Advertisement

ರಾಹುಲ್, ಪ್ರಿಯಾಂಕಾ ಜತೆ ಪೈಲಟ್ ಚರ್ಚೆ; ಮೂರು ಬೇಡಿಕೆ ಈಡೇರಿಸಲು ಪಟ್ಟು

07:31 PM Aug 10, 2020 | Nagendra Trasi |

ನವದೆಹಲಿ: ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲಟ್ ಸೋಮವಾರ(ಆಗಸ್ಟ್ 10, 2020) ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿರುವುದಾಗಿ ವರದಿ ತಿಳಿಸಿದೆ.

Advertisement

ಮೂಲಗಳ ಪ್ರಕಾರ, ರಾಹುಲ್ , ಪ್ರಿಯಾಂಕಾ ಜತೆಗಿನ ಮಾತುಕತೆ ನಡೆಸಿರುವ ಬೆಳವಣಿಗೆ ಸಚಿನ್ ಪೈಲಟ್ ಗೆ ತೃಪ್ತಿ ತಂದಿದ್ದು, ಬಹುತೇಕ ರಾಜಸ್ಥಾನ್ ರಾಜಕೀಯ ಜಿದ್ದಾಜಿದ್ದಿ ಕೊನೆಗೊಳ್ಳುವ ಸಾಧ್ಯತೆ ಇದ್ದಿರುವುದಾಗಿ ವಿವರಿಸಿದೆ.

ರಾಹುಲ್, ಪ್ರಿಯಾಂಕಾ ಜತೆಗಿನ ಮಾತುಕತೆ ವೇಳೆ ಸಚಿನ್ ಪೈಲಟ್ ತನ್ನ(ಮೂರು) ಬೇಡಿಕೆಯ ಪಟ್ಟಿಯನ್ನು ಇಟ್ಟಿದ್ದು, ಬೇಡಿಕೆ ಈಡೇರಿಸಿದರೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧದ ಬಂಡಾಯ ಅಂತ್ಯಗೊಳಿಸುವುದಾಗಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.

ಸಚಿನ್ ಪೈಲಟ್ ಹಾಗೂ  18 ಮಂದಿ ರಾಜಸ್ಥಾನ್ ಶಾಸಕರು ಬಂಡಾಯ ಸಾರಿದ ಹಿನ್ನೆಲೆಯಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಪೈಲಟ್ ಹಾಗೂ ಹಾಗೂ ಆಪ್ತ ಶಾಸಕರು ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಗದ್ದುಗೆಯಿಂದ ಇಳಿಸಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಳ್ಳುವ ಸಾಧ್ಯತೆ ಇದ್ದಿರುವುದಾಗಿ ಊಹಾಪೋಹ ಹಬ್ಬಿತ್ತು.

ಇದೆಲ್ಲಾ ಸತ್ಯಕ್ಕೆ ದೂರವಾದ ವಿಷಯ ಎಂದಿರುವ ಸಚಿನ್ ಪೈಲಟ್ ತಾನು ಯಾರನ್ನೂ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ತಾವು ರಾಹುಲ್ ಮತ್ತು ಪ್ರಿಯಾಂಕಾ ಜತೆ ನಡೆಸಿದ ಮಾತುಕತೆಯಲ್ಲಿ ಬೇಡಿಕೆಗಳ ಪಟ್ಟಿಯನ್ನು ನೀಡಿರುವುದಾಗಿ ತಿಳಿಸಿದ್ದಾರೆ.

Advertisement

ಏನಿದು ಮೂರು ಬೇಡಿಕೆ:

1)ಸಚಿನ್ ಪೈಲಟ್ ಮುಂದಿನ ಮುಖ್ಯಮಂತ್ರಿ ಎಂದು ಸಾರ್ವಜನಿಕವಾಗಿ ಘೋಷಿಸಬೇಕು

2)ಒಂದು ಅದು ಸಾಧ್ಯವಾಗದಿದ್ದರೆ, ಸಚಿನ್ ಪೈಲಟ್ ಗುಂಪಿನ ಇಬ್ಬರು ಹಿರಿಯ ಮುಖಂಡರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಮತ್ತು ಉಳಿದ ಶಾಸಕರನ್ನು ಕ್ಯಾಬಿನೆಟ್ ಅಥವಾ ನಿಗಮ, ಮಂಡಳಿ, ಕಾರ್ಪೋರೇಶನ್ ಗಳಿಗೆ ನೇಮಕ ಮಾಡಬೇಕು. ಸಚಿನ್ ಪೈಲಟ್ ಗೆ ದಿಲ್ಲಿಯಲ್ಲಿ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಹುದ್ದೆ ನೀಡಬೇಕು.

3)ಗೌರವಯುತವಾಗಿ ಪಕ್ಷಕ್ಕೆ ವಾಪಸ್ ಆದ ಮೇಲೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಹುಲ್ ಗಾಂಧಿ ನೀಡಿರುವ ಭರವಸೆಯನ್ನು ಈಡೇರಿಸುವುದಾಗಿ ಸಾರ್ವಜನಿಕವಾಗಿ ಘೋಷಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next