Advertisement
ಶಿವಮೊಗ್ಗದಲ್ಲಿ ರಮೇಶ್ ಜಾರಕಿಹೊಳಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ರಾಜಶೇಖರ್ ಮುಲಾಲಿ, ಇದೊಂದು ದೊಡ್ಡ ಷಡ್ಯಂತರ. ಸಂಬಂಧಪಟ್ಟ ಸಚಿವರ ವಿರುದ್ಧ ಷಡ್ಯಂತರ ನಡೆದಿದೆ. ಸಚಿವರ ಬೆಳವಣಿಗೆಯನ್ನು ಸಹಿಸದ ಕೆಲವರು ಷಡ್ಯಂತರ ನಡೆಸಿದ್ದಾರೆ. ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದ ಶಾಸಕರುಗಳು ತಾಂತ್ರಿಕವಾಗಿ ಮುಗ್ಧರಾಗಿದ್ದಾರೆ. ಅವರೆಲ್ಲರೂ ಬಹಳ ಎಚ್ಚರಿಕೆಯಿಂದಿರಬೇಕು. ಎಲ್ಲಿಯೂ ಮೈ ಮರೆಯಬಾರದು ಎಂದರು.
Related Articles
Advertisement
ಇದನ್ನೂ ಓದಿ:ಅತ್ಯಾಚಾರ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ..!
ಈ ನಡುವೆ ಹಾದಿಬೀದಿಯಲ್ಲಿ ಹೋಗುವವರೆಲ್ಲಾ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳುತ್ತಾರೆ ಎಂದು ಮುಖ್ಯಮಂತ್ರಿಗಳು ಸದನದಲ್ಲಿ ಹೇಳಿದ್ದಾರೆ ಎಂದ ಅವರು, ಮುಖ್ಯಮಂತ್ರಿಗಳ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಒಬ್ಬ ಘನತೆವೆತ್ತ ಮುಖ್ಯಮಂತ್ರಿಗಳು ಈ ರೀತಿ ಮಾತನಾಡಬಾರದು. ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಈ ರೀತಿ ಹೇಳಿರುವುದು ತಪ್ಪು ಎಂದು ತಿಳಿಸಿದರು.
RTI ನಲ್ಲಿ ದನ ಕಾಯುವನಿಂದ ಹಿಡಿದು ಯಾರು ಬೇಕಾದರೂ ಮಾಹಿತಿ ತೆಗೆದುಕೊಳ್ಳಬಹುದು. ಬುದ್ಧಿವಂತರೇ ಕೇಳಬೇಕು ಎಂದು ಏನೂ ಇಲ್ಲ, ಅನಕ್ಷರಸ್ಥ ಕೂಡ ಮಾಹಿತಿ ಕೇಳಬಹುದು ಎಂದು ಅಭಿಪ್ರಾಯಪಟ್ಟರು.
ಹೋರಾಟಗಾರರನ್ನು ಈ ರೀತಿ ಹತ್ತಿಕ್ಕುವ ಪ್ರಯತ್ನ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಾನು ಸಾಕಷ್ಟು ಈ ರೀತಿ ನೋಡಿಕೊಂಡು ಬಂದಿದ್ದೇನೆ. ನಾನು ಆಸೆ, ಆಮೀಷಗಳಿಗೆ ಬಲಿಯಾಗದೇ, ಕಾನೂನು ವ್ಯಾಪ್ತಿಯಲ್ಲಿ ನನ್ನ ಕೆಲಸ ಮಾಡುತ್ತಿದ್ದೇನೆ. ನಾನು ಹೆದರಿಕೆಗೆ, ಬೆದರಿಕೆಗೆ ಬಗ್ಗುವವನಲ್ಲ ಎಂದರು.