Advertisement

ರಾಜಧಾನಿ ಎಕ್ಸ್‌ಪ್ರೆಸ್‌ನ 3,500 ಕೋಚ್‌ಗಳ ಕಪ್ಲರ್‌ ಬದಲಾವಣೆ

04:10 PM Mar 07, 2017 | udayavani editorial |

ಹೊಸದಿಲ್ಲಿ : ಸುರಕ್ಷೆಯನ್ನು ಸುಧಾರಿಸುವುದು ಹಾಗೂ ರೈಲು ಪ್ರಯಾಣವನ್ನು ಜರ್ಕ್‌ ಮುಕ್ತಗೊಳಿಸುವ ನಿಟ್ಟಿನಲ್ಲಿ  ರೈಲ್ವೆ ಇಲಾಖೆಯು ರಾಜಧಾನಿ ಎಕ್ಸ್‌ಪ್ರೆಸ್‌ನ 3,500 ಕೋಚ್‌ಗಳ ಕಪ್ಲರ್‌ಗಳನ್ನು ಬದಲಾಯಿಸಲಿದೆ.

Advertisement

ಈಗಿನ ಸಿಬಿಸಿ ಗಳನ್ನು  ತೆಗೆದು ಹೊಸ ಕಪ್ಲರ್‌ಗಳನ್ನು ಜೋಡಿಸಲು ತಲಾ ಕೋಚ್‌ ಗೆ ಐದು ಲಕ್ಷ ರೂ. ಖರ್ಚು ತಗಲಲಿದೆ. ರಾಜಧಾನಿ ಟ್ರೈನ್‌ಗಳ ಬಳಿಕ ಶತಾಬ್ದಿ, ತುರಂತೋ ಮತ್ತು ಇತರ ಮೇಲ್‌/ಎಕ್ಸ್‌ಪ್ರೆಸ್‌ ರೈಲುಗಳ ಕೋಚ್‌ ಗಳಿಗೆ ಕೂಡ ಹೊಸ ಸಿಬಿಸಿಗಳನ್ನು ಜೋಡಿಸಲಾಗುವುದು ಎಂದು ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿ  ಹೇಳಿದ್ದಾರೆ. 

ಹೊಸ ಸಿಬಿಸಿಗಳು ರೈಲುಗಳ ಸುರಕ್ಷೆಗೆ ಪ್ರಯೋಜನಕಾರಿಯಾಗಲಿವೆ. ಅಪಘಾತಗಳು ಸಂಭವಿಸಿದಾಗ ಕೋಚ್‌ಗಳು ಅಡಿಮೇಲಾಗುವುದನ್ನು ತಪ್ಪಿಸಬಹುದಾಗಿದೆ. ಕೋಚ್‌ಗಳು ಅಡಿಮೇಲಾಗುವ ಅವಘಡಗಳಲ್ಲಿ ಭಾರೀ ಸಂಖ್ಯೆಯ ಜೀವಹಾನಿ ಆಗುವುದು ಕೂಡ ಸಾಮಾನ್ಯವಾಗಿದೆ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next