ಮೈಸೂರು: ಜಿಲ್ಲಾದ್ಯಂತ ಕಳೆದ ಎರಡೂ ಮೂರು ದಿನಗಳಿಂದ ಜಿಟಿ ಜಿಟಿ ಮಳೆ, ಚುಮು ಚುಮು ಚಳಿ ಆವರಿಸಿದ್ದು, ಜನರು ಮನೆ ಬಿಟ್ಟು ಹೊರ ಬರಲಾಗದಂತಹ ವಾತಾವರಣ ಸೃಷ್ಟಿಯಾಗಿದೆ.
ಛತ್ರಿ, ಸ್ವೆಟರ್ ಹಾಕಿಕೊಂಡು ರಸ್ತೆಗೆ ಇಳಿಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಮೈಸೂರಿನಲ್ಲಿ ಮಡಿಕೇರಿ ಹಾಗೂ ಊಟಿಯ ವಾತಾವರಣ ನಿರ್ಮಾಣವಾಗಿದೆ. ದಿನವಿಡೀ ಸುರಿಯುತ್ತಿರುವ ಮಳೆಯಿಂದ ಜನಜೀವನ ತುಸು ಅಸ್ತವ್ಯಸ್ತವಾಗಿದ್ದು, ವಿವಿಧೆಡೆ ರಸ್ತೆಗಳು ಕೆಸರುಮಯವಾಗಿದ್ದು, ಓಡಾಡಲು ಕಿರಿಕಿರಿ ಅನುಭವಿಸುವಂತಾಗಿದೆ.
ಇದನ್ನೂ ಓದಿ:- ಪ್ರಾಮಾಣಿಕ ಇಲಾಖೆ ಎಂದರೆ ಅಂಚೆ: ಸಚಿವ ಶಿವರಾಮ ಹೆಬ್ಬಾರ್ ಬಣ್ಣನೆ
ಅಲ್ಲಲ್ಲಿ ವಿದ್ಯುತ್ ಕಂಬಗಳು ಬಿದ್ದು, ಸಂಪರ್ಕ ಕಡಿತವಾಗಿತ್ತು. ಮರಗಳು ಬಿದ್ದು ವಾಹನಗಳು ಸಂಪೂರ್ಣ ಜಖಂಗೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಕೊಯ್ಲಿಗೆ ಬಂದಿದ್ದ ರಾಗಿ ಮತ್ತಿತರ ಬೆಳೆಗಳು ನೆಲಕಚ್ಚಿವೆ. ಜಾನುವಾರುಗಳು ಕೊಟ್ಟಿಗೆಯಲ್ಲೇ ಕಟ್ಟುವಂತಾಗಿದೆ.