Advertisement
ಹುಣಸೂರು ಅಂಬೇಡ್ಕರ್ ಭವನದಲ್ಲಿ ತಾಲೂಕು ಜನರಿಗಾಗಿ ಜಾಗತಿ ವೇದಿಕೆ ಸಮಾನತೆ ಹರಿಕಾರ ಡಿ.ದೇವರಾಜ ಅರಸರ 102ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಜನಜಾಗತಿ ಜನಾಂದೋಲನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ತಾನು ಬರೆದ 6 ಪುಸ್ತಕಗಳಲ್ಲಿ ಅರಸರನ್ನು ಉಲ್ಲೇಖೀಸಿದ್ದೇನೆ. ಹಳ್ಳಿ ಹಕ್ಕಿ ಹಾಡು ಪುಸ್ತಕ ಅರಸರ ಜೀವನಚರಿತ್ರೆಯಾದರೂ ಅದು ನನ್ನ ಆತ್ಮಕಥೆಯಾಗಿ ಬರೆದುಕೊಂಡಿದ್ದೇನೆ. ತುರ್ತುಸ್ಥಿತಿಯನ್ನು ಲಾಭದಾಯಕವಾಗಿ ಮಾಡಿಕೊಂಡು ಚಾಣಾಕ್ಷತೆ ಮೆರೆದ ಅವರು ಆ ಸಂದರ್ಭವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಭೂಸುಧಾರಣಾ ಕಾಯ್ದೆಯಂತಹ ಕ್ರಾಂತಿಕಾರಿ ಯೋಜನೆ ಜಾರಿಗೊಳಿಸಿದರೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್.ಪಿ.ಮಂಜುನಾಥ್, ಅರಸರು ಹುಟ್ಟುಹಾಕಿದ ಉದ್ದೂರು ಕಾವಲ್ ಸೊಸೈಟಿ 781 ಸದಸ್ಯರಿಗೆ 40 ವರ್ಷಗಳ ನಂತರ ಹಕ್ಕುಪತ್ರ ನೀಡುವ ಸೌಭಾಗ್ಯ ತಮ್ಮದು. ಅರಸರ ಆದರ್ಶಗಳ ಕರಗತವಲ್ಲದಿದ್ದರೂ ಪಾಲನೆ ಮಾತ್ರ ಗೊತ್ತು. ಅರಸರ ಹುಟ್ಟೂರು ಅಭಿವೃದ್ಧಿ ಕುರಿತು ಸಾಕಷ್ಟು ಟೀಕೆಗಳು ಬರುತ್ತಿದ್ದು, ಟೀಕೆಗೆ ಬೆದರೋನು ನಾನಲ್ಲ ಎಂದರು.
ತಾಲೂಕಿನಲ್ಲಿ ಕೋಮು ಸಾಮರಸ್ಯಕ್ಕಾಗಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದ್ದು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಪೊಲೀಸ್ ಇಲಾಖೆಯೂ ಆ ಪದಕ್ಕೆ ಅರ್ಥ ಬರುವಂತೆ ಕೆಲಸ ನಿರ್ವಹಿಸಬೇಕು. ರೌಡಿ ಪೊಲೀಸ್ ಆಗಲು ತಾವೆಂದೂ ಬಿಡೊಲ್ಲವೆಂದು ಎಚ್ಚರಿಸಿದರು.
ವೇದಿಕೆ ಅಧ್ಯಕ್ಷ ಡಿ.ಕೆ.ಕುನ್ನೇಗೌಡ, ಗೌರವಾಧ್ಯಕ್ಷ ನಾಗರಾಜಮಲ್ಲಾಡಿ, ಡೀಡ್ ಶ್ರೀಕಾಂತ್ ಹರಿಹರಾನಂದಸ್ವಾಮಿ ಹಾಗೂ ವಿವಿಧ ಸಮುದಾಯದ ಮುಖಂಡರು ಮಾತನಾಡಿದರು. ಸಮಾವೇಶದಲ್ಲಿ ವೇದಿಕೆ ಪ್ರಧಾನ ಕಾರ್ಯದರ್ಶಿ ನಿಂಗರಾಜ ಮಲ್ಲಾಡಿ, ಸದಸ್ಯರಾದ ಡಿ.ಕುಮಾರ್, ಸತ್ಯಪ್ಪ, ಕೆಂಪರಾಜು, ಅಣ್ಣಯ್ಯನಾಯಕ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿಳಿಕೆರೆ ಮಂಜುನಾಥ್, ಡಾ.ತಿಮ್ಮಯ್ಯ, ಲ್ಯಾಂಪ್ಸ್ ಕೃಷ್ಣಯ್ಯ, ಆದಿವಾಸಿ ಮುಖಂಡ ಜೆ.ಕೆ.ರಾಮು ಮತ್ತಿತರರಿದ್ದರು.
ಸಿಎಂರಿಂದ ಅರಸರ ಹುಟ್ಟೂರು ಅಭಿವೃದ್ಧಿಅರಸರ ಹುಟ್ಟೂರು ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣರಾಗಲೀ, ಯಡಿಯೂರಪ್ಪನವರಾಗಲೀ ಬಿಡಿಗಾಸೂ ಕೊಟ್ಟಿಲ್ಲ. ಅದೇನಾದರೂ ನಿಜವೇ ಆಗಿದ್ದರೆ ತಾನು ಈ ಕ್ಷಣದಲ್ಲೇ ರಾಜೀನಾಮೆ ನೀಡಿ ರಾಜಕೀಯ ಬಿಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಥಮವಾಗಿ ಬಜೆಟ್‌ನಲ್ಲೇ ಘೋಷಿಸಿ, ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗ ಹಾಗೂ ಕಲ್ಲಹಳ್ಳಿಗೆ ತಲಾ 10 ಕೋಟಿ ರೂ.ಅನುದಾನ ನೀಡಿ ದತ್ತುಗ್ರಾಮವಾಗಿ ಪಡೆದು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಂಡಿದ್ದಾರೆಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.