ. ಈ ಚಿತ್ರದಲ್ಲಿ ರಜನಿಕಾಂತ್, ಮುಂಬೈನ ಅಂಡರ್‌ವರ್ಲ್ಡ್ನಲ್ಲಿ ತಮಿಳರ ಪರ ಹೋರಾಡುವ ನಾಯಕರಾಗಿ ನಟಿಸಿದ್ದಾರೆ. ಧನುಷ್ ಈ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಹುಮಾ ಖುರೇಷಿ ,
ಈಶ್ವರಿ ರಾವ್, ಧನುಷ್ ಇತರರು ನಟಿಸಿದ್ದಾರೆ.
Advertisement
ಕನ್ನಡ ಸಂಘಟನೆ ಕಿಡಿ ಕಾವೇರಿ ವಿಷಯಕ್ಕೆ ಸಂಬಂಧಿಸಿ ಪ್ರತಿ ಬಾರಿಯೂ ಗೊಂದಲದ ಹೇಳಿಕೆಗಳು ಕೇಳಿ ಬರುತ್ತಿವೆ ಎಂದು ಆರೋಪಿಸಿರುವ ಕನ್ನಡ ಪರ ಸಂಘಟನೆಗಳು,
ಯಾವ ಕಾರಣಕ್ಕೂ “ಕಾಲ’ ಚಿತ್ರವನ್ನು ಬಿಡುಗಡೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿವೆ. ಸಾ.ರಾ. ಗೋವಿಂದು ನಡೆಸಿದ
ಸಭೆಯಲ್ಲಿ, ವಿತರಕರು “ಕಾಲ’ ಚಿತ್ರವನ್ನು ವಿತರಣೆ ಮಾಡುವುದಿಲ್ಲ ಎಂದು ಹೇಳಿದ್ದರೆ, ಪ್ರದರ್ಶಕರು ಕೂಡ “ಕಾಲ’ ಚಿತ್ರವನ್ನು ಪ್ರದರ್ಶನ ಮಾಡುವು
ದಿಲ್ಲ. ನಮಗೆ ಸಿನಿಮಾಗಿಂತ ಕರ್ನಾಟಕ ಜನರ ಸಮಸ್ಯೆ ದೊಡ್ಡದು. “ಕಾಲ’ ಚಿತ್ರದಿಂದ ನಮಗೇನೂ ಆಗಬೇಕಿಲ್ಲ’ ಎಂದು ನಿರ್ಧರಿಸಿದ್ದಾರೆ.