Advertisement

ರಾಜ್ಯದಲ್ಲಿ  ತಲೆ ಎತ್ತಲಿದೆ ಸೆಂಟರ್‌ ಆಫ್ ಎಕ್ಸ್‌ಲೆನ್ಸ್‌

03:45 AM Feb 17, 2017 | Harsha Rao |

ಬೆಂಗಳೂರು: ರಾಜ್ಯದಲ್ಲಿನ ಎಂಜಿನಿಯರ್‌ಗಳಿಗೆ ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತರಬೇತಿ ಮತ್ತು ಕೌಶಲಾಭಿವೃದ್ಧಿ ಕಲ್ಪಿಸುವ ಸಂಬಂಧ ರಾಜ್ಯದಲ್ಲಿ ಸೆಂಟರ್‌ ಆಫ್ ಎಕ್ಸ್‌ಲೆನ್ಸ್‌ ತಲೆಯೆತ್ತಲಿದೆ.
ಈ ಸಂಬಂಧ ರಾಜ್ಯ ಸರ್ಕಾರ ಮತ್ತು ದಸ್ಸಾಲ್ಟ್ ಸಿಸ್ಟಮ್ಸ್‌ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಗುರುವಾರ ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

Advertisement

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಈ ಸೆಂಟರ್‌ ಆಫ್ ಎಕ್‌Õಲೆನ್ಸ್‌ ಸ್ಥಾಪಿಸಲಾಗುತ್ತಿದ್ದು, ಪ್ರತಿ ವರ್ಷ ಸುಮಾರು 1,600 ಇಂಜಿನಿಯರ್‌ಗಳಿಗೆ ಉನ್ನತ ಮಟ್ಟದ ತರಬೇತಿ ಹಾಗೂ ಕೌಶಲಾಭಿವೃದ್ಧಿ ಕಲ್ಪಿಸಲಾಗುವುದು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು. ಯೋಜನೆಗೆ ಒಟ್ಟು 288.68 ಕೋಟಿ ರೂ. ವೆಚ್ಚವಾಗಲಿದ್ದು, ಇದರಲ್ಲಿ ಮೂರು ವರ್ಷಗಳ ಅವಧಿಗೆ ರಾಜ್ಯ ಸರ್ಕಾರ ತನ್ನ ಪಾಲಾಗಿ 33.46 ಕೋಟಿ ರೂ.ನೀಡುತ್ತಿದೆ.

ತಂತ್ರಾಂಶಗಳ ಪ್ಯಾಕೇಜ್‌, ಉನ್ನತೀಕರಣ/ ಪರವಾನಗಿ ಶುಲ್ಕಗಳು, ಶಿಕ್ಷಕ ಸಿಬ್ಬಂದಿ ಹಾಗೂ ತರಬೇತಿಯ ರೂಪದಲ್ಲಿ ದಸ್ಸಾಲ್ಟ್ ಸಿಸ್ಟಮ್ಸ್‌ 250.93 ಕೋಟಿ ರೂ.ವಿನಿಯೋಗಿಸಲಿದೆ.

ಈ ಯೋಜನೆಯಡಿ ಸೆಂಟರ್‌ ಆಫ್ ಎಕ್‌Õಲೆನ್ಸ್‌ ಸ್ಥಾಪನೆಗೆ ಶೈಕ್ಷಣಿಕ ಪಾಲುದಾರಿಕೆ ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ (ವಿಟಿಯು), ಮುದ್ದೇನಹಳ್ಳಿಯ ತನ್ನ ಕ್ಯಾಂಪಸ್‌ನಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ಜಾಗ ಕಲ್ಪಿಸಲಿದೆ. ಅವಶ್ಯಕ ಮೂಲಸೌಕರ್ಯಗಳಾದ ತರಗತಿ ಕೊಠಡಿಗಳು, ಸಭಾಂಗಣ, ಮಾನವಶಕ್ತಿ (ಸಿಬ್ಬಂದಿ) ಮುಂತಾದ ಆಡಳಿತದ ಚಾಲನಾ ವೆಚ್ಚ ಭರಿಸುವುದು, ಅಂತಜಾìಲ ವೆಚ್ಚ ಮತ್ತಿತರ ನಿರ್ವಹಣಾ ವೆಚ್ಚಗಳಿಗೆ ವಿಟಿಯು 4.29 ಕೋಟಿ ರೂ. ನೆರವು ನೀಡಲಿದೆ ಎಂದು ಹೇಳಿದರು.

ಭಾರತದ ವೈಮಾನಿಕ ಕ್ಷೇತ್ರವು ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಒಂದಾಗಿದ್ದು, 2020 ಹೊತ್ತಿಗೆ ವಿಶ್ವದ
ಮೂರನೇ ಬೃಹತ್‌ ವೈಮಾನಿಕ ವಲಯವಾಗಿ ರೂಪುಗೊಳ್ಳಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಸುಮಾರು 22.5 ಕೋಟಿ ಅಮೆರಿಕನ್‌ ಡಾಲರ್‌ ಹರಿದು ಬರಲಿದೆ ಎಂದು ಹೇಳಿದರು. ವಾಯುಯಾನ ಮತ್ತು ರಕ್ಷಣಾ
ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೃತ್ತಿಪರರಿಗೆ ತರಬೇತಿ ನೀಡಲು ಫ್ರಾನ್ಸ್‌ನ ತುಲೂಸ್‌ನ ಇನ್‌ಸ್ಟಿಟ್ಯೂಟ್‌ ಆಫ್ ಏರೋ ನಾಟಿಕ್‌ ಎಟ್‌ಸ್ಟೇಷಿಯಲ್‌ ಸಂಸ್ಥೆ ಯೊಂದಿಗೂ ಸರ್ಕಾರ ಒಪ್ಪಂದ ಮಾಡಿ ಕೊಂಡಿದೆ ಎಂದರು. ದಸ್ಪಾಲ್ಟ್
ಸಿಸ್ಟಮ್ಸ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸ್ಯಾಮ್‌ಸನ್‌ ಖಾವ್‌, ಐಟಿ-ಬಿಟಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ವಿ.ಮಂಜುಳಾ, ಐಟಿ-ಬಿಟಿ ಇಲಾಖೆ ನಿರ್ದೇಶಕಿ ಡಾ. ಮಂಜುಳಾ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next