Advertisement

ರಾಜ್‌ ಶೆಟ್ಟಿ ಎಂಬ ಗುಬ್ಬಿ

11:08 AM Jun 18, 2018 | |

ಜುಲೈ ತಿಂಗಳಲ್ಲಿ ತಮ್ಮ ನಿರ್ದೇಶನದ ಹೊಸ ಚಿತ್ರವೊಂದು ಶುರುವಾಗಬಹುದು ಎಂದು ಹೇಳಿಕೊಂಡಿದ್ದರು “ಒಂದು ಮೊಟ್ಟೆಯ ಕಥೆ’ ಚಿತ್ರದ ರಾಜ್‌ ಬಿ. ಶೆಟ್ಟಿ. ಬಹುಶಃ ಆ ಚಿತ್ರ ಇನ್ನೊಂದಿಷ್ಟು ತಡವಾಗಿ ಶುರುವಾಗಬಹುದು. ಏಕೆಂದರೆ, ರಾಜ್‌ ಸದ್ದಿಲ್ಲದೆ ಇನ್ನೊಂದು ಚಿತ್ರದಲ್ಲಿ ಅಭಿನಯಿಸುವುದಿದೆ ಮತ್ತು ಆ ಚಿತ್ರ ಇಂದಿನಿಂದ ಪ್ರಾರಂಭವಾಗಲಿದೆ.

Advertisement

ಹೌದು, ರಾಜ್‌ ಶೆಟ್ಟಿ ಹೊಸ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದು, ಆ ಚಿತ್ರಕ್ಕೆ “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎಂಬ ಹೆಸರನ್ನು ಇಡಲಾಗಿದೆ. ಸಂಶಯವೇ ಬೇಡ, ಇಲ್ಲಿ ಗುಬ್ಬಿಯಾಗಿ ನಟಿಸುತ್ತಿರುವುದು ರಾಜ್‌ ಶೆಟ್ಟಿ. ಆದರೆ, ಅವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿರುವವರು ಯಾರು ಎಂಬ ಪ್ರಶ್ನೆಗೆ ಇನ್ನೂ ಗೊತ್ತಾಗಬೇಕಷ್ಟೇ.

“ಚಮಕ್‌’ ಮತ್ತು “ಅಯೋಗ್ಯ’ ಚಿತ್ರಗಳನ್ನು ನಿರ್ಮಿಸಿರುವ ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ನ ಟಿ.ಆರ್‌. ಚಂದ್ರಶೇಖರ್‌ ಈ ಚಿತ್ರವನ್ನೂ ನಿರ್ಮಿಸುತ್ತಿದ್ದು, ಇಂದು ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವಾಗಲಿದೆ.

“ಗುಬ್ಬಿ ಮತ್ತು ಬ್ರಹ್ಮಾಸ್ತ್ರ’ ಚಿತ್ರವನ್ನು ನಿರ್ದೇಶಿಸುತ್ತಿರುವುದು ಸುಜಯ್‌ ಶಾಸ್ತ್ರಿ. ಇನ್ನು ಚಿತ್ರಕ್ಕೆ ಪ್ರದೀಪ್‌ ಬಿ.ವಿ ಅವರು ಕಥೆ ಬರೆದರೆ, ಪ್ರಸನ್ನ ವಿ.ಎಂ. ಮತ್ತು ಸುಜಯ್‌ ಸೇರಿಕೊಂಡು ಚಿತ್ರಕಥೆಯನ್ನು ರಚಿಸಿದ್ದಾರೆ. ಬರೀ ಚಿತ್ರಕಥೆಯನ್ನಷ್ಟೇ ಅಲ್ಲ, ಸಂಭಾಷಣೆಯನ್ನೂ ಬರೆಯುತ್ತಿದ್ದಾರೆ ಪ್ರಸನ್ನ. ಸುನಿತ್‌ ಹಲಗೇರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next