Advertisement

ಪ್ರಸಕ್ತ ವರ್ಷ ವಾಡಿಕೆ ಮಳೆ

12:30 AM Feb 26, 2019 | Team Udayavani |

ಹೊಸದಿಲ್ಲಿ: ಪ್ರಸಕ್ತ ವರ್ಷದಲ್ಲಿ ಮುಂಗಾರು ಸಾಮಾನ್ಯವಾಗಿರಲಿದ್ದು, ರೈತರು ಉತ್ತಮ ಮಳೆಯನ್ನು ನಿರೀಕ್ಷಿಸಬಹುದಾಗಿದೆ ಎಂದು ದೇಶದ ಏಕೈಕ ಖಾಸಗಿ ಹವಾಮಾನ ಪರಿವೀಕ್ಷಣಾ ಸಂಸ್ಥೆ “ಸ್ಕೈಮೆಟ್‌’ ಹೇಳಿದೆ. ಜೂನ್‌ನಿಂದ ಸತತ ನಾಲ್ಕು ತಿಂಗಳ ಅವಧಿಯ ಮುಂಗಾರಿನಲ್ಲಿ ವಾಡಿಕೆ ಮಳೆಯಾಗುವ ಸಂಭವ ಶೇ. 50ಕ್ಕಿಂತಲೂ ಅಧಿಕವಾಗಿದ್ದರೆ, ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಂಭಾವ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂದು ಸಂಸ್ಥೆ ತಿಳಿಸಿದೆ. ಕಳೆದ 50 ವರ್ಷಗಳ ಮುಂಗಾರಿನಲ್ಲಿ ಭಾರತದಲ್ಲಿ ಸಾಧಾರಣ ಮಳೆಯ ಪ್ರಮಾಣ ಶೇ. 96 ರಿಂದ 104ರ ವರೆಗಿದೆ. ಈ ಅವಧಿಯಲ್ಲಿ ಸರಾಸರಿ 89 ಸೆಂ.ಮೀ. ಮಳೆಯಾಗಿದೆ. ಈ ಬಾರಿ ಉತ್ತಮ ಮಳೆಯಾಗಿ ಅದರಿಂದ ಕೃಷಿ ವಲಯಕ್ಕೆ ಹೆಚ್ಚು ಲಾಭಕರವಾಗಲಿದೆ ಎಂಬುದು ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಜತಿನ್‌ ಸಿಂಗ್‌ ಅಭಿಮತ. ಭಾರತದ ಆರ್ಥಿಕಾಭಿವೃದ್ಧಿಗೆ ಮುಂಗಾರು ತನ್ನದೇ ಆದ ಕಾಣಿಕೆ ನೀಡುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next