ಕನಕಪುರ: ಕೊರೊನಾ ಸಂಕ್ರಾಮಿಕ ಸೋಂಕನ್ನುತಡೆಗಟ್ಟ ಬೇಕಾದರೆ ಇನ್ನಷ್ಟು ಪರಿಣಾಮಕಾರಿಯಾಗಿಜನರಿಗೆ ಜಾಗೃತಿ ಮೂಡಿಸುವ ಕೆಲವಾಗಬೇಕುಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಇಕ್ರಂ ಹೇಳಿದರು.ತಾಲೂಕಿನ ಮರಳವಾಡಿ ಹೋಬಳಿಯ ದೊಡ್ಡಮರಳವಾಡಿ, ಯಲಚವಾಡಿ, ಬನವಾಸಿ ಗ್ರಾಪಂವ್ಯಾಪ್ತಿಗಳಲ್ಲಿ ಹಮ್ಮಿಕೊಂಡಿದ್ದ ಕೊರೊನಾ ಟಾಸ್ಕ್ಪೋರ್ಸ್ ಸಭೆಗಳಲ್ಲಿ ಸ್ಥಳೀಯ ಆಶಾಕಾರ್ಯಕರ್ತೆಯರಿಗೆ ಕೊರೊನಾ ತಡೆಗಟ್ಟುವಮಾಸ್ಕ್, ಸ್ಯಾನಿಟೈಸರ್ ವಿಶೇಷ ಕಿಟ್ ವಿತರಿಸಿ ಮಾತನಾಡಿದರು.
ಕೊರೊನಾ 2ನೇ ಅಲೆ ದೇಶದಲ್ಲಿ ಮಾತ್ರವಲ್ಲತಾಲೂಕಿನಲ್ಲಿ ತೀವ್ರವಾಗಿ ಹರಡುತ್ತಿದೆ ಸೋಂಕನ್ನು ತಡೆಗಟ್ಟ ಬೇಕಾದರೆ ಜನಸಾಮಾನ್ಯ ಸಹಕಾರ ಬಹಳಮುಖ್ಯ ಪ್ರತಿಯೊಬ್ಬರಿಗೂ ಸೋಂಕನ್ನು ತಡೆಗಟ್ಟುವಮಾರ್ಗಸೂಚಿಗಳ ಬಗ್ಗೆ ತಿಳಿವಳಿಕೆ ಇರಬೇಕು. ಆನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು ಪ್ರತಿಯೊಂದು ಗ್ರಾಮದಲ್ಲು ಪ್ರತಿಯೊಬ್ಬನಾಗರಿಕನಿಗೂ ಮನವರಿಕೆ ಮಾಡಿಕೊಡುವ ಕೆಲಸವಾಗಬೇಕು.
ಇದನ್ನು ಪರಿಣಾಮಕಾರಿಯಾಗಿಮಾಡಿದ್ದೆಯಾದರೆ ಬಹುತೇಕ ತಾಲೂಕಿನಲ್ಲಿ ಕೊರೊನಾ ಸೋಂಕನ್ನು ಹತೋಟಿಗೆ ತರಲುಸಾಧ್ಯವಿದೆ ಎಂದು ಸಲಹೆ ನೀಡಿದರು.ಕೊರೊನಾ ಸೋಂಕು ಉಲ್ಬಣಗೊಳ್ಳದಂತೆಮೊದಲು ಪ್ರತಿ ಗ್ರಾಮಗಳಲ್ಲೂ ಸ್ವತ್ಛತೆ ಹೆಚ್ಚಿನಆದ್ಯತೆ ನೀಡಬೇಕು. ಜನರಿಗೆ ಕೊರೊನಾ ಸೋಂಕಿನ ಬಗ್ಗೆ ಇರುವ ಭಯವನ್ನು ಹೊಗಲಾಡಿಸಿ ಅರಿವನ್ನುಮೂಡಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು.
ಮುಖ್ಯವಾಗಿ ಗ್ರಾಪಂ ಕಾರ್ಯ ಪಡೆಪರಿಣಾಮಕಾರಿಯಾಗಿ ಕೆಲಸನಿರ್ವಹಿಸಬೇಕು. ಪ್ರಜಾ ಪ್ರಭುತ್ವವ್ಯವಸ್ಥೆಯಲ್ಲಿ ಆಡಳಿತವಿಕೇಂದ್ರೀಕರಣವಾಗಬೇಕು.ಜಿಲ್ಲಾಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಆಡಳಿತ ನಿರ್ವಹಿಸುವರೀತಿಯಲ್ಲೇ ಸ್ಥಳೀಯ ಆಡಳಿತಮಂಡಳಿಗಳು ಕೆಲಸ ನಿರ್ವಹಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯಗಳುದೊರಕುವಂತಾಗಬೇಕು ಗಾಂಧಿ ಕಂಡ ಗ್ರಾಮಸ್ವರಾಜ್ಯ ಕಲ್ಪನೆ ನನಸಾಗಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ಉಮೇಶ್,ಯೋಜನಾ ನಿರ್ದೇಶಕ ಶಿವಕುಮಾರ್,ಕನಕಪುರ ತಾಲೂಕು ಇಒ ಮಧು, ಸಹಾಯಕನಿರ್ದೇಶಕ ಮೋಹನ್ ಬಾಬು, ಮುಖ್ಯಯೋಜನಾಧಿಕಾರಿ ಸೇರಿದಂತೆ ಗ್ರಾಪಂಅಧ್ಯಕ್ಷರಾದ ರಾಜಣ್ಣ, ಲೀಲಾವತಿ ಪ್ರಕಾಶ್,ಪಿಡಿಒಗಳಾದ ರಂಗೇಗೌಡ, ಚಂದ್ರಶೇಖರಪ್ಪ,ಕಾರ್ಯದರ್ಶಿ ಚೂಡಯ್ಯ, ಎಸ್.ಡಿ.ಎ.ನಿರಂಜನ್, ಬಿಲ್ ಕಲೆಕ್ಟರ್ ಅರುಣ್ ಇದ್ದರು.