Advertisement

ಹೆಂಡತಿಯನ್ನು ಕತ್ತರಿಯಿಂದ ಇರಿದು ಕೊಂದು ಮೃತದೇಹದ ಬಳಿ ಕುಳಿತು ವಿಡಿಯೋ ಗೇಮ್ ಆಡಿದ ಪತಿರಾಯ

12:03 PM Dec 08, 2020 | sudhir |

ಜೋಧ್‌ಪುರ: ಪತಿ ತನ್ನ ಹೆಂಡತಿಯನ್ನು ಕತ್ತರಿಗಳಿಂದ ಇರಿದು ಕೊಂದ ಘಟನೆ ಜೋಧ್‌ಪುರದ ಬಿಜೆಎಸ್ ಕಾಲೋನಿಯಲ್ಲಿ ರವಿವಾರ ರಾತ್ರಿ ಸಂಭವಿಸಿದೆ.

Advertisement

ಪತಿ ಹೆಂಡತಿಯನ್ನು ಕೊಂದ ಬಳಿಕ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾನೆ, ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಮೃತ ಮಹಿಳೆಯ ಬಳಿಯಲ್ಲೇ ಕುಳಿತು ತನಗೇನು ಗೊತ್ತಿಲ್ಲ ಎಂಬಂತೆ ತನ್ನ ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಮಹಿಳೆಯನ್ನು ಶಿವ್ ಕನ್ವಾರ್ (30) ಎನ್ನಲಾಗಿದ್ದು ಆರೋಪಿ ಪತಿ ವಿಕ್ರಮ್ ಸಿಂಗ್ (35)ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸ್ ಅಧಿಕಾರಿಗಳ ಹೇಳಿಕೆಯಂತೆ ತಾನು ತನ್ನ ಹೆಂಡತಿಯನ್ನು ಕೊಲೆ ಮಾಡಿರುವುದಾಗಿ ಶನಿವಾರ ತಮ್ಮ ಠಾಣೆಗೆ ಕರೆಯೊಂದು ಬಂದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದು ಪಕ್ಕದಲ್ಲೇ ಆಕೆಯ ಪತಿ ತನಗೇನು ಗೊತ್ತಿಲ್ಲ ಎನ್ನುವ ರೀತಿ ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ, ಕೂಡಲೇ ಎಚ್ಚೆತ್ತ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟೋತ್ತಿಗಾಗಲೇ ಮಹಿಳೆ ಸಾವನ್ನಪ್ಪಿದ್ದರು ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ:“ಆರ್ ಆರ್ ಆರ್” ಶೂಟಿಂಗ್ ಗೆ ಅಲಿಯಾ ಭಟ್, ಸ್ವಾಗತ ಕೋರಿದ ರಾಜಮೌಳಿ!

Advertisement

ವಿಕ್ರಮ್ ಸಿಂಗ್ ಅವರಿಗೆ ಇಬ್ಬರು ಮಕ್ಕಳಿದ್ದು ಘಟನೆ ನಡೆಯುವ ವೇಳೆ ಅವರು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಕ್ರಮ್ ಸಿಂಗ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next