Advertisement

ರಾಜೀವ್ ಚಂದ್ರಶೇಖರ್ ಗೆ ಕೇಂದ್ರ ಸಂಪುಟದಲ್ಲಿ ಸ್ಥಾನ

02:10 AM Jul 08, 2021 | Team Udayavani |

ಬೆಂಗಳೂರು: ರಾಜ್ಯದಿಂದ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕೇರಳ ಮೂಲದ ಇವರು ಕಂಪ್ಯೂಟರ್‌ ಸೈನ್ಸ್‌ನಲ್ಲಿ ಹಾರ್ವರ್ಡ್‌ ಯುನಿವರ್ಸಿಟಿಯಲ್ಲಿ ಎಂ ಟೆಕ್‌ ಮಾಡಿದ್ದಾರೆ. ಅನೇಕ ಉದ್ಯಮಗಳನ್ನು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಕೇಂದ್ರದ ಅನೇಕ ಸಂಸದೀಯ ಸ್ಥಾಯಿ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕೇರಳ ಚುನಾವಣೆಯ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 57 ವಯಸ್ಸಿನ ಇವರು ಕೇಂದ್ರ ಸಂಪುಟದಲ್ಲಿ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Advertisement

ಹಿನ್ನೆಲೆ: ಅಮೆರಿಕಾದ ಸಿಲಿಕಾನ್‌ ವ್ಯಾಲಿಯ ಇಂಟೆಲ್‌ ಸಂಸ್ಥೆಯ ಉದ್ಯೋಗಿಯಾಗಿದ್ದ ಇವರು 1991ರಲ್ಲಿ ಭಾರತಕ್ಕೆ ಮರಳಿ 1994 ರಲ್ಲಿ ಬಿಪಿಎಲ್‌ ಮೊಬೈಲ್‌ ಸ್ಥಾಪಿಸುವ ಮೂಲಕ ಭಾರತದ ದೂರ ಸಂಪರ್ಕ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ ಮೊದಲಿಗರೆನಿಸಿದರು. ಕೇವಲ 12 ವರ್ಷದಲ್ಲಿ ದೇಶದ ದೂರ ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿದರು. ಸೆಲ್ಯೂಲರ್‌ ಕ್ಷೇತ್ರದ ಯಶಸ್ವಿಗೆ ಕಾರಣವಾಗಿರುವ ಹೊಸ ಟೆಲಿಕಾಂ ನೀತಿ (ಎನ್‌ಟಿಪಿ 99) ರೂಪಿಸುವಲ್ಲಿ ಹಾಗೂ ಸ್ವಾಯತ್ತ ಸಂಸ್ಥೆ ಟ್ರಾಯ್‌ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಖಾಸಗಿ ಇಕ್ವಿಟಿ ಹೂಡಿಕೆದಾರರಾಗಿ 2006 ರಲ್ಲಿ ಜುಪಿಟರ್‌ ಕ್ಯಾಪಿಟಲ್‌ ಆರಂಭಿಸಿ 2014 ರ ವರೆಗೆ ಅಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಮಾಧ್ಯಮ ಹಾಗೂ ತಂತ್ರಜ್ಞಾನ ಮೂಲ ಸೌಕರ್ಯ ವಲಯದಲ್ಲಿ ಅನೇಕ ಬ್ರ್ಯಾಂಡ್‌ ಹಾಗೂ ಫ್ರಾಂಚೈಸಿಗಳನ್ನು ರೂಪಿಸಿದ್ದರು ಮತ್ತು ಹೂಡಿಕೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next