Advertisement

ಕೈ ಕೊಟ್ಟ ಮಳೆ: ಒಣಗಿದ ಬೆಳೆ ಕಿತ್ತು ಹಾಕಿದ ರೈತ!

06:00 AM Aug 01, 2018 | Team Udayavani |

ಹೊಸಪೇಟೆ: ಮಳೆ ಕೈಕೊಟ್ಟು ಬಿತ್ತಿದ ಬೆಳೆಗಳೆಲ್ಲ ಒಣಗುತ್ತಿರುವುದರಿಂದ ಬೇಸರಗೊಂಡ ರೈತರು ಬೆಳೆಗಳನ್ನೆಲ್ಲ ಕಿತ್ತುಹಾಕಿದ್ದಾರೆ. “ದೀಪದ ಕೆಳಗೆ ಕತ್ತಲು’ ಎಂಬಂತೆ ಈ ಬಾರಿ ಭರ್ತಿಯಾಗಿರುವ ತುಂಗಭದ್ರಾ ಜಲಾಶಯದ ಅನತಿ ದೂರ ದಲ್ಲಿರುವ ಗ್ರಾಮದ ರೈತರು ನೀರಿಲ್ಲದೆ ಒಣಗುತ್ತಿರುವ ಬೆಳೆಯನ್ನು ಮಂಗಳವಾರ ಕಿತ್ತು ಹಾಕಿದರು. ತಾಲೂಕಿನ ರಾಜಾಪುರ, ಕಲ್ಲಹಳ್ಳಿ ಹಾಗೂ ಕಣವಿರಾಯ ದೇವಸ್ಥಾನದ ಸುತ್ತಮುತ್ತ ಸಾವಿರಾರು ಎಕರೆ
ಪ್ರದೇಶದಲ್ಲಿ ರೈತರು ಮೆಕ್ಕೆಜೋಳ, ಸೂರ್ಯಕಾಂತಿ, ಸಜ್ಜೆ, ರಾಗಿ, ನವಣೆ ಮುಂತಾದ ಬೆಳೆಗಳನ್ನು ಬೆಳೆದಿದ್ದರು. ಆದರೆ ನೀರಿಲ್ಲದೆ ಇವೆಲ್ಲ ಒಣಗುತ್ತಿದ್ದು, ಇದನ್ನು ನೋಡಲಾಗದೆ ರೈತರು ಲಕ್ಷಾಂತರ ರೂ. ಮೌಲ್ಯದ ಮೆಕ್ಕೆಜೋಳದ ಗಿಡ ಗಳನ್ನು ಕಿತ್ತು ಹಾಕಿದರು. ಕಳೆದ ಮೂರು ನಾಲ್ಕು ವರ್ಷಗ ಳಿಂದ ಮಳೆ-ಬೆಳೆಯಿಲ್ಲದೆ ಕಂಗಾಲಾಗಿದ್ದ ರೈತರು ಕಳೆದ ಜೂನ್‌ನಲ್ಲಿ ಒಂದೆರಡು ಬಾರಿ ಸುರಿದ ಮಳೆಯಿಂದ ಸಂತಸಗೊಂಡು ತಮ್ಮ ಭೂಮಿಗಳಲ್ಲಿ ಕೃಷಿ ಚಟುವಟಿಕೆ ಗಳನ್ನು ಆರಂಭಿಸಿ, ಬೆಳೆಗಳನ್ನು ಬೆಳೆಯಲು ಮುಂದಾದರು. ರೈತರಿಗೆ ಮಳೆ ಕೈಕೊಟ್ಟ ಪರಿಣಾಮ ತಾಲೂಕಿನ
ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಮೆಕ್ಕೆ ಜೋಳ, ಸೂರ್ಯಕಾಂತಿ, ಸಜ್ಜೆ, ರಾಗಿ, ನವಣೆ ಮುಂತಾದ ಬೆಳೆಗಳು ಒಣಗುತ್ತಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ಇದ ರಿಂದಾಗಿ ರೈತರು, ಆತಂಕಗೊಳಗಾಗಿದ್ದು, ಒಣಗಿದ ಬೆಳೆಗಳನ್ನು ಕೀಳುವ ಮೂಲ ಕ ಅಳಲು ತೋಡಿ
ಕೊಂಡರು. ಶಾಸಕ ಆನಂದ ಸಿಂಗ್‌ ಅವರು ಈ ಭಾಗದ ರೈತರ ಸಂಕ ಷ್ಟ ವನ್ನು ಅರಿತು ಕೂಡಲೇ ಏತ ನೀರಾವರಿ ಯೋಜನೆ ಜಾರಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next