ಢಾಕಾ : ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಯ ಪರಿಣಾಮವಾಗಿ ಈಶಾನ್ಯ ಬಾಂಗ್ಲಾದೇಶದಲ್ಲಿ ಸರಣಿ ಭೂಕುಸಿತಗಳು ಉಂಟಾಗಿದ್ದು ಕನಿಷ್ಠ 53 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತರಲಿಲ ಇಬ್ಬರು ಸೇನಾಧಿಕಾರಿಗಳು ಸೇರಿದ್ದಾರೆ.
ಭೂಕುಸಿತದಿಂದಾಗಿ ಅನೇಕರು ಮಣ್ಣಿನಡಿ ಸಿಲುಕಿದ್ದು ಮೃತರ ಸಂಖ್ಯೆ ಹೆಚ್ಚುವ ಭೀತಿ ಇದೆ ಎಂದು ಮೂಲಗಳು ತಿಳಿಸಿವೆ.
ಅತೀ ಹೆಚ್ಚು ಸಾವುಗಳು ರಂಗಮತಿ ಬೆಟ್ಟ ಪ್ರದೇಶದ ಜಿಲ್ಲೆಯಲ್ಲಿ ಸಂಭವಿಸಿದೆ. ಇಬ್ಬರು ಸೇನಾಧಿಕಾರಿಗಳು ಕೂಡ ಮಣ್ಣಿನಡಿ ಸಿಲುಕಿ ಮೃತಪಟಿಟದ್ದಾರೆ.
“ಈ ತನಕ ಇಬ್ಬರು ಸೇನಾಧಿಕಾರಿಗಳು ಮೃತಪಟ್ಟಿದ್ದು ಹಲವು ಸೇನಾ ಸಿಬಂದಿಗಳು ಗಾಯಗೊಂಡಿರುವುದನ್ನು ನಾವು ನಿಮಗೆ ದೃಢಪಡಿಸಬಲ್ಲವು’ ಎಂದು ಢಾಕಾದಲ್ಲಿ ಸೇನಾ ವಕ್ತಾರ ಹೇಳಿದ್ದಾರೆ.
ಜಡಿಮಳೆಯಿಂದಾಗಿ ಭೂಕುಸಿತ ಸಂಭವಿಸಿರುವ ಪ್ರದೇಶಗಳೆಂದರೆ ರಂಗಮತಿ, ಬಂದ್ರಬನ್ ಮತ್ತು ಚಿತ್ತಗಾಂಗ್ ಜಿಲ್ಲೆಗಳು ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಬಂದ್ರಬನ್ ನಲ್ಲಿ ಆರು ಮಂದಿ ಸತ್ತಿದ್ದಾರೆ.
ಭೂಕುಸಿತಗಳು ಸಂಭವಿಸಿದಾಗ ನಡು ರಾತ್ರಿ ಜನರು ನಿದ್ದೆಯಲ್ಲಿದ್ದರು; ಹಾಗಾಗಿ ಹೆಚ್ಚಿನ ಸಾವು ಸಂಭವಿಸಿದೆ ಎಂದು ರಕ್ಷಣಾ ಕಾರ್ಯಕರ್ತರು ಹೇಳಿದ್ದಾರೆ.