Advertisement
ಕೃಷ್ಣಾ ನದಿಗೆ ಸುಮಾರು 81 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಮೂರೂ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.ರಾಜ್ಯದ ಗಡಿ ಭಾಗದ ಚಿಕ್ಕೋಡಿ, ನಿಪ್ಪಾಣಿ, ರಾಯಭಾಗ ಭಾಗದಲ್ಲಿ ಮಳೆ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ 2 ಅಡಿಯಷ್ಟು ಏರಿಕೆಯಾದರೆ ದೂಧಗಂಗಾ ಮತ್ತು ವೇದಗಂಗಾ ನದಿ ನೀರಿನ ಮಟ್ಟದಲ್ಲಿ 3 ಅಡಿಯಷ್ಟು ಹೆಚ್ಚಳವಾಗಿದೆ.
Related Articles
ದೂಧಗಂಗಾ ನದಿಗೆ ಅಪಾರ ಪ್ರಮಾಣದ ನೀರು ಬರುತ್ತಿರುವ ಪರಿಣಾಮ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದೇವಸ್ಥಾನ ಜಲಾವೃತಗೊಂಡಿದೆ. ದರ್ಶನಕ್ಕೆ ಭಕ್ತರು ಪರದಾಡುವಂತಾಗಿದೆ.
Advertisement
ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮಳೆ ಪ್ರಮಾಣ ತಗ್ಗಿದ್ದು ಜನರು ಉಸಿರಾಡುವಂತಾಗಿದೆ.
ಭಾರೀ ವಾಹನಗಳಿಗೆ ತಡೆ: ಗೋವಾಕ್ಕೆ ಸಾಗಣೆ ವ್ಯತ್ಯಯಬೆಳಗಾವಿ: ಧಾರಾಕಾರ ಮಳೆಯಿಂದ ಚೋರ್ಲಾ ಘಾಟಿ ಮೂಲಕ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಬೆಳಗಾವಿ-ಜಾಂಬೋಟಿ ಮಾರ್ಗದ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ಭಾರೀ ವಾಹನಗಳ ಸಂಚಾರ ತಡೆ ಹಿಡಿಯಲಾಗಿದೆ. ಹೀಗಾಗಿ ಗೋವಾಕ್ಕೆ ಹಾಲು-ಅಗತ್ಯ ವಸ್ತುಗಳ ಸಾಗಾಟದಲ್ಲಿ ವ್ಯತ್ಯಯವಾಗಿದೆ. ಗೋವಾಕ್ಕೆ ತರಕಾರಿ, ಹಾಲು, ಅಗತ್ಯ ವಸ್ತುಗಳು ಬೆಳಗಾವಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜಾಗುತ್ತವೆ. ಸುಮಾರು ಮೂರ್‍ನಾಲ್ಕು ದಿನಗಳಿಂದ ವಾಹನಗಳು ನಿಂತಲ್ಲೇ ಇವೆ. ಸೊರಬ: ಪ್ರವಾಹಕ್ಕೆ ಸಿಲುಕಿ ವ್ಯಕ್ತಿ ಸಾವು
ಸೊರಬ: ಶಿವಮೊಗ್ಗ ಜಿಲ್ಲೆ ಸೊರಬದ ದಂಡಾವತಿ ನದಿಗೆ ಮೀನು ಹಿಡಿಯಲು ಹೋದ ವಡ್ಡಿಗೇರಿ ಗ್ರಾಮದ ಯಲ್ಲಪ್ಪ (50) ಪ್ರವಾಹದಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ. ಶುಕ್ರವಾರ ಘಟನೆ ಸಂಭವಿಸಿದ್ದು, ಶನಿವಾರ ಬೆಳಗ್ಗೆ ಅಗ್ನಿಶಾಮಕ ಸಿಬಂದಿ ಹಾಗೂ ಸೊರಬದ ಮುಳುಗು ತಜ್ಞ ಸರ್ದಾರ್ ಖಾನ್ ಸತತ ಮೂರು ತಾಸು ಶೋಧ ನಡೆಸಿ ಮೃತದೇಹವನ್ನು ಪತ್ತೆಹಚ್ಚಿದರು.