Advertisement

Rajasthan;ಬಿಜೆಪಿ 2ನೇ ಪಟ್ಟಿ: ಝಲ್ರಾಪಟನ್‌ನಿಂದ ಐದನೇ ಬಾರಿ ಕಣಕ್ಕಿಳಿಯಲಿರುವ ವಸುಂಧರಾ

04:46 PM Oct 21, 2023 | Team Udayavani |

ಜೈಪುರ: ಬಿಜೆಪಿ ರಾಜಸ್ಥಾನ ವಿಧಾನಸಭಾ ಚುನಾವಣೆಗೆ 83 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ಅವರು ಝಲ್ರಾಪಟನ್‌ನಿಂದ ಐದನೇ ಬಾರಿಗೆ ಕಣಕ್ಕಿಳಿಯುತ್ತಿದ್ದಾರೆ.

Advertisement

ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್ ತಾರಾನಗರದಿಂದ ಮತ್ತು ಬಿಜೆಪಿಯ ಮಾಜಿ ಅಧ್ಯಕ್ಷ ಸತೀಶ್ ಪುನಿಯಾ ಅಂಬರ್‌ನಿಂದ ಸ್ಪರ್ಧಿಸಲಿದ್ದಾರೆ. ಇದೆಲ್ಲದರ ನಡುವೆ ಬಿಜೆಪಿ ಪಟ್ಟಿಯಲ್ಲಿ 10 ಮಹಿಳೆಯರಿಗೆ, 15 ಎಸ್ಸಿ, 10 ಎಸ್ಟಿ ಸಮುದಾಯದವರಿಗೆ ಟಿಕೆಟ್ ನೀಡಲಾಗಿದೆ. ಜಾತಿ ಸಮೀಕರಣದತ್ತ ಗಮನ ಹರಿಸಿದರೆ, ಬಿಜೆಪಿ ಎಲ್ಲಾ ಸಮಾಜದೊಂದಿಗೆ ಕೆಲಸ ಮಾಡಿ ಮತ್ತೆ ಅಧಿಕಾರಕ್ಕೆ ಏರಲು ಪ್ರಯತ್ನಿಸುತ್ತಿದೆ.

ಬಿಜೆಪಿ 41 ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿದ್ದು ಈ ಮೂಲಕ ಒಟ್ಟು 200 ವಿಧಾನಸಭಾ ಸ್ಥಾನಗಳ ಪೈಕಿ 124 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next