Advertisement

ಕಣ್ಣೀರು ತಂದ ಕಂದಮ್ಮನ ನಡೆ

08:15 AM Jul 16, 2018 | Karthik A |

ಜೈಪುರ: ಕಾಶ್ಮೀರದಲ್ಲಿ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾದ ಮುಕುತ್‌ ಬಿಹಾರಿ ಮೀನಾ (25) ಅವರ ಪಾರ್ಥಿವ ಶರೀರ ಜೈಪುರದಲ್ಲಿರುವ ಅವರ ಗ್ರಾಮಕ್ಕೆ ಬಂದಾಗ ನಡೆದ ಘಟನೆಯೊಂದು ದೇಶವಾಸಿಗಳಲ್ಲಿ ಕಣ್ಣೀರು ತರಿಸಿದೆ. ತ್ರಿವರ್ಣ ಧ್ವಜವನ್ನು ಹೊದಿಸಿದ ಯೋಧನ ಪಾರ್ಥಿವ ಶರೀರವನ್ನು ಅವರ ಮನೆಯ ಆವರಣದಲ್ಲಿ ಇಟ್ಟೊಡನೆ, ಅವರ ಪುಟ್ಟ ಮಗುವು ಪಾರ್ಥಿವ ಶರೀರದ ಮೇಲೆ ಬಂದು ಕುಳಿತು, ಅಪ್ಪನ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದ ದೃಶ್ಯವು ಎಂಥ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಈ ಘಟನೆಗೆ ಸಾಕ್ಷಿಯಾದ ಜಲಾವರ್‌ ನ ಜಿಲ್ಲಾಧಿಕಾರಿ ಜಿತೇಂದ್ರ ಸೋನಿ ಅವರು ಫೇಸ್‌ ಬುಕ್‌ ನಲ್ಲಿ ಆ ಮಗುವಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. 

Advertisement

‘ನೀನು ಬಂದು ಅಪ್ಪನ ಮೃತದೇಹದ ಮೇಲೆ ಕುಳಿತಿದ್ದನ್ನು, ಸ್ವಲ್ಪವೂ ಅಳದೇ ಅಪ್ಪನನ್ನೇ ದಿಟ್ಟಿಸುತ್ತಿದ್ದುದನ್ನು ನೋಡಿದ ನಮ್ಮ ಮನಗಳಲ್ಲಿ ದುಃಖ ಉಮ್ಮಳಿಸಿ ಬಂದಿತ್ತು. ಆ ಕ್ಷಣದಲ್ಲಿ ನಿನ್ನ ಮುಗ್ಧತೆ, ನಿನ್ನ ತಂದೆಯ ತ್ಯಾಗ ಮಾತ್ರವೇ ನಮ್ಮನ್ನು ಆವರಿಸಿತ್ತು. ಇಡೀ ದೇಶದ ನಾಗರಿಕರ ಹಾರೈಕೆ ನಿನ್ನ ಮೇಲಿರುತ್ತದೆ. ಚೆನ್ನಾಗಿರು ಕಂದಾ’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next