Advertisement

Monsoon: ಭತ್ತ ಬೇಸಾಯದ ನಿರೀಕ್ಷೆ ಮೂಡಿಸಿದ ಮಳೆ; ಉಳುಮೆಗೆ ಪೂರ್ವ ತಯಾರಿ

11:00 AM May 17, 2024 | Team Udayavani |

ಮಂಗಳೂರು: ಬಿಸಿಲಿನ ಝಳದ ಹೊಡೆತಕ್ಕೆ ಸಿಲುಕಿದ್ದ ಕರಾವಳಿಯಲ್ಲಿ ಕಳೆದೊಂದು ವಾರದಿಂದ ಬೇಸಗೆ ಮಳೆಯ ಪ್ರತೀ ದಿನ ಎಂಬಂತೆ ಸಂಜೆ ವೇಳೆ ಸುರಿಯುತ್ತಿದೆ. ಕೃಷಿಕರು ಅದರಲ್ಲೂ ಭತ್ತ ಬೇಸಾಯಗಾರರಲ್ಲಿ ಇದು ಮಂದಹಾಸ ಮೂಡಿಸಿದೆ. ಇನ್ನೊಂ ದಷ್ಟು ಉತ್ತಮ ಮಳೆ ಯಾದರೆ, ಭತ್ತ ಕೃಷಿಗೆ ಸಂಬಂಧಿಸಿದ ಚಟುವಟಿಕೆ ಪ್ರಾರಂಭಿಸಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

Advertisement

ಈಗಾಗಲೇ ಅಲ್ಲಲ್ಲಿ ಕೆಲವರು ಗದ್ದೆಯನ್ನು ಒಂದು ಹಂತದಲ್ಲಿ ಉಳುಮೆ ಮಾಡಿ ಸಿದ್ಧತೆ ಮಾಡುತ್ತಿ ದ್ದಾರೆ. ನೀರಿನಾಶ್ರಯ ಇರುವ ರೈತರು ಕೂಡ ಮುಂದಿನ ಕೆಲವು ದಿನಗಳಲ್ಲಿ ಗದ್ದೆ ಉಳುಮೆ ಕಾರ್ಯದಲ್ಲಿ ತೊಡಗಿಸಿ ಕೊಳ್ಳುವ ಸಾಧ್ಯತೆಯಿದೆ. ಹಟ್ಟಿ ಗೊಬ್ಬರ-ಹಸಿರೆಲೆ ಗೊಬ್ಬರವನ್ನೂ ಸಿದ್ಧಮಾಡಿ ಇಟ್ಟುಕೊಳ್ಳುವ ಕೆಲಸ ಗಳೂ ನಡೆಯುತ್ತಿದೆ.

ಕಳೆದ ವರ್ಷ ಬೇಸಗೆ ಮಳೆ ಕೈಕೊಟ್ಟಿತ್ತು. ಮುಂಗಾರು ಜೂ. 10ರಂದು ಕರಾವಳಿಗೆ ಪ್ರವೇಶ ಪಡೆದಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ಭತ್ತ ಬೇಸಾಯ ವಿಳಂಬವಾಗಿತ್ತು. ಈ ಬಾರಿ ದಕ್ಷಿಣ ಅಂಡಮಾನ್‌ ಸಮುದ್ರ, ಆಗ್ನೆಯ ಬಂಗಾಲಕೊಲ್ಲಿ ಮತ್ತು ನಿಕೋಬಾರ್‌ ದ್ವೀಪಗಳಿಗೆ ಮೇ 19ರಂದು ಮುಂಗಾರು ಪ್ರವೇಶ ಪಡೆಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

47,390 ಹೆಕ್ಟೇರ್‌ನಲ್ಲಿ ಭತ್ತ ಬೆಳೆ ಗುರಿ:

ದ.ಕ. ಜಿಲ್ಲೆಯ ಮಂಗಳೂರಿನಲ್ಲಿ 1,500 ಹೆಕ್ಟೇರ್‌, ಮೂಡುಬಿದಿರೆ 1,650, ಮೂಲ್ಕಿ 1,700, ಉಳ್ಳಾಲ 850, ಬಂಟ್ವಾಳ 1,510, ಬೆಳ್ತಂಗಡಿ 1,600, ಪುತ್ತೂರು 205, ಕಡಬ 165, ಸುಳ್ಯ 210 ಹೆಕ್ಟೇರ್‌ ಸೇರಿ ಒಟ್ಟು 9,390 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಉಡುಪಿ 17,650 ಹೆಕ್ಟೇರ್‌, ಕುಂದಾಪುರ 13,250, ಹಾಗೂ ಕಾರ್ಕಳದಲ್ಲಿ 7,100 ಹೆಕ್ಟೇರ್‌ ಸೇರಿ 38,000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ.

Advertisement

ಸಹ್ಯಾದ್ರಿ ಕೆಂಪು ಚಂದ್ರಮುಖಿ ಬೀಜ ವಿತರಣೆ: 

ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ತಳಿ ಅಭಿವೃದ್ಧಿ ತಜ್ಞ ಡಾ| ದುಷ್ಯಂತ್‌ ಅವರು 2020ರಲ್ಲಿ ಸಂಶೋಧನೆ ಮಾಡಿದ ಸಹ್ಯಾದ್ರಿ ಚಂದ್ರಮುಖೀ¤ ತಳಿಯ ಬೀಜವನ್ನು ಈ ಬಾರಿ ದ.ಕ. ಜಿಲ್ಲೆಯಲ್ಲಿ ರೈತರಿಗೆ ವಿತರಿಸಲು ಕೃಷಿ ಇಲಾಖೆ ಉದ್ದೇಶಿಸಿದೆ. ಹಳೆಯ ತಳಿಯಾಗಿರುವ ಎಂಒ4 ಬದಲು ಹೊಸ ತಳಿಯನ್ನು ವಿತರಿಸಲಾಗುತ್ತದೆ. ಈಗಾಗಲೇ ಜಿಲ್ಲೆಯ ಸುಮಾರು 10ರಷ್ಟು ರೈತರು ಈ ತಳಿಯನ್ನು ಪ್ರಾಯೋಗಿಕವಾಗಿ ಬೆಳೆಸಿ ಯಶ್ವಿ‌ಯಾಗಿದ್ದಾರೆ. ಇದು ಕೆಂಪು ಕಜೆ ಅಕ್ಕಿ ತಳಿಯಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ವಿವರಿಸಿದ್ದಾರೆ.

ಕರಾವಳಿಯಲ್ಲಿ ಬೇಸಗೆ ಮಳೆ ಆರಂಭವಾಗಿದೆ. ಭತ್ತದ ಬೇಸಾಯಕ್ಕೆ ಸಂಬಂಧಿಸಿ ದಂತೆ ಕೆಲವೊಬ್ಬರು ಗದ್ದೆ ಉತ್ತು ಪ್ರಾರಂಭಿಕ ಕೆಲಸ ಮಾಡಿದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾದರೆ ಮಳೆ ಬಿರುಸಾಗಬೇಕು. ಮುಂಗಾರು ಆರಂಭವಾದರೆ, ಜೂನ್‌ ಮೊದಲ ವಾರದಿಂದ ಭತ್ತ ಚಟುವಟಿಕೆ ಚುರುಕಾಗಬಹುದು.ಡಾ| ಕೆಂಪೇಗೌಡ ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ದ.ಕ 

Advertisement

Udayavani is now on Telegram. Click here to join our channel and stay updated with the latest news.

Next