Advertisement
ಕಡಬ, ನಿಂತಿಕಲ್ಲು, ಕೊಂಬಾರು, ಉಬರಡ್ಕ, ಸುಳ್ಯ, ಕುಂಬ್ರ, ಕೆಯ್ಯೂರು, ಮಾಡಾವು, ಬಡಕ್ಕೋಡಿ, ಕಡಿರುದ್ಯಾವರ ಸೇರಿದಂತೆ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕುಗಳ ವಿವಿಧೆಡೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
Related Articles
ಮೂಡುಬಿದಿರೆ: ಸೋಮವಾರ ರಾತ್ರಿ ಮೂಡುಬಿದಿರೆ ಪರಿಸರದಲ್ಲಿ ಗುಡುಗು ಸಿಡಿಲಬ್ಬರ ಸಹಿತ ಜಡಿಮಳೆ ಸುರಿಯಿತು. ಪೇಟೆಯಲ್ಲಿ, ಆಳ್ವಾಸ್, ಸ್ವರಾಜ್ಯ ಮೈದಾನ,ಬೋವಿಕೇರಿಗೆ ಸಾಗುವ ರಸ್ತೆ ಮೊದಲಾದೆಡೆ ಚರಂಡಿಗಳ ಒಳಗೆ ಮಳೆ ನೀರು ಹೋಗ ಲಾಗದಂತೆ ಕಾಮಗಾರಿ ನಡೆಸಿರುವ ಶಂಕೆ ಹುಟ್ಟುವಂತೆ ಮಳೆನೀರೆಲ್ಲ ಪ್ರವಾಹದೋಪಾಡಿ ರಸ್ತೆಯಲ್ಲಿಯೇ ಹರಿಯುವಂತಾಗಿದೆ. ರಸ್ತೆ ಬದಿಗಳೆಲ್ಲ ಕೊರೆದು ಹೋಗುವ ಸ್ಥಿತಿ ಇದೆ. ವಿದ್ಯುತ್ ಪೂರೈಕೆ ಆತಂಕಿತವಾಗಿದೆ.
Advertisement
ಶಾಲೆಗೆ ಸಿಡಿಲು ಬಡಿದು ಹಾನಿಸಿದ್ದಾಪುರ: ನಂಚಾರು ಗ್ರಾಮದ ಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ಸಂಜೆ ವೇಳೆ ಸಿಡಿದ ಗುಡುಗು ಮಿಂಚಿನ ಪರಿಣಾಮ ಶಾಲೆಯ ವಿದ್ಯುತ್ ಸಂಪರ್ಕ, ಉಪಕರಣಗಳು, ಗೋಡೆ, ಶೌಚಾಲಯದ ಕಟ್ಟಡಕ್ಕೆ ಹಾನಿ ಸಂಭವಿಸಿದೆ. ಬೆಳ್ಳಾರೆ ಪರಿಸರದಲ್ಲಿ ಹಾನಿ
ಸುಳ್ಯ: ಬೆಳ್ಳಾರೆ ಪರಿಸರದಲ್ಲಿ ಸೋಮವಾರ ಸಂಜೆ ಗುಡುಗು, ಗಾಳಿ ಸಹಿತ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಹಾನಿ ಸಂಭವಿಸಿದೆ. ಬೆಳ್ಳಾರೆ ಭಾಗದಲ್ಲಿ ಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳಿಗೆ ಹಾನಿಯಾ ಗಿದೆ. ಕೆಲವು ಮನೆಗಳ ವಿದ್ಯುತ್ ಮೀಟರ್‌ಗಳಿಗೂ ಹಾನಿಯಾಗಿದೆ. ಬೆಳ್ಳಾರೆ ಪರಿಸರದಲ್ಲಿ ರಾತ್ರಿ ವಿದ್ಯುತ್ ವ್ಯತ್ಯಯವಾಗಿತ್ತು. ರವಿವಾರ ಸಂಜೆ ಗಾಳಿ ಮಳೆಗೆ ಪೆರುವಾಜೆ ಭಾಗದಲ್ಲಿ ಹಲವೆಡೆ ಅಡಿಕೆ ಮರಗಳು, ವಿದ್ಯುತ್ ಕಂಬ ಗಳಿಗೆ ಹಾನಿಯಾಗಿದೆ. ಬೆಳ್ಳಾರೆಯ ಹಲವೆಡೆ ಚರಂಡಿ ಸಮಸ್ಯೆಯಿಂದ ಮಳೆ ನೀರು ಭಾರೀ ಪ್ರಮಾಣದಲ್ಲಿ ರಸ್ತೆಯಲ್ಲೇ ಹರಿಯಿತು.