Advertisement
ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 9 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.
Related Articles
Advertisement
ತಿಲಕ್ ಗಳಿಕೆ 65 ರನ್ (45 ಎಸೆತ, 5 ಬೌಂಡರಿ, 3 ಸಿಕ್ಸರ್). ನೇಹಲ್ ವಧೇಲ 49 ರನ್ ಕೊಡುಗೆ ಸಲ್ಲಿಸಿದರು (24 ಎಸೆತ, 3 ಫೋರ್, 4 ಸಿಕ್ಸರ್). ಸಂದೀಪ್ ಶರ್ಮ ಸಾಧನೆ 18ಕ್ಕೆ 5 ವಿಕೆಟ್.
ಟ್ರೆಂಟ್ ಬೌಲ್ಟ್ 5ನೇ ಎಸೆತದಲ್ಲೇ ರೋಹಿತ್ ಶರ್ಮ (6) ವಿಕೆಟ್ ಉರುಳಿಸಿ ರಾಜಸ್ಥಾನಕ್ಕೆ ಮೇಲುಗೈ ಒದಗಿಸಿದರು. ಇದರೊಂದಿಗೆ ಬೌಲ್ಟ್ ಮೊದಲ ಓವರ್‌ನಲ್ಲೇ 26 ವಿಕೆಟ್ ಕೆಡವಿ ಐಪಿಎಲ್ ದಾಖಲೆ ಬರೆದರು. ಭುವನೇಶ್ವರ್ ಕುಮಾರ್ ದ್ವಿತೀಯ ಸ್ಥಾನಕ್ಕೆ ಇಳಿದರು.
ಸಂದೀಪ್ ಶರ್ಮ ಕೂಡ ಮೊದಲ ಓವರ್‌ನಲ್ಲೇ ಯಶಸ್ಸು ಸಾಧಿಸಿದರು. ಖಾತೆ ತೆರೆಯದ ಇಶಾನ್ ಕಿಶನ್ ಪೆವಿಲಿಯನ್ ಸೇರಿಕೊಂಡರು. ಇವರ ಕ್ಯಾಚ್ ಕೂಡ ಸ್ಯಾಮ್ಸನ್ ಪಾಲಾಯಿತು.
ಬೌಲ್ಟ್ಗೆ ಬೌಂಡರಿ ರುಚಿ ತೋರಿಸಿದ ಸೂರ್ಯಕುಮಾರ್ ಆಟ ಸಂದೀಪ್ ಶರ್ಮ ಮುಂದೆ ನಡೆಯಲಿಲ್ಲ. ತಮ್ಮ 2ನೇ ಓವರ್‌ನ ಮೊದಲ ಎಸೆತದಲ್ಲೇ ಅವರು ಈ ಬಿಗ್ ಹಿಟ್ಟಿಂಗ್ ಬ್ಯಾಟರ್‌ನ ವಿಕೆಟ್ ಉಡಾಯಿಸಿದರು.
ಸೂರ್ಯ ಗಳಿಕೆ 10 ರನ್ ಮಾತ್ರ. 20ಕ್ಕೆ 3 ವಿಕೆಟ್ ಕಳೆದುಕೊಂಡ ಮುಂಬೈ ತೀವ್ರ ಸಂಕಟಕ್ಕೆ ಸಿಲುಕಿತು. ಸ್ಕೋರ್ 50ರ ಗಡಿ ದಾಟಿದೊಡನೆ ನಬಿ (23) ಚಹಲ್‌ಗೆ ರಿಟರ್ನ್ ಕ್ಯಾಚ್ ನೀಡಿದರು.
ಈ ಸಂದಿಗ್ಧ ಸ್ಥಿತಿಯಲ್ಲಿ ಜತೆಗೂಡಿದ ತಿಲಕ್ ವರ್ಮ-ನೇಹಲ್ ವಧೇರ 99 ರನ್ ಜತೆಯಾಟದ ಮೂಲಕ ತಂಡವನ್ನು ಹೋರಾಟಕ್ಕೆ ಅಣಿಗೊಳಿಸಿದರು.
ಹಾರ್ದಿಕ್ ಪಾಂಡ್ಯ 100 ಪಂದ್ಯ
ಈ ಪಂದ್ಯದೊಂದಿಗೆ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪರ 100 ಐಪಿಎಲ್ ಪಂದ್ಯಗಳನ್ನಾಡಿದ ಹಿರಿಮೆಗೆ ಪಾತ್ರರಾದರು. ಅವರು ಎಂದೋ ಈ ಸಾಧನೆ ಮಾಡಬೇಕಿತ್ತು. ಆದರೆ 2 ವರ್ಷಗಳ ಕಾಲ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸಿದ ಕಾರಣ ವಿಳಂಬಗೊಂಡಿತು.
ಪಾಂಡ್ಯ 100 ಪಂದ್ಯಗಳಲ್ಲಿ ಮುಂಬೈಯನ್ನು ಪ್ರತಿನಿಧಿಸಿದ 7ನೇ ಆಟಗಾರ. ಉಳಿದವರೆಂದರೆ ರೋಹಿತ್ ಶರ್ಮ (215), ಕೈರನ್ ಪೊಲಾರ್ಡ್ (211), ಹರ್ಭಜನ್ ಸಿಂಗ್ (158), ಲಸಿತ ಮಾಲಿಂಗ (139), ಅಂಬಾಟಿ ರಾಯುಡು (136) ಮತ್ತು ಜಸ್‌ಪ್ರೀತ್ ಬುಮ್ರಾ (131).
ಮುಂಬೈ ಪರ ಆಡಿದ ಈವರೆಗಿನ 99 ಪಂದ್ಯ ಗಳಲ್ಲಿ ಹಾರ್ದಿಕ್ ಪಾಂಡ್ಯ 37.86ರ ಸರಾಸರಿಯಲ್ಲಿ1,617 ರನ್ ಪೇರಿಸಿದ್ದಾರೆ. ಸ್ಟ್ರೈಕ್‌ರೇಟ್ 133.49. ಉರುಳಿಸಿದ ವಿಕೆಟ್‌ಗಳ ಸಂಖ್ಯೆ 36. ಪ್ರಸಕ್ತ ಋತುವಿನಲ್ಲಿ ಮುಂಬೈ ಪರ 7 ಪಂದ್ಯಗಳನ್ನಾಡಿದ್ದು, 141 ರನ್ ಮತ್ತು 4 ವಿಕೆಟ್ ಗಳಿಸಿದ್ದಾರೆ.