Advertisement
ಮಳೆಗಾಲದ ಆರಂಭದ ದಿನಗಳಲ್ಲಿ ಗುಡುಗು ಮಳೆಗೆ ಮಣ್ಣು ಸಡಿಲವಾಗಿ ಮೆದುವಾದಾಗ ಕಲ್ಲಣಬೆ ಹುಟ್ಟಿಕೊಂಡು ಕಾಣಸಿಗುತ್ತದೆ. ಮಳೆಗಾಲದಲ್ಲಿ ಬಹಳ ರುಚಿಕರವಾದ ಖಾದ್ಯ ತಯಾರಿಸಬಹುದಾದ ಈ ಅಣಬೆ ಶಿರ್ವ ಪರಿಸರದ ಕುತ್ಯಾರು, ಕಳತ್ತೂರು, ಪಿಲಾರು, ಮುದರಂಗಡಿ, ಪಂಜಿಮಾರುವಿನ ಗ್ರಾಮೀಣ ಪ್ರದೇಶ ಗಳಲ್ಲಿ ಕಾಣಸಿಗುತ್ತಿದ್ದು, ಈಗ ಬಹಳ ಕಡಿಮೆಯಾಗಿದೆ.
ಬಲು ರುಚಿಕರವಾದ ಖಾದ್ಯ ಪದಾರ್ಥ ವಾಗಿದ್ದು,ಮಾರುಕಟ್ಟೆಯಲ್ಲಿ ಸೇರಿಗೆ 300 ರಿಂದ 400 ರೂ. ವರೆಗೆ ದರವಿರುತ್ತದೆ.ಕಾಡು ಪ್ರದೇಶದಲ್ಲಿ ಕಾಣಸಿಗುವ ಈ ಕಲ್ಲಣಬೆಯನ್ನು ಮಳೆಗಾಲದಲ್ಲಿ ಒಮ್ಮೆಯಾದರೂ ತಿನ್ನಲೇಬೇಕೆನ್ನುವ ಆಸೆ ಎಲ್ಲರಿಗೂ ಇದ್ದು , ಜನರು ದರ ಹೆಚ್ಚಾದರೂ ಖರೀದಿ ಮಾಡುತ್ತಾರೆ.ಹೆಚ್ಚಾಗಿ ಕರ್ಮಾರು, ಬೇವು, ಧೂಪದ ಮರದ ಬುಡಗಳಲ್ಲಿ ಕಾಣಸಿಗುವ
ಕಲ್ಲಣಬೆ ಕಾಡು ನಶಿಸಿಹೋದಲ್ಲಿ ಮುಂದಿನ ಪೀಳಿಗೆಗೆ ಚಿತ್ರಗಳಲ್ಲಿ ಮಾತ್ರ ಕಾಣಬೇಕಿದೆ. ಕಳೆದ 40 ವರ್ಷಗಳಿಂದ ಹವ್ಯಾಸವಾಗಿ ಪ್ರತಿ ವರ್ಷ ಮಳೆಗಾಲದ ಪ್ರಾರಂಭದಲ್ಲಿ ಕಲ್ಲಣಬೆ ಒಟ್ಟು ಮಾಡುತ್ತಿದ್ದೆ. ಹಿಂದೆ ಹೇರಳವಾಗಿ ಕಾಣಸಿಗುತ್ತಿದ್ದ ಕಲ್ಲಣಬೆ ಇತ್ತೀಚಿನ ದಿನಗಳಲ್ಲಿ ತೀರಾ ಕಡಿಮೆಯಾಗಿದೆ.
-ಬೇಬಿ ಪೂಜಾರ್ತಿ, ಕುತ್ಯಾರು ಕೇಂಜ ಬಗ್ಗತೋಟ
Related Articles
Advertisement