Advertisement

ರಾಜೀವ್‌-ಅರಸು ಜನ್ಮದಿನಾಚರಣೆ

12:19 PM Aug 21, 2017 | |

ಸಿಂದಗಿ: ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ರಾಜೀವ್‌ಗಾಂಧಿ ಮತ್ತು ದೇವರಾಜ ಅರಸು ಅವರ ನಾಯಕತ್ವ ಗುಣಗಳನ್ನು ನಾವು ಅಳವಡಿಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಸಿಂದಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಠuಲ ಕೊಳ್ಳೂರ ಹೇಳಿದರು. ರವಿವಾರ ಪಟ್ಟಣದ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಜೀವ್‌ ಗಾಂಧಿ ಮತ್ತು ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಅಭಿವೃದ್ಧಿ ಯುವಕರ ಕೈಯಲ್ಲಿದೆ ಎಂದು ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರು ಮತದಾನದ ವಯೋಮಾನವನ್ನು 21 ರಿಂದ 18ನೇ ವಯಸ್ಸಿಗೆ ಇಳಿಸುವ ಮೂಲಕ ಯುವ ಶಕ್ತಿಗೆ ಚೈತನ್ಯ ತುಂಬಿದರು. ಅವರು ದೇಶದ ಅಭಿವೃದ್ಧಿಗಾಗಿ
ಶ್ರಮಿಸುವ ಜೊತೆಗೆ ಕೈಗಾರಿಕೆ, ತಂತ್ರಜ್ಞಾನಕ್ಕೆ ಹೆಚ್ಚನ ಆದ್ಯತೆ ನೀಡುವ ಮೂಲಕ ದೇಶವನ್ನು ಅಭಿವೃದ್ಧಿ ಪಥ
ಕಡೆಗೆ ತೆಗೆದುಕೊಂಡು ಹೋಗಿದ್ದರು. ಅವರ ಆದರ್ಶ, ಆಡಳಿತಾತ್ಮಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳೋಣ
ಎಂದರು. ದೇವರಾಜ ಅರಸರು ಇಂದಿರಾಗಾಂಧಿ ಅವರ ಮಾರ್ಗದರ್ಶನದಲ್ಲಿ ಅಹಿಂದ್‌ ಜನತೆಯ ಆರ್ಥಿಕ,
ಸಾಮಾಜಿಕ ಹಾಗೂ ರಾಜಕೀಯ ಅಭಿವೃದ್ಧಿ ಮಾಡಿದರು. ಉಳುವವನೇ ಭೂ ಒಡೆಯ ಎನ್ನುವ ಭೂಕಾಯ್ದೆ ತರುವ ಮೂಲಕ ಬಡತನ ಜನತೆಗೆ ಬೆನ್ನೆಲುಬಾದರು ಎಂದರು. ತಾಪಂ ಅಧ್ಯಕ್ಷೆ ಪ್ರಭಾವತಿ ಶಿರಸಗಿ,  ಪುರಸಭೆ ಮಾಜಿ
ಅಧ್ಯಕ್ಷ ಬಸಲಿಂಗಪ್ಪ ಗೊಬ್ಬೂರ, ಸಿ.ಎಂ.ದೇವರೆಡ್ಡಿ, ಯೋಗಪ್ಪಗೌಡ ಪಾಟೀಲ, ಬಸವರಾಜ ಶಿರಸಗಿ, ಪೈಗಂಬರ್‌ ಹಚ್ಯಾಳ, ಜಿ.ಸಿ.ಮಾರ್ಸನಳ್ಳಿ, ಮುನ್ನಾ ಬೈರಾಮಡಗಿ ಅವರು ಮಾತನಾಡಿದರು. ಮುದಿಗೌಡ ಬಿರಾದಾರ, ನಿಂಗಣ್ಣ ಚಟ್ಟಿ, ಮಾಂತಗೌಡ ಬಿರಾದಾರ, ನಿಂಗಪ್ಪ ಪಟ್ಟಣಶೆಟ್ಟಿ, ನಬಿ ಆಲಗೂರ, ಹಸನ ಮಂದೆವಾಲ, ವಿಠ್ಠಲ ರೆವೂರ, ಎಂ.ಎಲ್‌.ಗಡಿಗೆನವರ, ಆರ್‌.ಎಚ್‌.ಪಟೇಲ್‌, ರಮೇಶ ಗುಬ್ಬೆವಾಡ, ಮಹಾದೇವ ಕೊಂಡಗುಳಿ, ಶ್ರೀಶೈಲ ಸಾಸಾಬಾಳ, ಸುಜಾತಾ ಸಿಂಧೆ, ಸುನಂದ ಯಂಪುರೆ ಸೇರಿದಂತೆ ಪಕ್ಷ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next