Advertisement
ತಮ್ಮ ಕರ್ತವ್ಯದ ನಡುವೆ ಮಾನಸಿಕವಾಗಿಯೂ ದೃಢವಾಗಿರಬೇಕಾದ ಅನಿವಾರ್ಯತೆ ಇರುವಂಥ ಈ ಸಮಯದಲ್ಲಿ ರಾಜಸ್ಥಾನದ ವೈದ್ಯರ ತಂಡವೊಂದು ಗುಂಪಾಗಿ ಸೇರಿ ಹಾಡಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ. ದೇಹಕ್ಕೆ ಸುರಕ್ಷತಾ ಉಡುಪುಗಳನ್ನು ಹಾಗೂ ಮಾಸ್ಕ್ ಧರಿಸಿಕೊಂಡು ಈ ವೈದ್ಯರು, ‘ಹಮ್ ಹಿಂದುಸ್ಥಾನಿ’ ಸಿನಿಮಾದ ‘ಛೋಡ್ ಕಲ್ ಕೀ ಬಾತೇಂ’ (ನಾಳೆಯ ವಿಷಯ ಬಿಟ್ಟುಬಿಡಿ) ಎಂಬ ಹಾಡನ್ನು ಹಾಡುವ ವಿಡಿಯೋವಿದು.At the epicentre of COVID 19 in Rajasthan Government Hospital in Bhilwara – Drs Mushtaq, Gaur & Prajapat, paramedics Mukesh, Sain, Gyan, Urwashi, Sarfaraz and Jalam are working 24*7 to beat Coronavirus.
ಡಾಕ್ಟರ್ ಗಳಾದ ಮುಷ್ತಾಕ್, ಗೌರ್ ಹಾಗೂ ಪ್ರಜಾಪತ್ ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗಳಾದ ಮುಖೇಶ್, ಸೈನ್, ಗ್ಯಾನ್, ಊರ್ವಶಿ, ಸರ್ಫರಾಜ್ ಮತ್ತು ಝಾಲಂ ಅವರ ತಂಡ ರಾಜಸ್ಥಾನದ ಭಿಲ್ವಾರದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕು ಪೀಡಿತರ ಶುಷ್ರೂಷೆಯಲ್ಲಿ ಹಗಲಿರುಳೂ ತಮ್ಮನ್ನು ತೊಡಗಿಸಿಕೊಂಡಿದೆ. ಇದನ್ನು ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುರ್ಮಾ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ, ಈ ಮಾರಕ ವೈರಸ್ ವಿರುದ್ಧ ದಿನದ 24 ಗಂಟೆಯೂ ದಣಿವರಿಯದೇ ಹೋರಾಡುತ್ತಿರುವ ಈ ವೈದ್ಯರೇ ನಮ್ಮ ನಿಜವಾದ ಹೀರೋಗಳು. ಇದು ನವಭಾರತದ ಹುಮ್ಮಸ್ಸು ಎಂಬ ಅಡಿಬರಹವನ್ನೂ ಬರೆದಿದ್ದಾರೆ. ವಿಡಿಯೋ ಹೊರಬಂದ ಕೆಲವೇ ಕ್ಷಣಗಳಲ್ಲಿ ಇದು ಹಿಟ್ ಆಗಿದ್ದು, ಸಾವಿರಾರು ಮಂದಿ ವೈದ್ಯರನ್ನು ಹಾಡಿ ಹೊಗಳಿದ್ದಾರೆ.