Advertisement

ನಾಗರಿಕರ ಕಾಡಿದ ಚಳಿಗಾಳಿ ಸಹಿತ ಮಳೆ

11:40 AM Nov 24, 2018 | Team Udayavani |

ಬೆಂಗಳೂರು: ಬಂಗಾಳಕೊಲ್ಲಿ ಹಾಗೂ ತಮಿಳುನಾಡು ಕಾರವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಶುಕ್ರವಾರವಿಡಿ ಚಳಿಗಾಳಿಯೊಂದಿಗೆ ಸುರಿದ ತುಂತುರು ಮಳೆ ಸುರಿದ್ದು, ಕೆಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ. 

Advertisement

ಗೆಳೆಯರ ಬಳಗದ ರಾಜ್‌ಕುಮಾರ್‌ ಸಭಾಂಗಣದ ಸಮೀಪ, ಸಂಜಯನಗರ ಹಾಗೂ ಜೆ.ಪಿ.ನಗರ, ಮಹದೇವಪುರ ಸೇರಿದಂತೆ ಕೆಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಇದರಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ, ರಸ್ತೆಯಲ್ಲಿ ಬಿದ್ದಿದ್ದರಿಂದ ಕೆಲಕಾಲ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ದೂರುಗಳು ಬಂದ ಕೂಡಲೇ ಸ್ಥಳಕ್ಕೆ ಧಾವಿಸಿದ ಪಾಲಿಕೆಯ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದ್ದಾರೆ. 

ವಾಯುಭಾರ ಕುಸಿತದ ಪರಿಣಾಮ ನಗರದಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಹಗಲಿನಲ್ಲಿ ಬಹುತೇಕ ಅವಧಿ ಮೋಡ ಕವಿದ ವಾತಾವರಣವಿರುತ್ತಿದೆ. ಮೋಡ ಕವಿದ ವಾತಾವರಣದಿಂದಾಗಿ ನಗರದಲ್ಲಿ ಉಷ್ಣಾಂಶ ಕಡಿಮೆಯಾಗುತ್ತಿದ್ದು, ಕೆಲವು ಭಾಗಗಳಲ್ಲಿ ತೀವ್ರ ಚಳಿಇಯ ಅನುಭವವಾಗುತ್ತಿದೆ. 

ನಗರದಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಮುಂದುವರಿದರೆ ಮಧ್ಯಾಹ್ನ ವೇಳೆಗೆ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಯೊಂದಿಗೆ ಬೀಸಿದ ಚಳಿಗಾಳಿಗೆ ನಡುಗುವಂತಾಗಿತ್ತು. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಲ್ಲಿ 28-29 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುತ್ತದೆ. ಆದರೆ, ಕಳೆದ ಮೂರು ದಿನಗಳಿಂದ ನಗರದಲ್ಲಿ 25 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next