ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಅಭಿನಯದ “ರಾಜತಂತ್ರ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿತ್ತು. “ರಾಜತಂತ್ರ’ ಚಿತ್ರದ ಚಿತ್ರೀಕರಣ ಮುಗಿಯುತ್ತಿದ್ದಂತೆ, ಚಿತ್ರದ ಡಬ್ಬಿಂಗ್ ಕೆಲಸಗಳಿಗೆ ಚಾಲನೆ ನೀಡಿದ್ದ ಚಿತ್ರತಂಡ, ಇದೀಗ ಸದ್ದಿಲ್ಲದೆ ಡಬ್ಬಿಂಗ್ ಕೆಲಸಗಳನ್ನೂ ಪೂರ್ಣಗೊಳಿಸಿದೆ.
“ತಾಯಿಯ ಮನೆ’ ಚಿತ್ರದ ನಂತರ ರಾಘವೇಂದ್ರ ರಾಜಕುಮಾರ್ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು, ಚಿತ್ರದಲ್ಲಿ ರಾಘಣ್ಣ ನಿವೃತ್ತ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು “ರಾಜತಂತ್ರ’ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರೊಂದಿಗೆ ಹಿರಿಯ ನಟಿ ಭವ್ಯಾ, ಹಿರಿಯ ನಟರಾದ ದೊಡ್ಡಣ್ಣ, ಶ್ರೀನಿವಾಸಮೂರ್ತಿ, ಶಂಕರ್ ಅಶ್ವತ್, ನೀನಾಸಂ ಅಶ್ವತ್, ಮುನಿರಾಜು ಮೊದಲಾದವರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಉಳಿದಂತೆ ರಂಜನ್ ಹಾಸನ್, ವಲ್ಲಭ್, ಪ್ರವೀಣ್, ವೆಂಕಟೇಶ್ ಪ್ರಸಾದ್, ಹೋಳಿ ವೆಂಕಟೇಶ್, ಸ್ವಾಮಿ ಅಂಬರೀಶ್, ಪ್ರತಾಪ್, ಹೇರಂಬಾ, ಶಿವಾನಂದ್, ವಿಜಯ ಭಾಸ್ಕರ್, ಸತೀಶ್ ಗೌಡ, ಮೀರಾಶ್ರೀಗೌಡ ಮೊದಲಾದ ಕಲಾವಿದರು ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಜೆ.ಎಂ ಪ್ರಹ್ಲಾದ್‌ಕಥೆ, ಚಿತ್ರಕಥೆ ಬರದಿರುವ “ರಾಜತಂತ್ರ’ ಚಿತ್ರ “ವಿಶ್ವಂ ಡಿಜಿಟಲ್ ಮೀಡಿಯಾ’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಪಿ.ವಿ.ಆರ್ ಸ್ವಾಮಿ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಭರದಿಂದ ಪೋಸ್ಟ್ ಪ್ರೊಡಕ್ಷನ್‌ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಹೊಸವರ್ಷದ ಆರಂಭದಲ್ಲಿ “ರಾಜತಂತ್ರ’ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ.
ಮತ್ತೆ ಬಂದಳು ಮಿಠಾಯಿ ಹುಡುಗಿ ದಿಶಾ :
ಒಮ್ಮೆ ಪರಭಾಷೆಯಿಂದಕನ್ನಡಕ್ಕೆ ಎಂಟ್ರಿಕೊಟ್ಟ ನಟಿ ಮಣಿಯರು, ಆಗಾಗ್ಗೆಕನ್ನಡ ಚಿತ್ರಗಳಲ್ಲಿ ನಟಿಸುತ್ತಿರುತ್ತಾರೆ. ಈಗ ಈ ಸಾಲಿಗೆ ದಿಶಾ ಪಾಂಡೆಕೂಡಾ ಸೇರುತ್ತಾರೆ. ಯಾರು ಈ ದಿಶಾ ಪಾಂಡೆ ಎಂದು ನೀವುಕೇಳಿದರೆ “ಬಾಂಬೆ ಮಿಠಾಯಿ’ ಬಗ್ಗೆ ಹೇಳಬೇಕು.ಕೆಲವುವರ್ಷಗಳ ಹಿಂದೆ “ಬಾಂಬೆ ಮಿಠಾಯಿ’ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ದಿಶಾ ಪಾಂಡೆ, ಸ್ಯಾಂಡಲ್ ವುಡ್ ಸಿನಿಪ್ರಿಯರ ಹುಬ್ಬೇರುವಂತೆ ಮಾಡಿದ್ದರು. ಆ ನಂತರ ಒಂದೆರಡುಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ದಿಶಾ, ಸ್ಯಾಂಡಲ್ ವುಡ್‌ನಲ್ಲಿ ಬಿಝಿಯಾಗುತ್ತಾರೆ ಎನ್ನುವಾಗಲೇ, ಇದ್ದಕ್ಕಿದ್ದಂತೆ ಮುಂಬೈನತ್ತ ಮುಖ ಮಾಡಿದ್ದರು.
ಈಗ ಮತ್ತೆ ದಿಶಾ ನಾಯಕಿಯಾಗಿ “4′ ಎಂಬ ಮತ್ತೂಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ದಿಲ್ಲದೆ ಈ ಚಿತ್ರಕ್ಕೆ ಸೇರ್ಪಡೆಯಾಗಿರುವ ದಿಶಾ ಈಗಾಗಲೇ ಒಂದು ಹಂತದ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ.ಕೊಂಚ ಗ್ಯಾಪ್ ಬಳಿಕ ಮತ್ತೆ ಕನ್ನಡದತ್ತ ಮುಖ ಮಾಡುತ್ತಿರುವುದರ ಬಗ್ಗೆಕೇಳಿದರೆ, “ಇಲ್ಲಿಯವರೆಗೆ ಕನ್ನಡದಲ್ಲಿ ಹಲವು ಸಿನಿಮಾಗಳ ಆಫರ್ ಬಂದಿದ್ದರೂ,ಕೆಲವು ಸಿನಿಮಾಗಳಲ್ಲಿ ನನ್ನ ಪಾತ್ರ ಮತ್ತು ಕೆಲವು ಸಿನಿಮಾಗಳ ಸಬೆjಕ್ಟ್ ಇಷ್ಟವಾಗದಿದ್ದರಿಂದ, ಯಾವ ಸಿನಿಮಾಗಳನ್ನೂ ಒಪ್ಪಿಕೊಂಡಿರಲಿಲ್ಲ. ಈಗ ಮತ್ತೂಂದು ಒಳ್ಳೆ ಸಿನಿಮಾ ಸಿಕ್ಕಿದ್ದರಿಂದ ರೀ-ಎಂಟ್ರಿಯಾಗಿದ್ದೇನೆ’ ಎನ್ನುತ್ತಾರೆ.