Advertisement

ಮನೆ ನಿರ್ಮಾಣಕ್ಕೆ ಲಂಚ ನೀಡಬಾರದು: ಸಾರಾ

02:22 PM Jul 23, 2022 | Team Udayavani |

ಕೆ.ಆರ್‌.ನಗರ: ವಸತಿ ಯೋಜನೆಗಳಡಿಯಲ್ಲಿ ವಿತರಿಸಲಾಗಿರುವ ಮನೆಗಳ ನಿರ್ಮಾಣಕ್ಕೆ ಆಯ್ಕೆಯಾಗಿರುವ ಫ‌ಲಾನುಭವಿಗಳು ಯಾರಿಗೂ ಲಂಚ ನೀಡಬಾರದು. ಹಣಕ್ಕಾಗಿ ನಿಮಗೆ ಯಾರಾದರೂ ಪೀಡಿಸಿದರೇ ನನ್ನ ಗಮನಕ್ಕೆ ತರಬೇಕು ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

Advertisement

ಪಟ್ಟಣದ ಪುರಸಭೆ ಕಚೇರಿಯಲ್ಲಿ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಆಯ್ಕೆಯಾಗಿರುವ ಫ‌ಲಾನುಭವಿಗಳಿಗೆ ಮನೆ ನಿರ್ಮಾಣದ ಮಂಜೂರಾತಿ ಪತ್ರಗಳನ್ನು ಶುಕ್ರವಾರ ವಿತರಿಸಿ ಮಾತನಾಡಿದರು.

ಮನೆ ನಿರ್ಮಿಸಿಕೊಳ್ಳಲಿ ಎಂಬ ಉದ್ಧೇಶದಿಂದ ಸರ್ಕಾರ ಹಣ ನೀಡಿದ್ದು, ಪ್ರತಿಯೊಬ್ಬರೂ ಅದನ್ನುಬಳಸಿಕೊಂಡು ಮನೆ ನಿರ್ಮಾಣ ಮಾಡಿಕೊಳ್ಳ ಬೇಕು.ಅನೇಕರು ಅರ್ಜಿ ಸಲ್ಲಿಸಿದ್ದರೂ ಅರ್ಹರೆಂದು ನಿಮ್ಮನ್ನು ಆಯ್ಕೆ ಮಾಡಿದ್ದೇವೆ ಎಂದರು.

ಕಳೆದ ನಾಲ್ಕೈದು ವರ್ಷಗಳಅವಧಿಯಲ್ಲಿ ವಸತಿಯೋಜನೆಯಡಿ ಆಯ್ಕೆಯಾಗಿಮಂಜೂರಾತಿ ಪತ್ರ ಪಡೆದರೂ 109 ಮಂದಿ ಮನೆಯನ್ನೇನಿರ್ಮಿಸಿಕೊಂಡಿಲ್ಲ. ಇದರಿಂದಇತರರಿಗೂ ಅನ್ಯಾಯವಾಗಿದೆ. ಮನೆ ನಿರ್ಮಿಸಿಕೊಳ್ಳದವರು ಮುಂದೆಯೂ ಕೂಡ ವಸತಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಗದಿತ ಸಮಯದಲ್ಲಿ ಮನೆನಿರ್ಮಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ 840 ಗುಂಪುಮನೆಗಳ ನಿರ್ಮಾಣವನ್ನುರಾಜೀವ್‌ಗಾಂಧಿ ವಸತಿನಿಗಮದಿಂದಲೇ ನಿರ್ಮಾಣ ಮಾಡಿಕೊಡಲು ಒಪ್ಪಿಗೆ ನೀಡಿದ್ದು,ಇನ್ನೂ ಒಂದು ವಾರದಲ್ಲಿ ಟೆಂಡರ್‌ ಮಾಡಿಸಲಾಗುವುದು. ಈಗಾಗಲೇ ಈ ಮನೆಗಳಿಗೆ ಹಣ ಕಟ್ಟದವರನ್ನು ಕೈಬಿಟ್ಟು ಅಗತ್ಯವಿದ್ದು ಹಣ ಕಟ್ಟಲು ಮುಂದೆ ಬರುವವರನ್ನು ಶೀಘ್ರವಾಗಿ ಪಟ್ಟಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಪುರಸಭಾ ಅಧ್ಯಕ್ಷ ಕೋಳಿಪ್ರಕಾಶ್‌, ಪುರಸಭಾ ಸದಸ್ಯ ನಟರಾಜ್‌, ಆಶ್ರಯ ಸಮಿತಿ ಸದಸ್ಯಮಂಜುನಾಥ್‌, ಪುರಸಭಾ ಮುಖ್ಯಾಧಿಕಾರಿಡಾ.ಜಯಣ್ಣ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಅಧ್ಯಕ್ಷ ಶಂಕರ್‌ಸ್ವಾಮಿ, ಸದಸ್ಯರಾದ ಕೆ.ಎಲ್‌. ಜಗದೀಶ್‌, ಕೆ.ಪಿ.ಪ್ರಭುಶಂಕರ್‌, ಸಂತೋಷ್‌ಗೌಡ, ಮಿಕ್ಸರ್‌ಶಂಕರ್‌, ಉಮೇಶ್‌, ಕೆ.ಬಿ.ವೀಣಾ, ತೋಂಟದಾರ್ಯ, ಜಿ.ಪಿ.ಮಂಜು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next