ರಾಜಸ್ಥಾನ: ಹದಿನೆಂಟು ವರ್ಷಗಳಿಂದ ಗಂಡು ಮಗುವಿಗಾಗಿ ಕುಟುಂಬವೊಂದು ಪಟ್ಟ ವ್ರತ ಅಷ್ಟಿಷ್ಟಲ್ಲ ಕೊನೆಗೂ ದೇವರು ಗಂಡು ಮಗುವನ್ನು ಕರುಣಿಸಿದ್ದಾನೆ ಆದರೆ ಹದಿನಾಲ್ಕು ತಿಂಗಳಲ್ಲೇ ದೇವರು ಮಗುವನ್ನು ವಾಪಸ್ಸು ಕರೆಸಿಕೊಂಡಿರುವ ಮನಕಲಕುವ ಘಟನೆ ರಾಜಸ್ಥಾನದ ಬಾಂಸ್ವಾಡದ ಲೋಹಾರಿ ಠಾಣಾ ಪ್ರದೇಶದ ಸರೆಡಿ ಗ್ರಾಮದಲ್ಲಿ ನಡೆದಿದೆ.
ಸರೆಡಿ ಗ್ರಾಮದ ನಿವಾಸಿ ಹೀರೆನ್ ಜೋಶಿ ಅವರಿಗೆ ಮೂವರು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಹಾಗೂ ಇನ್ನೋರ್ವ ಹದಿನಾಲ್ಕು ತಿಂಗಳ ಗಂಡು ಮಗು ಮಾನ್ವಿಕ್.
ಹಿರೇನ್ ಜೋಶಿ ಅವರು ಸರಕಾರಿ ಶಿಕ್ಷಕನಾಗಿದ್ದು ಅವರಿಗೆ ಮೊದಲ ಎರಡು ಹೆಣ್ಣು ಮಕ್ಕಳು ಇದಾದ ಬಳಿಕ ಗಂಡು ಮಗು ಬೇಕು ಎಂದು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ ಕೊನೆಗೆ ಸುಮಾರು 18 ವರ್ಷಗಳ ಕಾಲ ಗಂಡು ಮಗುವಿಗಾಗಿ ಜೋಶಿ ಕುಟುಂಬ ದೇವಸ್ಥಾನ, ಆಸ್ಪತ್ರೆ, ಅಂತ ಹೇಳಿ ನಾನಾ ರೀತಿಯ ವ್ರತವನ್ನು ಮಾಡಿ ಕೊನೆಗೂ ಹದಿನೆಂಟು ವರ್ಷದ ಬಳಿಕ ಗಂಡು ಮಗು ಹುಟ್ಟಿದೆ ಮೂವರು ಮಕ್ಕಳನ್ನು ಪ್ರೀತಿಯಿಂದಲೇ ನೋಡುತ್ತಿದ್ದ ಕುಟುಂಬಕ್ಕೆ ಸಂತೋಷವನ್ನು ಹೆಚ್ಚು ಸಮಯ ನೀಡಲಿಲ್ಲ, ಕಾರಣ ಹದಿನಾಲ್ಕು ತಿಂಗಳ ಮಾನ್ವಿಕ್ ಮನೆಯಲ್ಲಿ ಆಟವಾಡುವ ವೇಳೆ ಕೈಗೆ ಸಿಕ್ಕ ವಿಕ್ಸ್ ಡಬ್ಬದ ಮುಚ್ಚಳವನ್ನು ಬಾಯಿಗೆ ಹಾಕಿದ್ದಾನೆ, ಈ ವೇಳೆ ಮುಚ್ಚಳ ಗಂಟಲಲ್ಲಿ ಸಿಲುಕಿ ಉಸಿರಾಟಕ್ಕೆ ತೊಂದರೆಯಾಗಿ ಮಗು ಅಳಲು ಆರಂಬಿಸಿವುದೇ ಅಲ್ಲದೆ ಜೋರಾಗಿ ಕೆಮ್ಮು ತೆಗೆಯುತ್ತಿತ್ತು ಇದನ್ನು ಗಮನಿಸಿದ ಪೋಷಕರು ಮಗುವಿನ ಬಾಯಿಯನ್ನು ನೋಡಿದಾಗ ಮುಚ್ಚಳ ಮಗುವಿನ ಗಂಟಲಲ್ಲಿ ಸಿಲುಕಿರುವುದು ಕಂಡುಬಂದಿದೆ, ತೆಗೆಯಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ, ಕೂಡಲೇ ಮಗುವನ್ನು ಹತ್ತಿರದ ಸಮುದಾಯ ಅರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ ದುರದೃಷ್ಟವಶಾತ್ ಅಲ್ಲಿ ವೈದ್ಯರು ಇರಲಿಲ್ಲ ಸಿಬಂದಿಗಳು ಮಾತ್ರ ಇದ್ದರು ಇದರಿಂದ ಕಂಗಾಲಾದ ಕುಟುಂಬ ಮಗುವನ್ನು ಅಲ್ಲಿಂದ ಬಾಂಸ್ವಾಡ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಮಗು ಆಸ್ಪತ್ರೆ ದಾರಿ ಮಧ್ಯೆ ಉಸಿರು ಚೆಲ್ಲಿತ್ತು ಆದರೂ ಧೈರ್ಯ ಮಾಡಿ ಮಗು ಬದುಕಲಿದೆ ಎಂಬ ಹಂಬಲದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರು ಪರಿಶೀಲನೆ ನಡೆಸಿದ ವೇಳೆ ಮಗು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮಗುವಿನ ಅಗಲುವಿಕೆಯ ಸುದ್ದಿ ಕೇಳಿ ಮಗುವಿನ ಪೋಷಕರಿಗೆ ಸಿಡಿಲು ಬಡಿದಂತಾಗಿದೆ. ಅಲ್ಲದೆ ಮಾನ್ವಿಕ್ ಇಲ್ಲ ಎಂಬ ವಿಚಾರ ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.
ವೈದ್ಯರ ವಿರುದ್ಧ ಕುಟುಂಬಸ್ಥರ ಕಿಡಿ:
ಅವಘಡ ಸಂಭವಿಸಿದ ಕೂಡಲೇ ಮಗುವನ್ನು ಸಮುದಾಯ ಅರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಾಗ ಆಸ್ಪತ್ರೆಯಲ್ಲಿ ವೈದ್ಯರು ಸಕಾಲಕ್ಕೆ ಸಿಗದೇ ಇದ್ದುದರಿಂದ ಮಗುವಿನ ಪ್ರಾಣ ಹೋಯಿತು ಒಂದು ವೇಳೆ ವೈದ್ಯರು ಸಕಾಲಕ್ಕೆ ಸಿಗುತಿದ್ದರೆ ನಮ್ಮ ಮಗು ಬದುಕುಳಿಯುತ್ತಿತ್ತು ಎಂದು ಆಸ್ಪತ್ರೆಯ ವ್ಯವಸ್ಥೆಯ ವಿರುದ್ಧ ಕಿಡಿಕಾರಿದರು.
ಮಕ್ಕಳ ಬಗ್ಗೆ ಎಚ್ಚರವಹಿಸಿ:
ಸಣ್ಣ ಮಕ್ಕಳು ಮನೆಯಲ್ಲಿ ಆಟವಾಡುವಾಗ ಕೈಗೆ ಸಿಕ್ಕ ಎಲ್ಲ ವಸ್ತುಗಳನ್ನು ಬಾಯಿಗೆ ಹಾಕುತ್ತಾರೆ ಹಾಗಾಗಿ ಸಣ್ಣ ಮಕ್ಕಳನ್ನು ಆಟವಾಡಲು ಬಿಡುವಾಗ ಅವರ ಹತ್ತಿಯ ಯಾವುದೇ ಸಣ್ಣ ವಸ್ತುಗಳು ಇರದಂತೆ ಜಾಗ್ರತೆ ವಹಿಸಿ, ಅಲ್ಲದೆ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇಡುವುದು ಅತೀ ಅಗತ್ಯ, ಇಲ್ಲದಿದ್ದಲ್ಲಿ ಮಗುವಿನ ಹತ್ತಿರ ಯಾರಾದರೂ ಇರುವುದು ಸೂಕ್ತ ಎಚ್ಚರ ತಪ್ಪಿದರೆ ಅಪಾಯ ಮಾತ್ರ ತಪ್ಪಿದ್ದಲ್ಲ.
ಇದನ್ನೂ ಓದಿ: Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!