Advertisement

ಜನರಲ್ಲಿ ಕೋವಿಡ್‌ ಜಾಗೃತಿ ಮೂಡಿಸಿ: ಜಾಧವ್‌

11:09 AM Jan 11, 2022 | Team Udayavani |

ಚಿಂಚೋಳಿ: ದೇಶದಲ್ಲಿ ಕೊರೊನಾ 3ನೇ ಅಲೆ ಹರಡುವಿಕೆ ಆಗುತ್ತಿದ್ದು, ಎಲ್ಲರೂ ಕೋವಿಡ್‌ ಕುರಿತು ಜಾಗೃತರಾಗಬೇಕು. ಆರೋಗ್ಯ ಇಲಾಖೆ ಕೋವಿಡ್‌ ಕುರಿತು ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸಲು ಶ್ರಮ ವಹಿಸಬೇಕು ಎಂದು ಶಾಸಕ ಡಾ|ಅವಿನಾಶ ಜಾಧವ್‌ ಹೇಳಿದರು.

Advertisement

ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚೆಟ್ಟಿನಾಡ್‌ ಸಿಮೆಂಟ್‌ ಕಂಪನಿ ಕಲ್ಲೂರ ಮತ್ತು ಕಲಬುರಗಿ ಸಿಮೆಂಟ್‌ ಚತ್ರಸಾಲ ಕಂಪನಿಗಳಿಂದ ನಿರ್ಮಿಸಿದ ತುರ್ತು ಚಿಕಿತ್ಸಾ ಘಟಕ ನವೀಕರಣ ಮತ್ತು ಮಕ್ಕಳ ಕೋವಿಡ್‌ ವಾರ್ಡ್‌, ಕೋವಿಡ್‌ ವಾರ್‌ ರೂಮ್‌ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿಯೇ ನಮ್ಮ ಜಿಲ್ಲೆಯಲ್ಲಿ ಮೊದಲ ಕೋವಿಡ್‌ ಪ್ರಕರಣ ಕಂಡು ಬಂತು. 2ನೇ ಅಲೆಯನ್ನು ಬಹಳ ಎಚ್ಚರಿಕೆಯಿಂದ ವೈದ್ಯರು ನಿಯಂತ್ರಿಸಿದರು. ಇಗ 3ನೇ ಅಲೆ ಸೋಂಕು ಹರಡುವಿಕೆ ತಡೆಗಟ್ಟಬೇಕಾಗಿದೆ. ಎಲ್ಲರೂ ಸರಕಾರ ಜಾರಿಗೊಳಿಸಿದ ನಿಯಮ ತಪ್ಪದೇ ಪಾಲಿಸಬೇಕು. ರಾಜ್ಯದಲ್ಲಿಯೇ ಆಕ್ಸಿಜನ್‌ ಪ್ಲಾಂಟ್‌ ಅನ್ನು ಪ್ರಧಾನ ಮಂತ್ರಿ ಕೇರ ಯೋಜನೆ ಅಡಿ ಮಂಜೂರಿಗೊಳಿಸಿ ಕಳೆದ ವರ್ಷ 105 ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ ಎಂದರು.

ಸರಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ| ಸಂತೋಷ ಪಾಟೀಲ ಮಾತನಾಡಿ, ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್‌ ವ್ಯಾಕ್ಸಿನೇಶನ್‌ ಗುರಿ ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ 2ನೇ ಸ್ಥಾನದಲ್ಲಿದೆ. 105 ಕೋವಿಡ್‌ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. 600 ಲೀಟರ್‌ ಮತ್ತು 500 ಆಕ್ಸಿಜನ್‌ ಉತ್ಪಾದನೆ ಮಾಡಲಾಗುತ್ತಿದೆ ಎಂದರು.

ತಾಲೂಕು ಆರೋಗ್ಯಾ ಧಿಕಾರಿ ಡಾ| ಮಹಮ್ಮದ ಗಫಾರ್‌ ಅಹೆಮದ್‌ ಮಾತನಾಡಿ, ರಾಜ್ಯದಲ್ಲಿಯೇ ಚಿಂಚೋಳಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಧಾನ ಮಂತ್ರಿ ಕೇರ್‌ ಪ್ರಾರಂಭಿಸಲಾಗಿದೆ. 3ನೇ ಅಲೆ ತಡೆಗಟ್ಟಲು ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಮತ್ತು ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

Advertisement

ಚೆಟ್ಟಿನಾಡ ಸಿಮಂಟ್‌ ಕಂಪನಿಯ ದಿವೇಶಕುಮಾರ ಮಿಶ್ರಾ ಮತ್ತು ಕಲಬುರಗಿ ಸಿಮಂಟ್‌ ಕಂಪನಿಯ ಸುನೀಲಕುಮಾರ ಚಿಪ್ಪುರಲಾಲ್‌, ತಹಶೀಲ್ದಾರ್‌ ಅಂಜುಮ ತಬಸುಮ್‌, ಡಿವೈಎಸ್ಪಿ ಬಸವೇಶ್ವರ ಹೀರಾ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ, ಉಪಾಧ್ಯಕ್ಷ ಶಬ್ಬೀರ್‌ ಅಹೆಮದ, ಚೆಟ್ಟಿನಾಡ ಸಿಮೆಂಟ್‌ ಕಂಪನಿ ಜನರಲ್‌ ಮ್ಯಾನೇಜರ್‌ ಶೇಖರಬಾಬು, ಜಿ.ವಿ.ಕೃಷ್ಣಮೂರ್ತಿ, ಗೋಪಾಲರೆಡ್ಡಿ ಕಲ್ಲೂರ, ಭೀಮರೆಡ್ಡಿ, ಪ್ರಭಾಕರರೆಡ್ಡಿ, ರಾಧಾಬಾಯಿ ವಲಗಿರಿ, ಸತೀಶರೆಡ್ಡಿ, ಅಭಿಷೇಕ, ಉಮೇಶ, ಹಣಮಂತ ಡಾ| ಸಂಜಯ ಗೋಳೆ, ಡಾ| ಜಗದೀಶಚಂದ್ರ ಬುಳ್ಳ, ಡಾ| ಅಜೀತ ಪಾಟೀಲ, ಡಾ|ದೀಪಕ ಪಾಟೀಲ, ಡಾ| ಬೀರಪ್ಪ ಪೂಜಾರಿ, ಡಾ|ಲೋಕೇಶ ಪಾಟೀಲ, ಡಾ| ಮಲ್ಲಿಕಾರ್ಜುನ ಜಾಪಟ್ಟಿ, ಡಾ|ಬಾಲಾಜಿ ಪಾಟೀಲ ಇನ್ನಿತರಿದ್ದರು.

ಇದೇ ಸಂದರ್ಭದಲ್ಲಿ 60 ವರ್ಷದ ಹಿರಿಯರಿಗೆ ಬ್ಲೂಸ್ಟರ್‌ ಡೋಸ್‌ ನೀಡಲಾಯಿತು. ಕೋವಿಡ್‌ ಸಂದರ್ಭದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಆರೋಗ್ಯಅಧಿಕಾರಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಆಡಳಿತಾಧಿಕಾರಿ ಡಾ| ಸಂತೋಷ ಪಾಟೀಲ ಸ್ವಾಗತಿಸಿದರು. ಡಾ|ದೀಪಾ ಜಾಧವ್‌ ನಿರೂಪಿಸಿದರು. ಡಾ| ಫಾತಿಮಾ ಮೇಡಂ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next