Advertisement

ಶ್ರೀ ರಜಕ ಸಂಘ ಮುಂಬಯಿ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ

05:25 PM Mar 21, 2017 | |

ಮುಂಬಯಿ: ಶ್ರೀ ರಜಕ ಸಂಘ ಮುಂಬಯಿ ಮಹಿಳಾ ವಿಭಾಗದ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆಯು ಮಾ. 5 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಕಾಂಜೂರ್‌ ಮಾರ್ಗ ಪಶ್ಚಿಮದ ಮೆಜಿಸ್ಟಿಕ್‌ ಕ್ಲಬ್‌ ಹೌಸ್‌ನಲ್ಲಿ ಜರಗಿತು.

Advertisement

ಅತಿಥಿಗಳಾಗಿ ಪೊವಾಯಿಯ ಸನಾತನ ಧರ್ಮ ಹೈಸ್ಕೂಲ್‌ ಚೆಂಬೂರಿನ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಪಕಿ   ಸರೋಜಾ ಶೆಟ್ಟಿ ಮತ್ತು ಡಾ| ವಾಣಿ ಉಚ್ಚಿಲ್ಕರ್‌ ಅವರು ಆಗಮಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ರಜಕ ಸಂಘದ ಮಹಿಳಾ ವಿಭಾಗಧ್ಯಕ್ಷೆ ಸರೋಜಿನಿ ಕುಂದರ್‌, ಉಪಾಧ್ಯಕ್ಷೆ ಪ್ರಮೀಳಾ ಸಾಲ್ಯಾನ್‌, ಕಾರ್ಯದರ್ಶಿ ಪ್ರೀತಿ ಸಾಲ್ಯಾನ್‌, ರಜಕ ಸಂಘ ಮುಂಬಯಿ ಸಮಿತಿಯ ಕಾರ್ಯದರ್ಶಿ ಸುಮಿತ್ರಾ ಪಲಿಮಾರು, ಲೈಬ್ರೇರಿಯನ್‌ ಸುಮಿತಾ ಸಾಲ್ಯಾನ್‌, ವಿವಿಧ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷೆಯರುಗಳಾದ  ವನಿತಾ ಸಾಲ್ಯಾನ್‌ ಡೊಂಬಿವಲಿ, ಹೇಮಾ ಕುಂದರ್‌ ನವಿ ಮುಂಬಯಿ, ಹೇಮಾ ಸಾಲ್ಯಾನ್‌ ವಸಾಯಿ, ನಳಿನಿ ಕುಂದರ್‌ ವೆಸ್ಟರ್ನ್ ವಿಭಾಗ, ಶಾಂತಿ ಕುಂದರ್‌ ಸೆಂಟ್ರಲ್‌ ಹಾಗೂ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರಾದ ಸುಮಿತ್ರಾ  ಬಿ. ಗುಜರನ್‌, ಶುಭಾ ಡಿ. ಗುಜರನ್‌ ಉಪಸ್ಥಿತರಿದ್ದರು.

ರಜಕ ಸಂಘದ ಸೆಂಟ್ರಲ್‌ ಪ್ರಾದೇಶಿಕ ಸಮಿತಿಯ ಬೇಬಿ ಲೇಷ ಅವರು  ಹೆಣ್ಣು ಭ್ರೂಣಹತ್ಯೆ ನಿಲ್ಲಿಸಿ ಹೆಣ್ಣು ಮಗುವನ್ನು ಉಳಿಸಿ (ಲಡಿR ಬಚಾವೊ) ಅನ್ನುವ ಸಂದೇಶವನ್ನು ಸಾರುವ ನೃತ್ಯ ರೂಪಕವನ್ನು ಎಲ್ಲರ ಮನಮುಟ್ಟುವಂತೆ ಪ್ರಸ್ತುತಪಡಿಸಿದರು. ಹೆಣ್ಣು ಮಗಳಿರುವ ಮನೆಯು ಯಾವ ರೀತಿ ಶ್ರೀ ಕೃಷ್ಣ ನೆಲೆಸಿರುವ ನಂದ® ವನದಂತೆ ಕಂಗೊ ಳಿಸುತ್ತಿರುತ್ತದೆ ಎನ್ನುವುದನ್ನು ವಸಾಯಿ ಮಹಿಳಾ ವಿಭಾಗದ ಸದಸ್ಯೆಯರು ಜಾನಪದ ಸಮೂಹಗೀತೆ ಹಾಡಿದರು. ಸೆಂಟ್ರಲ್‌ ವಿಭಾಗದ ಬೇಬಿ ರಶ್ಮಿತಾ ಅವರಿಂದ ಲಾವಣಿ ನೃತ್ಯ ಡೊಂಬಿವಿಲಿ, ವಸಾಯಿ, ಸೆಂಟ್ರಲ್‌, ನವಿ ಮುಂಬಯಿ, ಪಶ್ಚಿಮ ವಿಭಾಗದ ಮಹಿಳೆಯರಿಂದ  ಜಾನ ಪದ, ದೇಶಭಕ್ತಿ, ಮತ್ತು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರ ವೇರಿತು.

ಸರೋಜಾ ಶೆಟ್ಟಿ ಅವರು ಮಾತನಾಡಿ, ಮಹಿಳೆಯರು ಎಲ್ಲಾ  ಕ್ಷೇತ್ರಗಳಲ್ಲಿಯೂ  ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ಮಾತನಾಡಿದರಲ್ಲದೆ ಮಕ್ಕಳ ಪರೀಕ್ಷೆಯ ಸಮಯದಲ್ಲಿ ಪೋಷಕರು ಅವರಿಗೆ ಯಾವ ರೀತಿ ಮಾರ್ಗದರ್ಶನ ನೀಡಬೇಕು, ಮೊಬೈಲ್‌ ಫೋನಿನಿಂದ ಹೇಗೆ ದೂರ ಇಡಬೇಕು ಅನ್ನುವುದನ್ನು ತಿಳಿಸಿದರು.

ಡಾ|  ವಾಣಿ ಉಚ್ಚಿಲ್ಕರ್‌ ಮಾತನಾಡಿ ಮಹಿಳೆಯರು ತುಳು ಭಾಷೆ, ತುಳುನಾಡಿನ ಸಂಸ್ಕೃತಿ ಮರೆಯಾಗದಂತೆ ಅದನ್ನು ಹೇಗೆ ಪಾಲಿಸಬೇಕು ಎಂಬುವುದನ್ನು ತಿಳಿದುಕೊಳ್ಳಬೇಕು. ಇದರಿಂದ ತುಳುನಾಡಿನ ಭಾಷೆ, ಸಂಸ್ಕೃತಿ, ಸಂಸ್ಕಾರಗಳು ಉಳಿದು ಬೆಳೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರು ಒಂದಾಗಿ, ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.

Advertisement

ರಜಕ ಸಂಘದ ಮಹಿಳಾ ವಿಭಾಗಧ್ಯಕ್ಷೆ ಸರೋಜಿನಿ ಕುಂದರ್‌ ಅವರು,  ಅರಸಿನ ಕುಂಕುಮದ ಮಹತ್ವವನ್ನು ತಿಳಿಸಿದರು. ಆನಂತರ ಮಹಿಳಾ ವಿಭಾಗದ ಸದಸ್ಯೆಯರಿಂದ ಅರಸಿನ  ಕುಂಕುಮ ಕಾರ್ಯಕ್ರಮ ನಡೆಯಿತು. ಮಹಿಳಾ ಪದಾಧಿಕಾರಿಗಳು ಅತಿಥಿಗಳನ್ನು  ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. ದೇಣಿಗೆ ನೀಡಿದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜಯಶ್ರೀ ಕುಂದರ್‌ ಸ್ವಾಗತಿಸಿದರು. ಸುಮಿತ್ರಾ ಪಲಿಮಾರ್‌ ಕಾರ್ಯಕ್ರಮ ನಿರೂಪಿಸಿದರು. ಲಲಿತ ಸಾಲ್ಯಾನ್‌ ವಂದಿಸಿದರು.  

  ಚಿತ್ರ – ವರದಿ: ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next