Advertisement

ರಾಜಸ್ಥಾನ ಬಿಜೆಪಿ ಸಚಿವರ ಪತ್ನಿಯರ ಆಸ್ತಿ 5 ವರ್ಷದಲ್ಲಿ ಭಾರೀ ಏರಿಕೆ

11:51 AM Nov 27, 2018 | udayavani editorial |

ಹೊಸದಿಲ್ಲಿ : ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ರಾಜಸ್ಥಾನದ ಬಿಜೆಪಿ ಸಚಿವರ ಮಡದಿಯರ ಆಸ್ತಿ ಪಾಸ್ತಿ ಭಾರಿ ಪ್ರಮಾಣದಲ್ಲಿ ಏರಿರುವುದು ಇದೀಗ ಬಹಿರಂಗವಾಗಿದೆ.

Advertisement

ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲಿ ಡಿಸೆಂಬರ್‌ 7ರಂದು ಮತದಾನ ನಡೆಯಲಿದ್ದು ಡಿ.11ರಂದು ಮತ ಎಣಿಕೆ ನಡೆದು ಫ‌ಲಿತಾಂಶ ಪ್ರಕಟಗೊಳ್ಳಲಿದೆ. 

ಪ್ರತೀ ಬಾರಿ ಆಳುವ ಪಕ್ಷವನ್ನು ಬದಲಾಯಿಸಿ ವಿರೋಧ ಪಕ್ಷವನ್ನು ಅಧಿಕಾರಕ್ಕೇರಿಸುವ ಸಂಪ್ರದಾಯವಿರುವ ರಾಜಸ್ಥಾನದಲ್ಲಿ ಈ ಬಾರಿ ಆಳುವ ಬಿಜೆಪಿ ಪತನಗೊಂಡು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದೆಂದು ಸಮೀಕ್ಷೆಗಳು ಅಂದಾಜಿಸಿವೆ.

ರಾಜಸ್ಥಾನದ ಪಂಚಾಯತಿ ರಾಜ್‌ ಸಚಿವ ರಾಜೇಂದ್ರ ರಾಥೋರ್‌ ಅವರ ಪತ್ನಿ ಚಾಂದ್‌ ಕನ್ವರ್‌ ಮತ್ತು ಆರೋಗ್ಯ ಸಚಿವ ಕಾಲೀಚರಣ್‌ ಸರಾಫ್ ಅವರ ಪತ್ನಿ ಅಲ್ಕಾ ಸರಾಫ್ ಅವರ ಆಸ್ತಿಪಾಸ್ತಿ ಕಳೆದ ಐದು ವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಿರುವುದು ಗೊತ್ತಾಗಿದೆ. 

ಇದೇ ರೀತಿ ಗಮನಾರ್ಹ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಹೆಚ್ಚಳ ಕಂಡು ಬಂದಿರುವ ಸಚಿವರ ಪತ್ನಿಯರಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಶ್ರೀಚಂದ್‌ ಕೃಪಲಾನಿ, ಪಿಡಬ್ಲ್ಯುಡಿ ಸಚಿವ ಯೂನುಸ್‌ ಖಾನ್‌ ಮತ್ತು ಕೈಗಾರಿಕಾ ಸಚಿವ ರಾಜಪಾಲ್‌ ಸಿಂಗ್‌ ಶೇಖಾವತ್‌ ಅವರ ಪತ್ನಿಯರೂ ಸೇರಿದ್ದಾರೆ. 

Advertisement

2108ರ ರಾಜಸ್ಥಾನ ಅಸೆಂಬ್ಲಿ ಚುನಾವಣೆಗಾಗಿ ಈ ಸಚಿವರು ಚುನಾವಣಾ ನಿರ್ವಚನಾಧಿಕಾರಿಯ ಮುಂದೆ ಘೋಷಿಸಿಕೊಂಡ ತಮ್ಮ ಆಸ್ತಿಪಾಸ್ತಿ ವಿವರಗಳಲ್ಲಿ ಅವರ ಪತ್ನಿಯರ ಆಸ್ತಿಪಾಸ್ತಿ ವಿವರಗಳೂ ಇದ್ದು ಈ ಮೂಲಕ ಅವರ ಅಪಾರ ಸಿರಿವಂತಿಕೆ ಬಯಲಾಗಿದೆ. 

ಐದು ವರ್ಷಗಳ ಹಿಂದೆ ಆರೋಗ್ಯ ಸಚಿವ ಕಾಲೀಚರಣ್‌ ಸರಾಫ್ ಅವರ ಪತ್ನಿ ಅಲ್ಕಾ ಸರಾಫ್ ಅವರ ಆಸ್ತಿ 2.49 ಕೋಟಿ ರೂ. ಇದ್ದದ್ದು ಈಗ 4.35 ಕೋಟಿ ರೂ.ಗೆ ಏರಿದೆ. ಸಚಿವ ರಾಜೇಂದ್ರ ರಾಥೋರ್‌ ಅವರ ಪತ್ನಿ ಚಾಂದ್‌ ಕನ್ವರ್‌ ಅವರ ಆಸ್ತಿ 15.98 ಕೋಟಿ ಇದ್ದದ್ದು ಈಗ 18.61 ಕೋಟಿ ರೂ. ಆಗಿದೆ. 

ಸಚಿವ ರಾಜಪಾಲ್‌ ಸಿಂಗ್‌ ಶೇಖಾವತ್‌ ಅವರ ಪತ್ನಿ ಭುವನೇಶ್ವರಿ ಅವರ ಆಸ್ತಿ 2013ರಲ್ಲಿ 42.20 ಲಕ್ಷ ಇದ್ದದ್ದು ಈಗ 83.26 ಲಕ್ಷ ರೂ. ಆಗಿದೆ. ಸಚಿವ ಶ್ರೀಚಂದ್‌ ಕೃಪಲಾನಿ ಅವರ ಪತ್ನಿಯ ಆಸ್ತಿ 2.93 ಕೋಟಿ ಇದ್ದದ್ದು ಈಗ 3.31 ಕೋಟಿ ಆಗಿದೆ. ಸಚಿವ ಯೂನುಸ್‌ ಖಾನ್‌ ಅವರ ಪತ್ರಿ ರೋಶ್‌ನೀ ಬಾನೋ ಅವರ ಆಸ್ತಿ 19.54 ಲಕ್ಷ ಇದ್ದದ್ದು ಈಗ ಐದು ವರ್ಷಗಳ ಬಳಿಕ 36.20 ಲಕ್ಷ ರೂ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next