ಸಿಂಧನೂರು: ಸಂವಿಧಾನದ ಆಶಯಗಳನ್ನು ಜಾರಿಗೆ ತರಲು ಅವಿರತ ಶ್ರಮಿಸಿದ ಸಾಮಾಜಿಕ ನ್ಯಾಯ, ಸಮಾನತೆಯ ಹರಿಕಾರ ಮಾಜಿ ಮುಖ್ಯಮಂತ್ರಿ ದಿ| ಡಿ. ದೇವರಾಜ ಅರಸು ಅವರ ಆದರ್ಶಗಳು ಅನುಕರಣೀಯವಾಗಿವೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು. ದೇವರಾಜ ಅರಸು ಅವರ 102ನೇ ಜಯಂತ್ಯುತ್ಸವ ಅಂಗವಾಗಿ ರವಿವಾರ ನಗರದ ಸುಕಾಲಪೇಟೆಯ ಮಾರುಕಟ್ಟೆಯಲ್ಲಿರುವ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೀತಮುಕ್ತಿ, ಋಣಮುಕ್ತಿ, ಗೇಣಿ ಪದ್ಧತಿ ಜಾರಿ, ಉಳುವವನೇ ಭೂಮಿ ಒಡೆಯ ಎನ್ನುವಂತಹ ಮಹತ್ವದ ಯೋಜನೆಗಳನ್ನು ರೂಪಿಸಿದವರು. ಹಿಂದುಳಿದ, ದಲಿತ ವರ್ಗಕ್ಕೆ ಮೀಸಲಾತಿ ಕಲ್ಪಿಸಿ, ರಾಜಕೀಯ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಆದ್ಯತೆ ನೀಡಿ ಮುಖ್ಯವಾಹಿನಿಗೆ ತರಲು ಅವರ ಕೊಡುಗೆ ಅಪಾರವಾಗಿದೆ ಎಂದರು. ದಿ. ದೇವರಾಜ ಅರಸು ಪುತ್ಥಳಿಗೆ ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ನಯೋಪ್ರಾ ಅಧ್ಯಕ್ಷ ಎಂ.ಕಾಳಿಂಗಪ್ಪ ಮಾಲಾರ್ಪಣೆ ಮಾಡಿದರು. ಅಹಿಂದ ಸಂಘಟನೆ ಅಧ್ಯಕ್ಷ ಕರೇಗೌಡ ಕುರುಕುಂದಿ, ಜಿಪಂ ಸದಸ್ಯ ಎನ್.ಶಿವನಗೌಡ, ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದೊಡ್ಡಬಸವರಾಜ, ಕನಕಗುರುಪೀಠದ ತಾಲೂಕು ಅಧ್ಯಕ್ಷಟಿ.ಹನುಮಂತಪ್ಪ, ಪ್ರಭಾರಿ ತಹಶೀಲ್ದಾರ ಶಂಶಾಲಂ, ರಮೇಶಪ್ಪದಿದ್ದಗಿ, ಬಾಬರ್ ಪಾಷಾ, ಗಂಗಾಧರ ಹೂಗಾರ, ಖಾಜಿ ಮಲ್ಲಿಕ್, ಅಯ್ಯನಗೌಡ ಆಯನೂರು, ಮೊಹಿನುದ್ದೀನ್, ಮುಕ್ತಾರ್ ಪಟೇಲ್ ಇದ್ದರು. ಛೀಮಾರಿ: ಅಹಿಂದ ಸಂಘಟನೆಯಿಂದ ಹಮ್ಮಿಕೊಂಡಿದ್ದ ಅರಸು ಜಯಂತಿ ಕಾರ್ಯಕ್ರಮ ಕಾಟಾಚಾರಕ್ಕೆ ಮಾಡುವ ಅಗತ್ಯವಿರಲಿಲ್ಲ. ಜನರನ್ನು ಸಂಘಟಿಸಿ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಸಿದ್ದರೆ ಅರ್ಥಪೂರ್ಣವಾಗುತ್ತಿತ್ತು. ಇಂತಹ ಕಾರ್ಯಕ್ರಮವನ್ನು ಬೇಕಾಬಿಟ್ಟಿಯಾಗಿ ಅವಸರದಲ್ಲಿ ನಡೆಸುವ ಅವಶ್ಯಕತೆ ಇತ್ತೇ ಎಂದು ನಯೋಪ್ರಾ ಅಧ್ಯಕ್ಷ ಎಂ.ಕಾಳಿಂಗಪ್ಪ ಅಹಿಂದ ಸಂಘಟಕರಿಗೆ ಛೀಮಾರಿ ಹಾಕಿದ ಪ್ರಸಂಗ ಜರುಗಿತು. ವಿವಿಧೆಡೆ ಆಚರಣೆ: ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ ಅವರ ಕಾರ್ಯಾಲಯದಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಮಾಜಿ ಪ್ರಧಾನಮಂತ್ರಿ ರಾಜೀವಗಾಂಧಿ ಜಯಂತಿ ಆಚರಿಸಲಾಯಿತು. ಮುಖಂಡರಾದ ಅಬ್ದುಲ್ ಗನಿಸಾಬ್,ಬಾಬರ್ ಪಾಷಾ, ಎಚ್.ಎನ್.ಬಡಿಗೇರ, ಕರೇಗೌಡ ಕುರಕುಂದಿ, ರಮೇಶಪ್ಪ ದಿದ್ದಗಿ, ಕರೀಂಸಾಬ, ಮೈನುದ್ದೀನ್ ಎತ್ಮಾರಿ, ಮುಕ್ತಾರ್ ಪಟೇಲ ಇತರರು ಇದ್ದರು.
ತಾಲೂಕಾಡಳಿತ: ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ 102ನೇ ಜಯಂತಿ ಆಚರಿಸಲಾಯಿತು. ಪ್ರಭಾರಿ ತಹಶೀಲ್ದಾರ ಶಂಶಾಲಂ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ, ಜಿಪಂ ಸದಸ್ಯ ಎನ್. ಶಿವನಗೌಡ ಗೊರೇಬಾಳ ಇತರರು ಇದ್ದರು.