Advertisement

ಉತ್ತರ ಕರ್ನಾಟಕದಲ್ಲಿ ಮಳೆ ಕಾಟ; 15,000 ಕೋ.ರೂ. ನೆರೆ ಹಾನಿ

12:07 AM Oct 20, 2020 | mahesh |

ಬೆಂಗಳೂರು/ಹುಬ್ಬಳ್ಳಿ: ಉತ್ತರ ಕರ್ನಾಟಕದ ಪಾಲಿಗೆ ಸಂಕಟ ತಂದಿರುವ ಮಳೆ ಭಾರೀ ಪ್ರಮಾಣದ ನಷ್ಟಕ್ಕೆ ಕಾರಣವಾಗಿದೆ. ಸಿಎಂ ಯಡಿಯೂರಪ್ಪ ಅವರು ಅ. 21ರಂದು ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಪರಿಸ್ಥಿತಿ ಅವಲೋಕಿಸಲಿದ್ದಾರೆ.

Advertisement

ಒಂದೇ ವರ್ಷದಲ್ಲಿ ಇದು 2ನೇ ಬಾರಿಗೆ ಭಾರೀ ಪ್ರಮಾಣದಲ್ಲಿ ಮಳೆ ಮತ್ತು ನೆರೆ ಹಾನಿಯಾಗುತ್ತಿದೆ. ಮೊದಲ ಬಾರಿಗಿಂತಲೂ ಈ ಬಾರಿಯೇ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗುತ್ತಿದೆ. ಒಟ್ಟಾರೆ ನಷ್ಟ ಪ್ರಮಾಣ 15 ಸಾವಿರ ಕೋಟಿ ರೂ. ಮೀರುವ ಅಂದಾಜು ಇದೆ.

ಪ್ರಮುಖವಾಗಿ ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆ, ಮೂಲ ಸೌಕರ್ಯ ಹಾಳಾಗಿದೆ. ನೀರಿನ ಪ್ರಮಾಣ ತಗ್ಗಿದ ಅನಂತರ ಹಾನಿ, ನಷ್ಟದ ಸಮೀಕ್ಷೆ ನಡೆಯಲಿದ್ದು, ಆ ಬಳಿಕವಷ್ಟೇ ನಷ್ಟ ಪ್ರಮಾಣದ ನಿಖರ ವಿವರ ಗೊತ್ತಾಗಲಿದೆ. ಭೀಮಾನದಿ ಪಾತ್ರದಲ್ಲಿ ಸದ್ಯ 3,000 ಕೋಟಿ ರೂ.ನಷ್ಟು ಬೆಳೆ ನಷ್ಟವಾಗಿರುವ ಅಂದಾಜು ಇದೆ.

8,000 ಕೋ.ರೂ. ನಷ್ಟ ; ಇನ್ನೂ ಬಿಡುಗಡೆಯಾಗದ ಪರಿಹಾರ
ಮುಂಗಾರು ಆರಂಭವಾದಾಗಿನಿಂದ ಆಗಸ್ಟ್‌ವರೆಗೆ ಸುರಿದ ಭಾರೀ ಮಳೆ, ಪ್ರವಾಹದಿಂದಾಗಿ ಸುಮಾರು 8,000 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಕೇಂದ್ರ ತಂಡಕ್ಕೆ ರಾಜ್ಯ ಸರಕಾರ ವರದಿ ಸಲ್ಲಿಸಿದ್ದು, ಈವರೆಗೆ ಪರಿಹಾರ ಬಿಡುಗಡೆಯಾಗಿಲ್ಲ. ಎನ್‌ಡಿಆರ್‌ಎಫ್ ಮಾರ್ಗಸೂಚಿಯ ಅನ್ವಯ 628 ಕೋಟಿ ರೂ. ಪರಿಹಾರವಷ್ಟೇ ಸಿಗುವ ಅಂದಾಜು ಇದೆ.

117 ಹಾನಿಗೊಳಗಾದ, ಸ್ಥಳಾಂತರವಾದ ಗ್ರಾಮಗಳು (ಬಹುಪಾಲು)
43,158 ಸ್ಥಳಾಂತರಗೊಂಡ ಜನರು
217 ಕಾಳಜಿ ಕೇಂದ್ರಗಳು
36,631 ಆಶ್ರಯ ಪಡೆದವರು

Advertisement
Advertisement

Udayavani is now on Telegram. Click here to join our channel and stay updated with the latest news.

Next