ಜೈಪುರ : ಇಲ್ಲಿನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ರೋಚಕ ಜಿದ್ದಾಜಿದ್ದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಸನ್ ರೈಸರ್ಸ್ ಹೈದರಾಬಾದ್ 4 ವಿಕೆಟ್ ಗಳ ರೋಮಾಂಚನಕಾರಿ ಜಯ ಸಾಧಿಸಿದೆ.
ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಜೋಸ್ ಬಟ್ಲರ್ 95, ನಾಯಕ ಸ್ಯಾಮ್ಸನ್ ಔಟಾಗದೆ 66 ಮತ್ತು ಯಶಸ್ವಿ ಜೈಸ್ವಾಲ್ 35 ರನ್ ಗಳ ಅಮೋಘ ಆಟದ ನೆರವಿನೊಂದಿಗೆ 2 ವಿಕೆಟ್ ನಷ್ಟಕ್ಕೆ ಬರೋಬ್ಬರಿ 214 ರನ್ ಕಲೆ ಹಾಕಿತು.
ಗುರಿ ಬೆನ್ನಟ್ಟಿದ ಹೈದರಾಬಾದ್ 6 ವಿಕೆಟ್ ಕಳೆದುಕೊಂಡು 217 ರನ್ ಗಳಿಸಿತು. ಸಂದೀಪ್ ಶರ್ಮಾ ಅವರೆಸೆದ ಕೊನೆಯ ಓವರ್ ನಲ್ಲಿ19 ರನ್ ಗಳಿಸಿತು. (2 6 2 1 1 N 6 ). ಕೊನೆಯ ಎಸೆತಕ್ಕೆ 5 ರನ್ ಅಗತ್ಯವಿತ್ತು. ಸಮದ್ ಅವರು ಕ್ಯಾಚಿತ್ತರು, ಆದರೆ ಅದು ನೋ ಬಾಲ್ ಆದ ಕಾರಣ ಪಂದ್ಯ ದಿಕ್ಕು ಬದಲಿಸಿತು. ಕೊನೆಯ ಎಸೆತದಲ್ಲಿ ಸಮದ್ 6 ಬಾರಿಸಿ ಗೆಲುವಿನ ಸಂಭ್ರಮ ಆಚರಿಸಿದರು. ಅಬ್ದುಲ್ ಸಮದ್ ಔಟಾಗದೆ 7 ಎಸೆತಗಳಲ್ಲಿ 17 ರನ್ ಗಳಿಸಿದರು. ಕೊನೆಯಲ್ಲಿ ಗ್ಲೆನ್ ಫಿಲಿಪ್ಸ್ 7 ಎಸೆತಗಳಲ್ಲಿ 25 ರನ್ ಬಾರಿಸಿ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು. ಅನ್ಮೋಲ್ಪ್ರೀತ್ ಸಿಂಗ್ 33, ಅಭಿಷೇಕ್ ಶರ್ಮಾ 55, ರಾಹುಲ್ ತ್ರಿಪಾಠಿ 47, ಹೆನ್ರಿಚ್ ಕ್ಲಾಸೆನ್ 26 ರನ್ ಕೊಡುಗೆ ದೊಡ್ಡ ಮೊತ್ತ ಗುರಿ ಮುಟ್ಟಲು ಕಾರಣವಾಯಿತು.
ರಾಜಸ್ಥಾನ್ ಪರ ಉತ್ತಮ ಸ್ಪಿನ್ ದಾಳಿ ನಡೆಸಿದ ಯುಜುವೇಂದ್ರ ಚಾಹಲ್ 4 ವಿಕೆಟ್ ಪಡೆದರು.